ನವದೆಹಲಿ: ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನೂತನವಾಗಿ ಪಡೆದುಕೊಂಡಿರುವ ಅಧ್ಯಕ್ಷೀಯ ಸ್ಥಾನಮಾನವನ್ನು ಬಳಸಿಕೊಂಡು ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಪ್ರಸ್ತಾವಣೆಯನ್ನು ಮುಂದಿಡಲಿದೆ. ಇದರಿಂದ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ಸಹಜವಾಗಿಯೇ ಹೆಚ್ಚಿನ ಜಾಗತಿಕ ಒತ್ತಡಗಳು ಬೀಳಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿ ಫ್ರಾನ್ಸ್ ರಾಯಭಾರಿ ಅಲೆಗ್ಸಾಂಡರ್ ಝೀಗ್ಲೆರ್ ಅವರು, ಭಾರತದಂತೆಯೇ ಫ್ರಾನ್ಸ್ ಕೂಡ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆಯಿಂದ ಸಾಕಷ್ಟು ಪರಿಣಾಮವನ್ನು ಎದುರಿಸಿದೆ, ಮಸೂದ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡದೇ ಇರುವುದು ಒಂಥರಾ ನಮಗೂ ಭಯೋತ್ಪಾದನೆಗೂ ಏನೂ ಸಂಬಂಧವಿಲ್ಲದಂತೆ ಇರುವಂತೆ ಎಂದಿದ್ದಾರೆ.
‘ವಿಶ್ವಸಂಸ್ಥೆಯಲ್ಲಿ ಮಸೂದ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವನೆಯನ್ನು ನಾವು ಮುಂದಿಡುತ್ತೇವೆ. ಕಳೆದ ಎರಡು ವರ್ಷಗಳಿಂದ ಈ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಉಗ್ರ ಸಂಘಟನೆಯೊಂದರ ಮುಖ್ಯಸ್ಥನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡದೇ ಇದ್ದರೆ ಸನ್ನಿವೇಶಕ್ಕೊಂದು ಅರ್ಥವೇ ಇರುವುದಿಲ್ಲ’ ಎಂದು ಅವರು ಅಭಿಪ್ರಾಯಿಸಿದ್ದಾರೆ.
2017ರಲ್ಲಿ ಫ್ರಾನ್ಸ್ ಅಮೆರಿಕಾ ಮತ್ತು ಯುಕೆಯ ಬೆಂಬಲದೊಂದಿಗೆ ವಿಶ್ವಸಂಸ್ಥೆಯಲ್ಲಿ ಈ ಪ್ರಸ್ತಾವಣೆಯನ್ನು ಮುಂದಿಟ್ಟಿತ್ತು, ಆದರೆ ಚೀನಾ ಇದಕ್ಕೆ ಅಡ್ಡಗಾಲಾಕಿತ್ತು. ಇದೀಗ ಮತ್ತೊಮ್ಮೆ ಫ್ರಾನ್ಸ್ ಈ ಪ್ರಯತ್ನವನ್ನು ಮಾಡುತ್ತಿದೆ, ಆದರೆ ಈ ಬಾರಿ ಚೀನಾದ ನಿರ್ಧಾರ ಏನಾಗಿರಬಹುದು ಎಂಬುದನ್ನು ಕಾದು ನೋಡಬೇಕಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.