ನವದೆಹಲಿ: ವಿಶೇಷ ದಿನಗಳಿಗೆ ಅತ್ಯಂತ ವಿಭಿನ್ನವಾಗಿ ಡೂಡಲ್ ರಚಿಸುವ ಮೂಲಕ ಇಂಟರ್ನೆಟ್ ದೈತ್ಯ ಗೂಗಲ್ ಎಲ್ಲರ ಗಮನವನ್ನು ಸೆಳೆಯುತ್ತದೆ. ವಿಶ್ವ ಮಹಿಳಾ ದಿನಾಚರಣೆಯಾದ ಇಂದು ಕೂಡ ಅತ್ಯಂತ ವಿಭಿನ್ನವಾದ ಡೂಡಲ್ ವಿನ್ಯಾಸದೊಂದಿಗೆ ಅದು ಮಹಿಳೆಯರಿಗೆ ಶುಭ ಕೋರಿದೆ.
11 ಭಾಷೆ, 11 ಬಣ್ಣಗಳಲ್ಲಿ ಇಂದಿನ ಡೂಡಲ್ ಚಿತ್ರಿತಗೊಂಡಿದೆ. ಗೂಗಲ್ ಎಂದು ಬರೆದ ಮಧ್ಯದ ಬಾಕ್ಸ್ನ ಸುತ್ತ 11 ಬಣ್ಣಗಳ ಬಾಕ್ಸ್ ಇದ್ದು ಇದರಲ್ಲಿ ಹಿಂದಿ, ಉರ್ದು, ಬಂಗಾಳಿ ಸೇರಿದಂತೆ ಇತರ ಭಾಷೆಗಳಲ್ಲಿ ಮಹಿಳೆ ಎಂಬ ಅರ್ಥ ಬರುವ ಪದವನ್ನು ಬರೆಯಲಾಗಿದೆ.
ಈ ಬಾಕ್ಸ್ಗಳಲ್ಲಿ ಯಾವುದಾದರೂ ಒಂದನ್ನು ಕ್ಲಿಕ್ ಮಾಡಿದಾಗ, ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರು ಹೇಳಿರುವಂತಹ 14 ಪ್ರೇರಣಾದಾಯಕ ಸಂದೇಶಗಳು ನಮಗೆ ಕಾಣಿಸಿಕೊಳ್ಳುತ್ತವೆ. ಭಾರತೀಯರಾದ ಮೇರಿಕೋಮ್ ಮತ್ತು ಎನ್.ಎಲ್ ಬೊನೋ ಜೈಫನ್ ಅವರುಗಳ ಸ್ಪೂರ್ತಿದಾಯಕ ಸಂದೇಶವನ್ನೂ ಇದು ಒಳಗೊಂಡಿದೆ.
‘ನೀನು ದುರ್ಬಲಳು ಎಂದು ಹೇಳಬೇಡ, ಯಾಕೆಂದರೆ ನೀನು ಹೆಣ್ಣು’ ಎಂದು ಮೇರಿಕೋಮ್ ಹೇಳಿರುವ ಸಾಲನ್ನು ಇಲ್ಲಿ ಹಾಕಲಾಗಿದೆ.
‘ನಿರಾಸೆಗಳು ನಮ್ಮನ್ನು ಪ್ರವೇಶಿಸಲು ಬಿಡುವುದಕ್ಕೆ ನಾವು ಅತ್ಯಂತ ಅಮೂಲ್ಯರು’ ಎಂಬ ಜೆಫೈನ್ ಅವರ ಸಾಲುಗಳನ್ನು ಹಾಕಲಾಗಿದೆ. ಇವರು ಚೆನ್ನೈನವರಾಗಿದ್ದು, ಮೊದಲ ಅಂಧ ಭಾರತೀಯ ವಿದೇಶಿ ಸೇವಾ ಅಧಿಕಾರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.