ವಾಷಿಂಗ್ಟನ್: ಅಮೆರಿಕಾ ಪಾಕಿಸ್ಥಾನದ ವಿರುದ್ಧ ಮತ್ತೊಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಪಾಕಿಸ್ಥಾನಿಯರಿಗೆ ನೀಡುವ ವೀಸಾ ಮಾನ್ಯತೆಯನ್ನು 5 ವರ್ಷದಿಂದ 12 ತಿಂಗಳುಗಳಿಗೆ ಇಳಿಕೆ ಮಾಡಿದೆ. ಅಂದರೆ ಶೇ.400ರಷ್ಟು ಕಡಿಮೆ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇಸ್ಲಾಮಾಬಾದ್ನಲ್ಲಿರುವ ಯುಎಸ್ ರಾಯಭಾರ ಕಚೇರಿಯು ಇತರ ಕೆಟಗರಿಗಳಲ್ಲಿನ ವೀಸಾ ಶುಲ್ಕವನ್ನೂ ಹೆಚ್ಚಳ ಮಾಡಿದೆ. ಇದರಿಂದಾಗಿ ಪಾಕಿಸ್ಥಾನದ ನಾಗರಿಕರಿಗೆ ಯುಎಸ್ ಪ್ರಯಾಣ ಇನ್ನು ಮುಂದೆ ದುಬಾರಿಯಾಗಲಿದೆ. ಪಾಕಿಸ್ಥಾನವು ಕೆಲವು ವೀಸಾ ಕೆಟಗರಿಗಳಿಗೆ ತನ್ನ ವೀಸಾ ನಿಯಮವನ್ನು ಉದಾರೀಕರಣಗೊಳಿಸಲು ವಿಫಲವಾದ ಹಿನ್ನಲೆಯಲ್ಲಿ, ಪ್ರತ್ಯುತ್ತರವಾಗಿ ಅಮೆರಿಕಾ ಯುಎಸ್ ಇದೇ ರೀತಿಯ ವೀಸಾ ಕೆಟಗರಿಗಳಲ್ಲಿ ವೀಸಾ ಮಾನ್ಯತೆಯ ಅವಧಿಯನ್ನು ಕಡಿಮೆಗೊಳಿಸಿದೆ ಮತ್ತು ವೀಸಾ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ.
ಪಾಕಿಸ್ಥಾನವು ಅಮೆರಿಕಾದ ದೀರ್ಘಕಾಲದ ಮಿತ್ರರಾಷ್ಟ್ರವಾಗಿತ್ತು, ಆದರೀಗ ವಿಶ್ವವ ಮಟ್ಟದಲ್ಲಿ ಮೂಲೆಗುಂಪಾಗಿರುವ ಪಾಕಿಸ್ಥಾನವನ್ನು ಅಮೆರಿಕಾ ದೂರವಿಡುವ ಪ್ರಯತ್ನ ಮಾಡುತ್ತಿದೆ. ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಗಳು ನಡೆಯದಂತೆ ನೋಡಿಕೊಳ್ಳುವ ಸಲುವಾಗಿ ಆ ದೇಶಕ್ಕೆ ನೀಡುತ್ತಿದ್ದ ಅನುದಾನವನ್ನೂ ಕುಗ್ಗಿಸಿತು.
ಇತ್ತೀಚಿನ ವರ್ಷಗಳಲ್ಲಿ, ಪಾಕಿಸ್ಥಾನವು ಭಯೋತ್ಪಾದಕ ಗುಂಪುಗಳಿಗೆ ನಿರಂತರ ಬೆಂಬಲವನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯದಿಂದ ಹೆಚ್ಚಿನ ಟೀಕೆಗಳನ್ನು ಎದುರಿಸುತ್ತಿದೆ. ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ಥಾನ ಎದುರಿಸುತ್ತಿರುವ ಖಂಡನೆಗಳು ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.