ನವದೆಹಲಿ: ಭಾರತೀಯ ರಕ್ಷಣಾ ಪಡೆಗಳು ಶೀಘ್ರದಲ್ಲೇ ಇಸ್ರೇಲ್ನ ಅತ್ಯಾಧುನಿಕ ಹೆಲ್ಮೆಟ್ನ್ನು ಪಡೆಯಲಿವೆ. ಈ ಹೆಲ್ಮೆಟ್ ಕಾರ್ಯಾಚರಣಾ ದೃಶ್ಯಗಳನ್ನು ನೋಡುವ ಅತ್ಯಾಧುನಿಕ ಉಪಕರಣ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ ಸ್ಟಿಸ್ಟಮ್/ ಹೆಲ್ಮೆಟ್ ಪಾಯಿಂಟಿಂಗ್ ಸಿಸ್ಟಮ್ಗಳನ್ನು ಒಳಗೊಂಡಿದೆ. ವಾಯುಸೇನೆಯ ಯೋಧರಿಗೆ ಈ ಹೆಲ್ಮೆಟ್ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಫೆ.20ರಿಂದ 24ರವರೆಗೆ ಬೆಂಗಳೂರಿನಲ್ಲಿ ಜರುಗಿದ ಏರೋ ಇಂಡಿಯಾದಲ್ಲಿ ನವರತ್ನ ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಯುನಿಟ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಇಸ್ರೇಲಿನ ಎಲ್ಬಿಟ್ ಸಿಸ್ಟಮ್ಸ್ ಲಿಮಿಟೆಡ್ಗಳು ಭಾರತೀಯ ನೌಕೆ ಮತ್ತು ಇತರ ಶಸ್ತ್ರಾಸ್ತ್ರ ಪಡೆಗಳ ಹೆಲಿಕಾಫ್ಟರ್ ಪೈಲೆಟ್ಗಳಿಗೆ ಹೆಲ್ಮೆಟ್ ಉತ್ಪಾದನೆ ಮಾಡುವ ಸಲುವಾಗಿ ತಾಂತ್ರಿಕ ಸಹಯೋಗ ಒಪ್ಪಂದವನ್ನು ಮಾಡಿಕೊಂಡಿದೆ.
ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ ಸ್ಟಿಸ್ಟಮ್ನ ಈ ಹೆಲ್ಮೆಟ್, ರಾತ್ರಿ ಹಾರಾಟದ ವೇಳೆ ಸ್ಪಷ್ಟವಾಗಿ ಕಾಣುವಂತಹ ನೈಟ್ ವಿಶನ್ ಗಾಗಲ್ಸ್, ರಾತ್ರಿ ಮತ್ತು ಹಗಲು ಕಲರ್ ಡಿಸ್ಪ್ಲೇ, 3ಡಿ ಸಿಂಬೋಲಾಜಿ, ಹೆಡ್ ಟ್ರ್ಯಾಕಿಂಗ್, ಸೆನ್ಸಾರ್, ವೆಪನ್ ಕೂಯಿಂಗ್ ಇತ್ಯಾದಿ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ.
ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ ಸ್ಟಿಸ್ಟಮ್ ಹೆಲಿಕಾಫ್ಟರ್ನ ಎತ್ತರ, ಪ್ಲಾಟ್ಫಾರ್ಮ್ ಮಾಹಿತಿ, ಮಿಶನ್ ಡಾಟಾ, ಟಾರ್ಗೆಟ್ ಮಾಹಿತಿಯನ್ನು ಡಿಸ್ಪ್ಲೇ ಮಾಡಲು ಅವಕಾಶ ಕಲ್ಪಿಸಿಕೊಡುತ್ತದೆ. ಮಾತ್ರವಲ್ಲದೇ, ಕಡಿಮೆ ಗೋಚರಿಸುವಿಕೆಯ ಲ್ಯಾಂಡಿಂಗ್ ಮತ್ತು ಟೇಕ್ ಆಫ್, ವೆಪನ್ ಮ್ಯಾನೇಜ್ಮೆಂಟ್, ರಾತ್ರಿ ಮತ್ತು ಹಗಲು ವೇಳೆಯ ಸಿಂಥೆಟಿಕ್ ವಿಶನ್ಗಳನ್ನೂ ವೃದ್ಧಿಸುತ್ತದೆ. ಕಾರ್ಯಾಚರಣೆಯ ಅಂಕಿ ಅಂಶಗಳು, ಎದುರಾಳಿಯ ಮಾಹಿತಿ ಮುಂತಾದ ಸವಲತ್ತುಗಳಿವೆ.
ಭಾರತ ಇತ್ತೀಚಿಗೆ ನಡೆಸಿದ ವೈಮಾನಿಕ ದಾಳಿಯಂತಹ ಕಾರ್ಯಾಚರಣೆಗಳಲ್ಲಿ ಇಂತಹ ಹೆಲ್ಮೆಟ್ಗಳು ಸೈನಿಕರಿಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ವಾಯುಸೇನೆಯ ಪೈಲೆಟ್ಗಳಿಗೆ ಇನ್ನು ಹೆಚ್ಚಿನ ಶಕ್ತಿ ತುಂಬುವ ಸಲುವಾಗಿ ಹೊಸ ಹೆಲ್ಮೆಟ್ಗಳನ್ನು ಸಿದ್ಧಪಡಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.