ವಾಷಿಂಗ್ಟನ್: ಭಾರತದ ವಿರುದ್ಧ ಎಫ್ -16 ಯುದ್ಧ ವಿಮಾನವನ್ನು ದುರ್ಬಳಕೆ ಮಾಡಿದ ಪಾಕಿಸ್ಥಾನದ ಕ್ರಮವನ್ನು ಅಮೇರಿಕಾ ಅತ್ಯಂತ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ. ಫೆಬ್ರವರಿ 27 ರಂದು ಪಾಕಿಸ್ತಾನವು ಎಫ್-16 ಯುದ್ಧ ವಿಮಾನದ ಮೂಲಕ ಭಾರತೀಯ ವಾಯುನೆಲೆಯನ್ನು ಆಕ್ರಮಿಸಲು ಪ್ರಯತ್ನಿಸಿತ್ತು. ಈ ಕ್ರಮವನ್ನು ಅಮೇರಿಕಾ ಅತ್ಯಂತ ಗಂಭೀರವಾಗಿ ಪರಿಶೀಲಿಸಿದ್ದು ಪಾಕಿಸ್ಥಾನವು ಶಸ್ತ್ರಾಸ್ತ್ರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ವಾಷಿಂಗ್ಟನ್ ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕಾದ ವಕ್ತಾರ ರಾಬರ್ಟ್ ಬಲ್ಲಾಡಿ ನೋ ಅವರು, ಪಾಕಿಸ್ತಾನ ಎಫ್-16 ಯುದ್ಧ ವಿಮಾನವನ್ನು ದುರ್ಬಳಕೆ ಮಾಡಿದ ವರದಿಗಳನ್ನು ನಾವು ಅತ್ಯಂತ ಹತ್ತಿರದಿಂದ ಗಮನಿಸುತ್ತಿದ್ದೇವೆ ಎಂದಿದ್ದಾರೆ. ಈ ಹಂತದಲ್ಲಿ ನಾವು ಏನನ್ನು ಖಚಿತ ಪಡಿಸಲು ಇಷ್ಟಪಡುವುದಿಲ್ಲ, ಈ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ಅಮೇರಿಕಾ ಇತರ ದೇಶಗಳೊಂದಿಗೆ ಮಾಡಿಕೊಂಡಿರುವ ರಕ್ಷಣಾ ತಂತ್ರಜ್ಞಾನ ಒಪ್ಪಂದಗಳ ಬಗ್ಗೆ ಬದ್ಧತೆಯನ್ನು ಹೊಂದಿದೆ. ಯಾವ ದೇಶಗಳು ಶಸ್ತ್ರಾಸ್ತ್ರ ನಿಯಮವನ್ನು ಉಲ್ಲಂಘಿಸಬಾರದು ಎಂದು ನಾವು ಬಯಸುತ್ತೇವೆ ಎಂದಿದ್ದಾರೆ.
ಭಾರತೀಯ ವಾಯುಸೇನೆ ಪಾಕಿಸ್ಥಾನದ ನೆಲೆಯೊಳಗೆ ನುಗ್ಗಿ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ಥಾನ ಎಫ್-16 ಯುದ್ಧ ವಿಮಾನದ ಮೂಲಕ ಭಾರತೀಯ ವಾಯುನೆಲೆಯನ್ನು ಆಕ್ರಮಿಸುವ ವಿಫಲ ಪ್ರಯತ್ನವನ್ನು ನಡೆಸಿತ್ತು. ಆದರೆ ಭಾರತೀಯ ವಾಯುಸೇನೆಯು ಈ ಪ್ರಯತ್ನವನ್ನು ಅತ್ಯಂತ ಯಶಸ್ವಿಯಾಗಿ ವಿಫಲಗೊಳಿಸಿತು. ಎಫ್-16 ಯುದ್ಧ ವಿಮಾನವನ್ನು ಭಾರತವು ಹೊಡೆದುರುಳಿಸಿತ್ತು. ಇದರ ದೃಶ್ಯಾವಳಿಗಳನ್ನು ಈಗಾಗಲೇ ಸುದ್ದಿ ಸಂಸ್ಥೆಗಳು ಬಿಡುಗಡೆ ಮಾಡಿವೆ. ಆದರೆ ಪಾಕಿಸ್ಥಾನ ಮಾತ್ರ ತನ್ನ ಯಾವುದೇ ಯುದ್ಧ ವಿಮಾನಗಳು ಪತನವಾಗಿಲ್ಲ ಎಂದು ಸುಳ್ಳು ಹೇಳುತ್ತಲೇ ಬಂದಿದೆ.
ಪಾಕಿಸ್ಥಾನವು ವಾಷಿಂಗ್ಟನ್ ಮೂಲದ ಲಾಕ್ಹೀಡ್ ಮಾರ್ಟಿನ್ ಕಾರ್ಪ್ ಸಂಸ್ಥೆಯ ಹಲವಾರು ಬ್ಯಾಚ್ಗಳ ಎಫ್-16 ಯುದ್ಧ ವಿಮಾನಗಳನ್ನು ಸಬ್ಸಿಡಿ ದರದಲ್ಲಿ 2016ಕ್ಕೂ ಮುನ್ನ ಖರೀದಿ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.