ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದಕರ ಬೆಂಬಲಿಗರು ನಡೆಸುತ್ತಿರುವ ಕುತಂತ್ರಕ್ಕೆ ಬಲಿಯಾಗದಂತೆ ಭೂಸೇನೆ ಮತ್ತು ವಾಯುಸೇನೆ ದೇಶದ ಜನರಲ್ಲಿ ಮನವಿಯನ್ನು ಮಾಡಿಕೊಂಡಿದೆ.
ತನ್ನ ಅಧಿಕೃತ ಟ್ವಿಟರ್ನಲ್ಲಿ ಸಂದೇಶ ರವಾನೆ ಮಾಡಿರುವ ಭಾರತೀಯ ಸೇನೆಯು, ‘ಭಯೋತ್ಪಾದನಾ ಪ್ರಾಯೋಜಕರಿಂದ ಸುಳ್ಳು ಮತ್ತು ದಾರಿ ತಪ್ಪಿಸುವ ದುರುದ್ದೇಶಪೂರಿತ ಸಂದೇಶ, ಟ್ವಿಟ್ಗಳು ಹರಿದಾಡುತ್ತಿವೆ. ಇಂತಹ ಕೃತ್ಯಗಳಿಗೆ ಬಲಿಯಾಗಬೇಡಿ. ಭಯೋತ್ಪಾದನೆ ಪ್ರಾಯೋಜಕರ ಸುಳ್ಳು, ದುರ್ಬಳಕೆ ಮತ್ತು ವಂಚನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ’ ಎಂದಿದೆ.
ಸಿಖ್ ರೆಜಿಮೆಂಟ್ ಪಾಕಿಸ್ಥಾನದ ವಿರುದ್ಧ ಹೋರಾಟ ನಡೆಸುವುದಿಲ್ಲ ಎಂದು ಹೇಳಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಸಂಪೂರ್ಣ ಸುಳ್ಳು ಎಂದು ಸೇನೆ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಹೆಸರಿನಲ್ಲಿ ಹಲವಾರು ಟ್ವಿಟರ್ ಹ್ಯಾಂಡಲ್, ಇತ್ಯಾದಿಗಳನ್ನು ತೆರೆದು ದಾರಿ ತಪ್ಪಿಸಲಾಗುತ್ತಿದೆ. ಈ ಬಗ್ಗೆ ಟ್ವಿಟ್ ಮಾಡಿ ಸ್ಪಷ್ಟನೆ ನೀಡಿರುವ ವಾಯುಸೇನೆ, ‘ವಿಂಗ್ ಕಮಾಂಡರ್ ಅಭಿನಂದನ್ ಅವರು ಯಾವುದೇ ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂಗಳನ್ನು ಹೊಂದಿಲ್ಲ. ಅವರ ಹೆಸರಿನಲ್ಲಿರುವ ಯಾವುದೇ ಖಾತೆಯನ್ನು ಹಿಂಬಾಲಿಸುವುದನ್ನು ನಿಲ್ಲಿಸಿ ಎಂದಿದೆ.
#FAKE ACCOUNTS : Wg Cdr Abhinandan Varthaman does not have a social media account on any portal (Facebook /Instagram /Twitter). Please avoid following any fake accounts being used in the name of any IAF Airwarrior for spreading misinformation.
Jai Hind!!! pic.twitter.com/nG8C7ZUkQ6— Indian Air Force (@IAF_MCC) March 6, 2019
False & malicious creatives & tweets from terror- sponsors are emerging. Guard against false propaganda against #IndianArmy units. Guard against Lie, Deceit & Deception of terror- sponsors. pic.twitter.com/aFZlP79PH5
— ADG PI – INDIAN ARMY (@adgpi) March 6, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.