ನವದೆಹಲಿ: ಶಸ್ತ್ರಾಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ಸಮಿತಿಯನ್ನು ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು 2018ರ ಆಗಸ್ಟ್ 15 ರಂದು ಮಾಡಿದ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ರಕ್ಷಣಾ ಸಚಿವಾಲಯವು ಮಂಗಳವಾರ ಹೇಳಿದೆ.
ಭಾರತೀಯ ಶಸ್ತ್ರಾಸ್ತ್ರ ಪಡೆಗಳಲ್ಲಿ ಇನ್ನು ಮುಂದೆ ಫೈಟರ್ ಪೈಲಟ್ಗಳು ಸೇರಿದಂತೆ ಎಲ್ಲಾ ಬ್ರಾಂಚ್ಗಳು ಕೂಡ ಮಹಿಳೆಯರಿಗೆ ತೆರೆದಿರಲಿದೆ ಎಂದು ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ನೌಕಾಸೇನೆಯ ಎಲ್ಲಾ ಸಿ ಗೋಯಿಂಗ್ ಬ್ರಾಂಚ್ಗಳು, ಕೇಡರ್ಗಳು, ವಿಶೇಷ ಪಡೆಗಳು ಇನ್ನು ಮುಂದೆ ಮಹಿಳಾ ಅಧಿಕಾರಿಗಳಿಗೆ ಶಾರ್ಟ್ ಸರ್ವಿಸ್ ಕಮಿಷನ್ ಮೂಲಕ ತೆರೆದಿರಲಿದೆ ಎಂದು ತಿಳಿಸಿದೆ. ಶಿಕ್ಷಣಕ್ಕೆ ಹೆಚ್ಚುವರಿಯಾಗಿ ಕಾನೂನು ಮತ್ತು ನೌಕಾ ನಿರ್ಮಾಣ ಬ್ರಾಂಚ್ಗಳಲ್ಲಿ ಅಥವಾ ಕೇಡರ್ಗಳಲ್ಲಿ ಮಹಿಳಾ SSC ಅಧಿಕಾರಿಗಳು ನೌಕಾ ಆರ್ಮಮೆಂಟ್ ಬ್ರಾಂಚ್ನ ಕಾಯಂ ಸಮಿತಿಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.
ರಕ್ಷಣಾ ಸಚಿವಾಲಯದ ಪ್ರಕಟನೆಯ ಪ್ರಕಾರ, ಮೂರು ಹೊಸ ತರಬೇತಿ ಹಡಗುಗಳನ್ನು ಭಾರತೀಯ ನೌಕಾ ಸೇನೆಗೆ ನಿಯೋಜನೆಗೊಳಿಸುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಈ ಹಡಗುಗಳು ಮಹಿಳಾ ಮತ್ತು ಪುರುಷ ಅಧಿಕಾರಿಗಳ ತರಬೇತಿಗೆ ಬೇಕಾಗಿರುವ ಮೂಲ ಸೌಕರ್ಯವನ್ನು ಒದಗಿಸುವಲ್ಲಿ ಸಹಕಾರಿಯಾಗಲಿದೆ. ಒಂದು ಬಾರಿ ತರಬೇತಿ ಹಡಗುಗಳು ನಿಯೋಜನೆಗೊಂಡ ಬಳಿಕ ಭಾರತೀಯ ನೌಕೆಯ ಎಲ್ಲಾ ಬ್ರಾಂಚ್ಗಳಿಗೆ ಮಹಿಳಾ ಅಧಿಕಾರಿಗಳನ್ನು ನಿಯೋಜನೆಗೊಳಿಸುವ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.