ನವದೆಹಲಿ: ಸತತ 3ನೇ ವರ್ಷವೂ ಮಧ್ಯಪ್ರದೇಶದ ಇಂದೋರ್ ನಗರವು ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣ ಅವಾರ್ಡ್ 2019ಗೆ ಇಂದೋರ್ ಪಾತ್ರವಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಪ್ರಶಸ್ತಿಯನ್ನು ಪ್ರದಾನಿಸಿದರು.
ನವದೆಹಲಿಯ ಮುನ್ಸಿಪಲ್ ಕೌನ್ಸಿಲ್ ಏರಿಯಾಗೆ “ಅತ್ಯಂತ ಸ್ವಚ್ಛ ಸಣ್ಣ ನಗರ” ಪ್ರಶಸ್ತಿಯನ್ನು ನೀಡಲಾಯಿತು. ಕೇಂದ್ರ ಸರ್ಕಾರದ ಈ ಸಮೀಕ್ಷೆಯಲ್ಲಿ ಉತ್ತರಾಖಂಡದ ಗೌಚರ್ “ಅತ್ಯುತ್ತಮ ಗಂಗಾ ನಗರ “ಎಂಬ ಪ್ರಶಸ್ತಿಯನ್ನು ನೀಡಲಾಯಿತು.
ಈ ಸ್ವಚ್ಛತಾ ಪ್ರಶಸ್ತಿಗಳನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ನೀಡಲಾಗುತ್ತಿದೆ.
Absolutely Brilliant!
Indore is India’s Cleanest City for 3rd year running.My heartiest congratulations to the Swachhagrahis of Indore for their unmatched dedication & participation in transforming Swachh Bharat into a Jan Andolan. #SwachhSurvekshan2019 pic.twitter.com/ZncqtiArLg
— Hardeep Singh Puri (@HardeepSPuri) March 6, 2019
ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿರುವ ಇಂದೋರ್ ಅಭಿನಂದನೆಗಳನ್ನು ತಿಳಿಸಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ನಿಜಕ್ಕೂ ಅದ್ಭುತ. ಸತತ ಮೂರನೇ ವರ್ಷವೂ ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಇಂದೋರಿನ ಸ್ವಚ್ಛ ಗೃಹಗಳಿಗೆ ನನ್ನ ಹೃದಯ ಸ್ಪರ್ಶಿ ಅಭಿನಂದನೆಗಳನ್ನು ತಿಳಿಸುತ್ತೇನೆ. ಸ್ವಚ್ಛ ಭಾರತ ಅಭಿಯಾನವನ್ನು ಜನಾಂದೋಲನವಾಗಿ ಪರಿವರ್ತಿಸಲು ಅವರು ತೋರಿಸುತ್ತಿರುವ ಶ್ರದ್ಧೆ ಮತ್ತು ಭಾಗವಹಿಸುವಿಕೆಗೆ ಹೋಲಿಕೆಯೇ ಇಲ್ಲ ಎಂದು ಬಣ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.