ನವದೆಹಲಿ: ಭಾರತೀಯ ಸೇನೆಯ ಬಲವನ್ನು ಮತ್ತಷ್ಟು ವೃದ್ಧಿಪಡಿಸುವ ಉದ್ದೇಶದೊಂದಿಗೆ ರಕ್ಷಣಾ ಸಚಿವಾಲಯವು 114 ಧನುಷ್ ಆರ್ಟಿಲರಿ ಗನ್ಗಳನ್ನು ಮೇಕ್ ಇನ್ ಇಂಡಿಯಾದಡಿ ಉತ್ಪಾದನೆ ಮಾಡಲು ನಿರ್ಧರಿಸಿದೆ.
ಆರ್ಡನ್ಸ್ ಫ್ಯಾಕ್ಟರಿ ಬೋರ್ಡ್(ಒಎಫ್ಬಿ) ಈ ಗನ್ಗಳನ್ನು ಉತ್ಪಾದನೆ ಮಾಡಲಿದೆ ಮತ್ತು ಇದು ಭಾರತದಲ್ಲಿ ಉತ್ಪಾದನೆಗೊಳ್ಳುತ್ತಿರುವ ಮೊದಲ ಇಂತಹ ಲಾಂಗ್ ರೇಂಜ್ನ ಗನ್ ಆಗಲಿದೆ. ಈ ಗನ್ NATO 155mm ammunition ಫೈಯರ್ ಮಾಡಲಿದೆ ಮತ್ತು ಬೈ ಮಾಡ್ಯುಲರ್ ಚಾರ್ಜ್ ಸಿಸ್ಟಮ್ಗೆ ಹೊಂದಿಕೆಯಾಗಲಿದೆ, ಇದರಿಂದ ಅದರ ರೇಂಜ್ ಹೆಚ್ಚಾಗಲಿದೆ.
2018ರ ಜೂನ್ನಲ್ಲಿ ಈ ಆರ್ಟಿಲರಿ ಗನ್ನನ್ನು ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದೆ.
ರಕ್ಷಣಾ ನೇಮಕಾತಿ ಮಂಡಳಿಯ ಪ್ರಕಟನೆಯ ಪ್ರಕಾರ, ಈ ಗನ್ inertial navigation ಆಧಾರಿತ ದೃಶ್ಯೀಕರಣ ವ್ಯವಸ್ಥೆ, ಹಗಲು ಮತ್ತು ರಾತ್ರಿ ನೇರ ಫೈಯರಿಂಗ್ ವ್ಯವಸ್ಥೆ, ಆನ್ಬೋರ್ಡ್ ಬ್ಯಾಲೆಸ್ಟಿಕ್ ಕಾಂಪ್ಯುಟಿಶನ್, ಆಟೋ ಲೇಯಿಂಗ್ ಫೆಸಿಲಿಟಿಗಳನ್ನು ಒಳಗೊಳ್ಳಲಿದೆ.
ಇದು ಸ್ವಯಂ ಚಾಲಿತವಾಗಿದ್ದು, ಪರ್ವತ ಭೂಪ್ರದೇಶ, ಮರುಭೂಮಿಗಳು ಮತ್ತು ಇತರ ಪರೀಕ್ಷಾ ಸ್ಥಳಗಳಲ್ಲಿ ಸುಲಭವಾಗಿ ಇದನ್ನು ನಿಯೋಜನೆಗೊಳಿಸಬಹುದಾಗಿದೆ.
ಈ ಗನ್ ತೆಲಂಗಾಣದ ಮೆಡಕ್ ಜಿಲ್ಲೆಯಲ್ಲಿ ತಯಾರಿಸಲಾಗುತ್ತದೆ ಮತ್ತು ಆರ್ಡನ್ಸ್ ಫ್ಯಾಕ್ಟರಿ ಬೋರ್ಡ್ ಜೊತೆಗೆ ಭಾರತೀಯ ಸೇನೆಯನ್ನು ಡಿಆರ್ಡಿಓ, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಇತ್ಯಾದಿ ಸಂಸ್ಥೆಗಳು ಅಭಿವೃದ್ಧಿಗೊಳಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.