ನವದೆಹಲಿ: ಪಾಕಿಸ್ಥಾನದ ಬಾಲಾಕೋಟ್ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಹತರಾದ ಉಗ್ರರ ಸಂಖ್ಯೆಯನ್ನು ಕೇಳುತ್ತಿರುವವರಿಗೆ ಕೇಂದ್ರ ಸಚಿವ ವಿಕೆ ಸಿಂಗ್ ಅವರು ಹಾಸ್ಯಾದ್ಪದವಾದ ರೀತಿಯಲ್ಲಿ ಉತ್ತರಿಸಿದ್ದಾರೆ. ಅಲ್ಲದೇ ಉಗ್ರರ ಹತ್ಯೆಯನ್ನು ಸೊಳ್ಳೆಗಳ ಹತ್ಯೆಗೆ ಹೋಲಿಕೆ ಮಾಡಿದ್ದಾರೆ.
‘ರಾತ್ರಿ 3.30ರ ಸುಮಾರಿಗೆ ತುಂಬಾ ಸೊಳ್ಳೆಗಳಿದ್ದವು. ನಾನು ಅವುಗಳಿಗೆ ಸ್ಪ್ರೇ ಹಾಕಿದೆ. ಈಗ ಎಷ್ಟು ಸೊಳ್ಳೆಗಳು ಸತ್ತವು ಎಂದು ಲೆಕ್ಕ ಹಾಕುತ್ತಾ ಕೂರಲಾ ಅಥವಾ ಆರಾಮವಾಗಿ ಮಲಗಿ ಬಿಡಲಾ’ ಎಂದು ಟ್ವಿಟ್ ಮಾಡುವ ಮೂಲಕ ಹತರಾದ ಉಗ್ರರ ಸಂಖ್ಯೆ ಕೇಳುವವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
रात ३.३० बजे मच्छर बहुत थे,
तो मैंने HIT मारा।
अब मच्छर कितने मारे, ये गिनने बैठूँ,
या आराम से सो जाऊँ? #GenerallySaying
— Vijay Kumar Singh (@Gen_VKSingh) March 6, 2019
ಈ ಟ್ವಿಟ್ ಬಗ್ಗೆ ವಿವರಣೆ ನೀಡಿರುವ ಅವರು, ‘ಬಾಂಬ್ಗಳು ಸ್ಪೋಟಗೊಂಡಿವೆ, ಕಟ್ಟಡಗಳು ಧ್ವಂಸಗೊಂಡಿವೆ. 1 ಸಾವಿರ ಕೆಜಿ ಬಾಂಬ್ ಸ್ಪೋಟಗೊಂಡರೂ ಜನ ಸಾಯಲಿಲ್ಲವೇ? ಸತ್ತರು ಎಂದಾದರೆ, ನೀವು ಎಷ್ಟು ಮಂದಿ ಸತ್ತರು ಎಂದು ಅಂದಾಜಿಸಬಹುದು. ಆದರೆ ಯಾರು ಲೆಕ್ಕ ಹಾಕಲು ಬಯಸುತ್ತಾರೆ ಎಂಬುದು ತಿಳಿಯುತ್ತಿಲ್ಲ. ಇದು ನಿಜಕ್ಕೂ ದುರಾದೃಷ್ಟ’ ಎಂದಿದ್ದಾರೆ.
Union Min VK Singh: Agli baar jab Bharat kuch kare toh mujhe lagta hai ki vipakshi jo ye prashna uthate hain, unko hawai jahaz ke neeche baandh ke le jayein, jab bomb chale toh vahan se dekh lein target, uske baad unko vahin par utar dein, uske baad vo gin le aur wapas aajayein. pic.twitter.com/DsEy8bzVv8
— ANI (@ANI) March 6, 2019
ಮುಂದಿನ ಸಲ ಇಂತಹ ಕಾರ್ಯಾಚರಣೆಗಳು ನಡೆದಾಗ ಪ್ರತಿಪಕ್ಷಗಳ ಅನುಮಾನವನ್ನು ನಿವಾರಣೆ ಮಾಡಲು, ಅವರನ್ನು ಯುದ್ಧವಿಮಾನಗಳ ಕೆಳಗೆ ಕಟ್ಟಿ ಟಾರ್ಗೆಟ್ ಏರಿಯಾಗೆ ತೆಗೆದುಕೊಂಡು ಹೋಗಬೇಕು, ಅಲ್ಲಿ ಬಾಂಬ್ ಎಸೆದ ಬಳಿಕ ಅವರನ್ನು ಕೆಳಗಿಳಿಸಿ ಸತ್ತವರ ಸಂಖ್ಯೆಯನ್ನು ಲೆಕ್ಕ ಹಾಕಲು ಬಿಡಬೇಕು. ಲೆಕ್ಕ ಮುಗಿದ ಬಳಿಕ ಅವರು ವಾಪಾಸ್ ಬರಬಹುದು ಎಂದಿದ್ದಾರೆ.
ವಿವಿಧ ಕಾಂಗ್ರೆಸ್ ನಾಯಕರು, ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ವೈಮಾನಿಕ ದಾಳಿಯಲ್ಲಿ ಸತ್ತ ಉಗ್ರರ ಲೆಕ್ಕ ನೀಡುವಂತೆ ಕೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.