ನವದೆಹಲಿ: ಎಪ್ರಿಲ್ 11 ರಿಂದ ಆರಂಭಗೊಳ್ಳಲಿರುವ 2019ರ ಲೋಕಸಭಾ ಚುನಾವಣೆಯಲ್ಲಿ 18-19 ನಡುವಿನ ಸುಮಾರು 1.5 ಕೋಟಿ ಯುವ ಜನತೆ ಮತದಾನವನ್ನು ಮಾಡಲು ಅರ್ಹರಾಗಿದ್ದಾರೆ. ಒಟ್ಟು ಮತದಾರರಲ್ಲಿ ಶೇ.1.66ರಷ್ಟು ಪ್ರಮಾಣವನ್ನು ಇವರು ಹೊಂದಿದ್ದಾರೆ.
ಈ ವರ್ಷದ ಜನವರಿ 1ಕ್ಕೆ 18 ವರ್ಷ ಪೂರೈಸಿದ ಯುವಕ ಯುವತಿಯರು ಮತದಾನಕ್ಕೆ ನೋಂದಾಯಿಸಿಕೊಂಡಿದ್ದರೆ ಈ ಲೋಕಸಭಾ ಚುನಾವಣೆಯಲ್ಲಿ ಮತದಾನವನ್ನು ಮಾಡಬಹುದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಚುನಾವಣಾ ಆಯೋಗ, ‘2019ರ ಜನವರಿಯಲ್ಲಿ ಪ್ರಟಕವಾದ ಇ-ರೋಲ್ಸ್ ಅನ್ವಯ ದೇಶದ ಒಟ್ಟು ಮತದಾರರ ಸಂಖ್ಯೆ 900 ಮಿಲಿಯನ್, 2014ರಲ್ಲಿ 814.5 ಮಿಲಿಯನ್ ಆಗಿತ್ತು. 84 ಮಿಲಿಯನ್ ಮತದಾರರ ಸಂಖ್ಯೆ ಹೆಚ್ಚಾಗಿದೆ, ಸುಮಾರು 15 ಮಿಲಿಯನ್ ಮತದಾರರು 18-19 ವಯಸ್ಸಿನವರು. ಒಟ್ಟು ಮತದಾರರ ಪೈಕಿ ಇವರ ಪ್ರಮಾಣ ಶೇ.1.66ರಷ್ಟಿದೆ’ ಎಂದಿದೆ.
2012ರಿಂದ ತೃತೀಯ ಲಿಂಗಿಗಳಿಗೂ ‘ಇತರರು’ ಕೆಟಗರಿಯಡಿಯಲ್ಲಿ ಮತದಾನ ಮಾಡುವ ಅವಕಾಶವನ್ನು ನೀಡುತ್ತಿದೆ. ಈ ಬಾರಿ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವ ತೃತೀಯ ಲಿಂಗಿಗಳ ಸಂಖ್ಯೆ 38,325 ಆಗಿದೆ.
ಸಂಸತ್ತು ಜನರ ಪ್ರತಿನಿಧಿತ್ವ ಕಾಯ್ದೆ 1950ಕ್ಕೆ ತಿದ್ದುಪಡಿಯನ್ನು ತಂದ ಹಿನ್ನಲೆಯಲ್ಲಿ ಅನಿವಾಸಿ ಭಾರತೀಯರಿಗೂ ಮತದಾನ ಮಾಡಲು ಅವಕಾಶ ಸಿಕ್ಕಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ನೋಂದಣಿ ಮಾಡಿಕೊಂಡಿರುವ ಅನಿವಾಸಿ ಭಾರತೀಯ ಮತದಾರರ ಸಂಖ್ಯೆ 71,731 ಆಗಿದೆ.
ಈ ಬಾರಿ ದೇಶದ 1,035,918 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ, 2014ರಲ್ಲಿ 928,000 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿತ್ತು.
ಚುನಾವಣಾ ದಿನಾಂಕ ನಿಗದಿಯಾದ ಬಳಿಕ ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ‘ಪ್ರಜಾಪ್ರಭುತ್ವದ ಹಬ್ಬ ಚುನಾವಣೆ ಆಗಮಿಸಿದೆ. ಸಕ್ರಿಯ ಭಾಗವಹಿಸುವಿಕೆಯ ಮೂಲಕ 2019ರ ಲೋಕಸಭಾ ಚುನಾವಣೆಯನ್ನು ಸಮೃದ್ಧಗೊಳಿಸುವಂತೆ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ. ಈ ಚುನಾವಣೆ ಐತಿಹಾಸಿಕವಾಗಿ ಹೊರಹೊಮ್ಮಲಿದೆ ಎಂದು ನಂಬಿದ್ದೇನೆ. ಮುಖ್ಯವಾಗಿ ನವ ಮತದಾರರಿಗೆ ದಾಖಲೆಯ ಮಟ್ಟದಲ್ಲಿ ಮತ ಹಾಕಿ ಎಂದು ಕರೆ ನೀಡುತ್ತೇನೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.