ನವದೆಹಲಿ: ಭಾರತೀಯ ನೌಕಾ ಸೇನೆಯು ತನ್ನ ಎರಡನೇ ಸ್ಕಾರ್ಪನ್ ಕ್ಲಾಸ್ ಜಲಾಂತಗಾರ್ಮಿ ಐಎನ್ಎಸ್ ಖಂಡೇರಿಯನ್ನು ಮುಂದಿನ ತಿಂಗಳು ಸೇರ್ಪಡೆಗೊಳಿಸಲಿದೆ.
ಐಎನ್ಎಸ್ ಖಂಡೇರಿಯವನ್ನು ಈಗಾಗಲೇ ಸಮುದ್ರದಲ್ಲಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಲಾಗಿದೆ. 2017ರಿಂದಲೇ ಇದರ ಪರೀಕ್ಷೆ ಆರಂಭಗೊಂಡಿದೆ. ಇದಾದ ಬಳಿಕ ಐಎನ್ಎಸ್ ಕಾರಂಜ್ನ್ನು ಈ ವರ್ಷದ ಅಂತ್ಯದ ವೇಳೆಗೆ ನೌಕೆಗೆ ಸೇರ್ಪಡೆಗೊಳಿಸಲಾಗುತ್ತಿದೆ. ಇದು ಪ್ರಸ್ತುತ ಸಮುದ್ರದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡುತ್ತಿದೆ.
ನೌಕಾಪಡೆಯ ಕಣ್ಗಾವಲು ಕರ್ತವ್ಯದಲ್ಲಿ ಐಎನ್ಎಸ್ ಖಂಡೇರಿ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ.
ತನ್ನ ಸಮುದ್ರ ಭಾಗದಲ್ಲಿ ಭಾರತದ ಐಎನ್ಎಸ್ ಕಲವರಿಯನ್ನು ನೋಡಿರುವುದಾಗಿ ಪಾಕಿಸ್ಥಾನ ಆರೋಪ ಮಾಡಿದ ಬಳಿಕ ಐಎನ್ಎಸ್ ಖಂಡೇರಿಯನ್ನು ನಿಯೋಜನೆಗೊಳಿಸುವ ನಿರ್ಧಾರವನ್ನು ನೌಕೆ ಪಡೆದುಕೊಂಡಿರುವುದು ಅತ್ಯಂತ ಮಹತ್ವದ್ದಾಗಿದೆ.
ಪಾಕಿಸ್ಥಾನದ ಆರೋಪವನ್ನು ಭಾರತೀಯ ನೌಕೆ ಅಲ್ಲಗೆಳೆದಿದ್ದು, ಪಾಕಿಸ್ಥಾನದ ಇಂತಹ ಕುತಂತ್ರಕ್ಕೆ ನಾವು ಬಲಿಯಾಗುವುದಿಲ್ಲ, ನಮ್ಮ ನೀರಿನಲ್ಲಿ ನಮ್ಮ ಜಲಾಂತಗಾರ್ಮಿಗಳನ್ನು ನಿಯೋಜಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಮುದ್ರ ಮಾರ್ಗದ ಮೂಲಕ ಭಯೋತ್ಪಾದಕರನ್ನು ಭಾರತದೊಳಕ್ಕೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ನೌಕೆ ಇತ್ತೀಚಿಗೆ ಹೇಳಿತ್ತು. ಈ ಹಿನ್ನಲೆಯಲ್ಲಿ ಅದು ಸಮುದ್ರ ಕಣ್ಗಾವಲನ್ನು ಚುರುಕುಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.