ಪಾಕಿಸ್ಥಾನ ಪ್ರಾಯೋಜಿತ ಜಿಹಾದಿ ಸಂಘಟನೆಗಳು ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಯನ್ನು ನಡೆಸಿದ ಪರಿಣಾಮವಾಗಿ 43 ಸಿಆರ್ಪಿಎಫ್ ಯೋಧರು ಹತ್ಯೆಯಾದರು. ಈ ಘಟನೆ ನಡೆದ ಬಳಿಕ ದೇಶದಲ್ಲಿ ಭಾರತೀಯರ ಆಕ್ರೋಶಗಳು ಭುಗಿಲೆದ್ದಿವೆ. ದಾಳಿಯನ್ನು ನಡೆಸಿದ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ವಿರುದ್ಧ ಪ್ರತೀಕಾರ ತೀರಿಸಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ. ಇಂತಹ ಭಯೋತ್ಪಾದನಾ ದಾಳಿಗೆ ಭಾರತ ಪ್ರತೀಕಾರವನ್ನು ತೀರಿಸಲೇಬೇಕು. ಅದಕ್ಕಾಗಿ ಪ್ರತಿ ಭಾರತೀಯನು ಭಾರತ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು, ಅದಕ್ಕಿಂತಲೂ ಹೆಚ್ಚಾಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬ ಯೋಧನ ಕುಟುಂಬಗಳ ನೆನಪು ಭಾರತೀಯನಿಗೆ ಇರಬೇಕು. ಇದಕ್ಕಾಗಿ ರಕ್ಷಣಾ ಸಚಿವಾಲಯವು ಈ ನಿಟ್ಟಿನಲ್ಲಿ ಒಂದು ಮಹತ್ವಪೂರ್ಣ ಕಾರ್ಯವನ್ನು ಆರಂಭ ಮಾಡಿದೆ. ಅದುವೇ ಭಾರತ್ ಕೆ ವೀರ್.
ಇದರಡಿಯಲ್ಲಿ ದೇಶದ ಜನರು ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ಧನ ಸಹಾಯವನ್ನು ಮಾಡಬಹುದಾಗಿದೆ. ವೆಬ್ಸೈಟ್ bharatkeveer.gov.in ಕಳೆದ ಎರಡು ವರ್ಷಗಳಿಂದ ಕಾರ್ಯಾಚರಣೆಯಲ್ಲಿದೆ. ಇಲ್ಲಿ ಹುತಾತ್ಮರಾದ ಸೇನಾ ಪಡೆಗಳ ಯೋಧರ ಕುಟುಂಬಗಳಿಗೆ ಜನರು ಧನ ಸಹಾಯವನ್ನು ಮಾಡಬಹುದಾಗಿದೆ. 2017 ರ ಮಧ್ಯಭಾಗದಲ್ಲಿ ಕೇಂದ್ರ ಗೃಹ ಸಚಿವಾಲಯವು ಈ ವೆಬ್ಸೈಟನ್ನು ಆರಂಭಿಸಿದೆ. ಇದರ ಶ್ರೇಯಸ್ಸು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಲ್ಲುತ್ತದೆ.
ಯಾವುದೇ ದೇಶದ ಯಾವುದೇ ಮೂಲೆಯಲ್ಲಿ ಕುಳಿತಿರುವ ವ್ಯಕ್ತಿಯು ಆನ್ಲೈನ್ ಮೂಲಕ ಈ ವೆಬ್ಸೈಟಿಗೆ ಹಣವನ್ನು ರವಾನಿಸಬಹುದಾಗಿದೆ. ಈ ಹಣ ಹುತಾತ್ಮ ಯೋಧರ ಕುಟುಂಬಗಳಿಗೆ ಸಲ್ಲಿಕೆಯಾಗುತ್ತದೆ. ಆನ್ಲೈನ್ ಹಣ ವರ್ಗಾವಣೆಯ ಬಗ್ಗೆ ತಿಳಿಯದವರು ಚೆಕ್ ಮೂಲಕವೂ ಇದಕ್ಕೆ ಹಣ ಪಾವತಿ ಮಾಡಬಹುದಾಗಿದೆ. ಡಿಐಜಿ CRPF ಡೈರೆಕ್ಟರ್ ಜನರಲ್, ಸಿಜಿಒ ಕಾಂಪ್ಲೆಕ್ಸ್ ಲೋಧಿ ರೋಡ್, ನವದೆಹಲಿ -110003. ಈ ವಿಳಾಸಕ್ಕೆ ಚೆಕ್ ಕಳುಹಿಸಿ ಕೊಡಬಹುದಾಗಿದೆ. ಈ ಹಣಕ್ಕೆ ತೆರಿಗೆ ವಿನಾಯಿತಿ ಇದೆ.
ವರದಿಗಳ ಪ್ರಕಾರ ಪುಲ್ವಾಮ ದಾಳಿ ನಡೆದ ಬಳಿಕ ಕೇವಲ ನಾಲ್ಕು ದಿನಗಳಲ್ಲಿ ಈ ವೆಬ್ಸೈಟಿಗೆ 46 ಕೋಟಿ ರೂಪಾಯಿಗಳು ಹರಿದು ಬಂದಿದೆ. ಭಾರತದಲ್ಲಿ ನೂರ ಇಪ್ಪತ್ತೈದು ಕೋಟಿ ಜನಸಂಖ್ಯೆ ಇದೆ. ಹೀಗಾಗಿ 46 ಕೋಟಿ ರೂಪಾಯಿ ದೊಡ್ಡ ಮೊತ್ತವೇನಲ್ಲ. ಇಲ್ಲಿಗೆ ಧನ ಸಹಾಯವನ್ನು ಮಾಡುವ ಮೂಲಕ ನಾವು ಯೋಧರ ಕುಟುಂಬಗಳಿಗೆ ನೆರವು ನೀಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.