ನವದೆಹಲಿ: 2019ರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಟಾಪ್ 10 ನಗರಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡ ಕರ್ನಾಟಕದ ಏಕೈಕ ನಗರವೆಂದರೆ ಅದು ಮೈಸೂರು. ಸ್ವಚ್ಛತೆಯಲ್ಲಿ ಮೈಸೂರು ದೇಶದಲ್ಲೇ 3ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜಧಾನಿ ಬೆಂಗಳೂರಿಗೆ 194ನೇ ಸ್ಥಾನ ಸಿಕ್ಕಿದೆ.
ಮಧ್ಯಪ್ರದೇಶದ ಇಂಧೋರ್, ಉಜೈನ್, ದೇವಸ್ ಮತ್ತು ಗುಜರಾತಿನ ಅಹ್ಮದಾಬಾದ್ ಮತ್ತು ರಾಜ್ಕೋಟ್ಗಳು ಟಾಪ್ ಸ್ಥಾನಗಳನ್ನು ಪಡೆದುಕೊಂಡಿವೆ.
2018ರಲ್ಲಿ 8ನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ ಮಹತ್ವದ ಸಾಧನೆ ಮಾಡಿ 3ನೇ ಸ್ಥಾನಕ್ಕೆ ಬಂದಿದೆ. ಕರಾವಳಿ ನಗರಿ ಮಂಗಳೂರು 165ನೇ ಸ್ಥಾನವನ್ನು ಪಡೆದುಕೊಂಡಿದೆ. 2015ರಲ್ಲಿ 216ನೇ ಸ್ಥಾನದಲ್ಲಿದ್ದ ಬೆಂಗಳೂರು ಸ್ವಲ್ಪ ಚೇತರಿಕೆಯನ್ನು ಕಂಡು 194ನೇ ಸ್ಥಾನಕ್ಕೆ ಬಂದು ನಿಂತಿದೆ.
10 ಲಕ್ಷ ಜನಸಂಖ್ಯೆ ಇರುವ ದೇಶದ 458 ನಗರಗಳನ್ನು ಸಮೀಕ್ಷೆಗೊಳಪಡಿಸಿ ಈ ರ್ಯಾಂಕಿಂಗ್ಗಳನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.