ನವದೆಹಲಿ: ಇಂದಿನ ದಿನ ಮಹಿಳೆಯರಿಗೆ ಅರ್ಪಿತಗೊಂಡ ದಿನ. ಪ್ರತಿ ವರ್ಷ ಮಾರ್ಚ್ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವಾರು ಗಣ್ಯರು ಮಹಿಳೆಯರು ಈ ಸಮಾಜಕ್ಕೆ ನೀಡುತ್ತಿರುವ ಅನನ್ಯ ಕೊಡುಗೆಗಳನ್ನು ಸ್ಮರಿಸಿಕೊಂಡಿದ್ದಾರೆ.
ಟ್ವಿಟ್ ಮಾಡಿರುವ ಮೋದಿಯವರು, ‘ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದು ನಾವು ನಮ್ಮ ಅದಮ್ಯ ನಾರಿಶಕ್ತಿಗೆ ಸೆಲ್ಯೂಟ್ ನೀಡುತ್ತೇವೆ. ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವ ಹಲವಾರು ನಿರ್ಧಾರಗಳನ್ನು ನಾವು ತೆಗೆದುಕೊಂಡಿದ್ದೇವೆ ಎಂಬುದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತೇವೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ನೀಡುತ್ತಿರುವ ಅಭೂತಪೂರ್ವ ಕೊಡುಗೆಗಳ ಬಗ್ಗೆ ಪ್ರತಿ ಭಾರತೀಯರಿಗೆ ಹೆಮ್ಮೆ ಇದೆ’ ಎಂದಿದ್ದಾರೆ.
On International Women’s Day, we salute our indomitable Nari Shakti.
We are proud to have taken numerous decisions that have furthered women empowerment.
Every Indian is proud of the stupendous accomplishments of women in various spheres. #NewIndia4NariShakti pic.twitter.com/NPTN62Lqek
— Narendra Modi (@narendramodi) March 8, 2019
ರಾಷ್ಟ್ರಪತಿ ಕೋವಿಂದ್ ಅವರು ಟ್ವಿಟ್ ಮಾಡಿ, ’ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಮಹಿಳೆ ಸಮಾಜದ ಕನ್ನಡಿಯಾಗಿದ್ದಾಳೆ. ದೇಶ ಮತ್ತು ಕುಟುಂಬಕ್ಕೆ ಆಕೆಯೇ ಪ್ರೇರಣೆ. ಪ್ರತಿ ಹೆಣ್ಣು ಮಗುವಿಗೂ ದೇಶದಲ್ಲಿ ಸಮಾನತೆಯಿಂದ ಬದುಕುವ ಹಕ್ಕಿದೆ’ ಎಂದಿದ್ದಾರೆ.
ಇಂದಿನ ದಿನ ಮಹಿಳೆಗೆ ಮೀಸಲಾಗಿದ್ದು, ಜೀವನದಲ್ಲಿ ಬರುವ ಪ್ರತಿ ಸಮಸ್ಯೆಗಳನ್ನು ಎದುರಿಸುವ ಅದಮ್ಯ ಶಕ್ತಿ ಆಕೆಗಿದೆ. ಆಕೆಯ ಸಬಲೀಕರಣದಿಂದ ದೇಶ ಪ್ರಗತಿಯ ಪಥದತ್ತ ಸಾಗುತ್ತದೆ ಎಂದಿದ್ದಾರೆ.
On International Women’s Day, greetings to women in India and across the world. Women are the sheet-anchor of society, an inspiration for their families and for our nation. Let us strive to ensure equality of opportunity for every women and every girl child #PresidentKovind
— President of India (@rashtrapatibhvn) March 8, 2019
ವಿವಿಧ ಗಣ್ಯರು ಟ್ವಿಟರ್ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ಮಾತ್ರವಲ್ಲದೇ ಮಹಿಳೆಯರು ದೇಶ, ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.