ನವದೆಹಲಿ: ಚೀನಾವನ್ನು ಹಿಂದಿಕ್ಕಿ ಭಾರತ ವಿಶ್ವದ ಅತೀದೊಡ್ಡ ರೈಲ್ ಕೋಚ್ ಉತ್ಪಾದಕನಾಗಿ ಹೊರಹೊಮ್ಮಿದೆ. ಭಾರತೀಯ ರೈಲ್ವೇಯ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಪ್ಯಾಕ್ಟರಿ(ಐಸಿಎಫ್) ವಿಶ್ವದ ಅತೀದೊಡ್ಡ ರೈಲ್ ಕೋಚ್ ಉತ್ಪಾದಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫೆಬ್ರವರಿ ತಿಂಗಳಲ್ಲೇ ಬರೋಬ್ಬರಿ 301 ಕೋಚ್ಗಳನ್ನು ಇದು ನಿರ್ಮಾಣ ಮಾಡಿದೆ. ಈ ಸಂಸ್ಥೆ ಈ ಹಣಕಾಸು ವರ್ಷದಲ್ಲಿ ನಿರ್ಮಾಣ ಮಾಡಿದ ಒಟ್ಟು ಕೋಚ್ಗಳ ಸಂಖ್ಯೆ 2,919 ಆಗಿದೆ.
ಒಂದು ವರ್ಷದಲ್ಲಿ ಎರಡನೇ ಬಾರಿಗೆ ಈ ಸಂಸ್ಥೆ ಒಂದು ತಿಂಗಳಲ್ಲಿ 300ಕ್ಕೂ ಅಧಿಕ ಕೋಚ್ಗಳನ್ನು ನಿರ್ಮಾಣ ಮಾಡಿದೆ. ಈ ವರ್ಷ ಎಪ್ರಿಲ್-ಫೆಬ್ರವರಿಯ ನಡುವೆ ಇದು 2919 ರೈಲ್ ಕೋಚ್ಗಳನ್ನು ನಿರ್ಮಾಣ ಮಾಡಿದೆ. ಅದರ ಹಿಂದಿನ ವರ್ಷ ಈ ಅವಧಿಯಲ್ಲಿ 2085 ಕೋಚ್ಗಳನ್ನು ನಿರ್ಮಾಣ ಮಾಡಿದೆ, ಅಂದರೆ ಒಟ್ಟು ಉತ್ಪಾದನೆಯಲ್ಲಿ ಶೇ.40ರಷ್ಟು ಏರಿಕೆ ಕಂಡಿದೆ.
ಇಂಟಿಗ್ರಲ್ ಕೋಚ್ ಪ್ಯಾಕ್ಟರಿಯು ಈ ಹಣಕಾಸು ವರ್ಷವನ್ನು 3,200 ಕೋಚ್ಗಳ ನಿರ್ಮಾಣದೊಂದಿಗೆ ಮುಕ್ತಾಯಗೊಳಿಸುವ ಗುರಿಯನ್ನು ಹೊಂದಿದೆ. ಈ ಮೂಲಕ ಇದು ವಿಶ್ವದ ಅತೀದೊಡ್ಡ ರೈಲ್ ಕೋಚ್ ಉತ್ಪಾದಕನಾಗಲಿದೆ. ಮಾತ್ರವಲ್ಲದೇ, ಭಾರತದ ಇತರ ಐದು ಸಂಸ್ಥೆಗಳನ್ನು ಒಟ್ಟು ಸೇರಿಸುವುದಕ್ಕಿಂತಲೂ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಲಿದೆ.
ಭಾರತದ ಅತೀ ವೇಗದ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ನ್ನೂ ಇಂಟಿಗ್ರಲ್ ಕೋಚ್ ಪ್ಯಾಕ್ಟರಿ ನಿರ್ಮಾಣ ಮಾಡಿದೆ. ಇನ್ನೂ 44 ವಂದೇ ಭಾರತ್ ಎಕ್ಸ್ಪ್ರೆಸ್ನ್ನು ಅದು ನಿರ್ಮಾಣ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.