ನವದೆಹಲಿ: ದೇಶದಾದ್ಯಂತ ಸುಮಾರು ರೂ.4,132 ಕೋಟಿ ವೆಚ್ಚದಲ್ಲಿ 28 ಮೀನುಗಾರಿಕಾ ಜೆಟ್ಟಿಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮಾಹಿತಿಯನ್ನು ನೀಡಿದ್ದಾರೆ. ಅವರ ಈ ನಿರ್ಧಾರ ದೇಶದ ಮೀನುಗಾರರ ಸಮುದಾಯಕ್ಕೆ ಮಹತ್ವದ ಪ್ರಯೋಜನವನ್ನು ತಂದುಕೊಡುವ ನಿರೀಕ್ಷೆ ಇದೆ.
ನಾಲ್ಕು ಮೀನುಗಾರಿಕಾ ಜೆಟ್ಟಿಗಳು ಕರ್ನಾಟಕದಲ್ಲಿ, ಆರು ಮಹಾರಾಷ್ಟ್ರದಲ್ಲಿ, ಮೂರು ಗುಜರಾತಿನಲ್ಲಿ, ಎರಡು ಒರಿಸ್ಸಾದಲ್ಲಿ ಮತ್ತು 5 ಆಂಧ್ರಪ್ರದೇಶದಲ್ಲಿ, ಎರಡು ಕೇರಳದಲ್ಲಿ, ಒಂದು ಗೋವಾದಲ್ಲಿ ನಿರ್ಮಾಣವಾಗಲಿದೆ.
ಕರ್ನಾಟಕದ ಕುಳಾಯಿಯಲ್ಲಿ ಹೊಸ ಮೀನುಗಾರಿಕಾ ಬಂದರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, 28 ಜೆಟ್ಟಿಗಳ ನಿರ್ಮಾಣದ ಬಗ್ಗೆ ಘೋಷಣೆಯನ್ನು ಮಾಡಿದರು. ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರು 2022ರ ವೇಳೆಗೆ ಸಂಪೂರ್ಣಗೊಳ್ಳಲಿದ್ದು, ಇದು 300 ದೋಣಿಗಳಿಗೆ ನೆಲೆಯನ್ನು ಕಲ್ಪಿಸಲಿದೆ.
ಕುಳಾಯಿ ಜೆಟ್ಟಿ ರೂ.196 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ನವ ಮಂಗಳೂರು ಬಂದರು ಮಂಡಳಿ ಇದರಲ್ಲಿ ಶೇ.45ರಷ್ಟು ಪಾಲುದಾರಿಕೆಯನ್ನು ಹೊಂದಲಿದೆ, ಶೇ.50ರಷ್ಟು ಪಾಲುದಾರಿಕೆಯನ್ನು ಕೇಂದ್ರ ಸರ್ಕಾರ, ಉಳಿದ ಶೇ.5ರಷ್ಟು ಪಾಲುದಾರಿಕೆಯನ್ನು ರಾಜ್ಯ ಸರ್ಕಾರ ಹೊಂದಲಿದೆ.
ಕುಳಾಯಿ ಮೀನುಗಾರಿಕಾ ಬಂದರು ನಿರ್ಮಾಣವಾದ ಬಳಿಕ 2,300 ಮೀನುಗಾರರಿಗೆ ಇಲ್ಲಿ ಉದ್ಯೋಗಾವಕಾಶಗಳು ದೊರಕಲಿದೆ. 1,700 ಕಡಲಾಚೆಯ ಉದ್ಯೋಗಾವಕಾಶಗಳು ಮತ್ತು 4,500 ಇತರ ಉದ್ಯೋಗಾವಕಾಶಗಳು ದೊರಕುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.