ಚಂಡೀಗಢ: ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯನ್ನು ಹೊಂದಿರುವ ಹರಿಯಾಣ ದೇಶದಲ್ಲೇ ಅತೀ ಹೆಚ್ಚು ಶತಾಯುಷಿ ಮತದಾರರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿ 100 ವರ್ಷವನ್ನು ದಾಟಿ 5,910 ಮಂದಿ ಇಲ್ಲಿ ಮತದಾನವನ್ನು ಮಾಡಲಿದ್ದಾರೆ.
ಇಷ್ಟೊಂದು ಸಂಖ್ಯೆಯ ಶತಾಯುಷಿ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿರುವುದು ಹರಿಯಾಣಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅಲ್ಲಿನ ಜಂಟಿ ಚುನಾವಣಾ ಅಧಿಕಾರಿ ಡಾ.ಇಂದ್ರಜೀತ್ ಹೇಳಿದ್ದಾರೆ.
2019ರ ಜನವರಿ 31ರಂದು ಪ್ರಕಟಗೊಂಡಿರುವ ಮತದಾರರ ಪಟ್ಟಿಯ ಪ್ರಕಾರ, 553 ಶತಾಯುಷಿ ಮತದಾರರು ಕರ್ನಲ್ ಕ್ಷೇತ್ರದಲ್ಲಿದ್ದಾರೆ, 111 ಮಂದಿ ಶತಾಯುಷಿ ಮತದಾರರು ಪಂಚಕುಲದಲ್ಲಿದ್ದಾರೆ. ಹರಿಯಾಣದ ವಿವಿಧ ಭಾಗಗಳಲ್ಲಿ ಇನ್ನಷ್ಟು ಸಂಖ್ಯೆಯ ಶತಾಯುಷಿ ಮತದಾರರು ಇದ್ದಾರೆ.
90ರಿಂದ 99 ವಯಸ್ಸಿನ ಸುಮಾರು 8,9711 ಮತದಾರರು ಪಟ್ಟಿಯಲ್ಲಿದ್ದಾರೆ ಎಂದು ಡಾ.ಇಂದ್ರಜೀತ್ ಹೇಳಿದ್ದಾರೆ.
ಅನರ್ಹರಾದ ಸುಮಾರು 85,613 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ, 3,68,494 ಹೊಸ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.