ಬೆಳ್ತಂಗಡಿ : ಕಳೆದ ಕೆಲ ದಿನಗಳಿಂದ ತಾಲೂಕಿನಾದ್ಯಂತ ಧಾರಾಕಾರವಾಗಿ ಸುರಿವ ಮಳೆ, ಬೀಸುತ್ತಿರುವ ಗಾಳಿಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿ ವಿವಿದೆಡೆ ಹಾನಿಗೊಂಡಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮಂಗಳವಾರ ಬೀಸಿದ ಗಾಳಿಗೆ ಕನ್ಯಾಡಿ ಸಮೀಪದ ಮತ್ತಿಲಬೈಲು ಎಂಬಲ್ಲಿ ವಿದ್ಯುತ್ ಕಂಬ ಮುರಿದು ಬಿದ್ದು ಮನೆ ಪಕ್ಕದ ಶೆಡ್ಗೆ ಹಾನಿಯಾಗಿದೆ. ಈ ಭಾಗದಲ್ಲಿ ಸುಮಾರು ನಾಲ್ಕೈದು ವಿದ್ಯುತ್ ಕಂಬಗಳು ಮುರಿದಿದೆ. ಅಲ್ಲದೆ ಸೋಮವಾರ ಸಂಜೆ ಬೀಸಿದ ಗಾಳಿಗೆ ಕನ್ಯಾಡಿ ಶಾಲೆಯ ಶೌಚಾಲಯದ ಮೇಲೆ ಮರ ಬಿದ್ದು ಹಾನಿಗೊಂಡಿದೆ.
ತಾಲೂಕಿನ ವಿವಿದೆಡೆಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದು ತುಂಡಾಗಿದೆ. ಕೆಲವೆಡೆ ಮನೆಗಳ ಮೇಲೆ ಬಿದ್ದು ಹಾನಿಗೊಂಡಿದೆ. ಕಡಿರುದ್ಯಾವರ ಬಳಿ ಬೈಕ್ನಲ್ಲಿ ಹೋಗುತ್ತಿದ್ದಾಗ ಮರ ಬಿದ್ದು ಸವಾರ ಗಂಭೀರ ಗಾಯ ಗೊಂಡ ಘಟನೆಯೂ ನಡೆದಿದೆ. ಕಳೆದೊಂದು ವಾರದಿಂದ ತಾಲೂಕಿನ ಗ್ರಾಮೀಣ ಪ್ರದೇಶ ವಿದ್ಯುತ್ ಕೈಕೊಟ್ಟಿದೆ.
ಈಗಾಗಲೇ ತಾಲೂಕಿನಾದ್ಯಂತ ಸುಮಾರು50 ರಿಂದ 60 ವಿದ್ಯುತ್ ಕಂಬಗಳು ಗಾಳಿಯ ಅಬ್ಬರಕ್ಕೆ ಮುರಿದಿದೆ. ಇಲಾಖೆಗೆ ಅಂದಾಜು 60 ಲಕ್ಷ ರೂ. ನಷ್ಟ ಸಂಭವಿಸಿದೆ. ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ವಿದ್ಯುತ್ ಗುತ್ತಿಗೆದಾರರು ನಾನಾ ಬೇಡಿಕೆಯನ್ನು ಮುಂದಿರಿಸಿಕೊಂಡು ಮುಷ್ಕರ ಹೂಡಿದ್ದಾರೆ. ಈ ಕಾರಣಗಳಿಂದ ಹಾನಿಗೊಳಗಾದ ಕಂಬಗಳ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.