ಪ್ರಧಾನ್ ಮಂತ್ರಿ ಜನ ಧನ್ ಯೋಜನೆ ನರೇಂದ್ರ ಮೋದಿ ಸರಕಾರದ ಅತ್ಯಂತ ಯಶಸ್ವೀ ಯೋಜನೆಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವ ಯೋಜನೆಗಳಲ್ಲೊಂದು. ಈ ಯೋಜನೆ ಬಡವರ ಮತ್ತು ರೈತರ ಜೀವನದಲ್ಲಿ ವ್ಯಾಪಕ ಬದಲಾವಣೆಯನ್ನು ತಂದಿದೆ. ನಾವು ನಮ್ಮ ಸಮಾಜದ ಬಡ ವರ್ಗವನ್ನು ನೋಡುವ ದೃಷ್ಟಿಕೋನವನ್ನೇ ಈ ಯೋಜನೆ ಬದಲಾಯಿಸಿದೆ. ಸಮಾಜದ ಉನ್ನತ ವರ್ಗಗಳಿಗೆ ಮಾತ್ರ ಲಭ್ಯವಿದ್ದ ಬ್ಯಾಂಕಿಂಗ್ ಸೌಲಭ್ಯಗಳು ಮತ್ತು ಯೋಜನೆಗಳು ಈಗ ದೇಶದ ಇಡೀ ಜನಸಂಖ್ಯೆಗೆ ಲಭ್ಯವಾಗಿದೆ. ಆದ್ದರಿಂದ ಜನ್ಧನ್ ಯೋಜನೆ ಸಮಕಾಲೀನ ಸಮಾಜವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ಬಳಿಕ ಮಾಡಿದ ಐದು ಸ್ವಾತಂತ್ರ್ಯೋತ್ಸವದ ಭಾಷಣಗಳ ಪೈಕಿ ಸರ್ಕಾರದ ಒಂದು ಯೋಜನೆಯ ಸಾಧನೆ ಸ್ಥಿರ ಪ್ರಸ್ತಾಪವನ್ನು ಪಡೆದುಕೊಂಡಿದೆ, ಅದುವೇ ಪ್ರಧಾನ್ ಮಂತ್ರಿ ಜನ ಧನ್ ಯೋಜನೆ. ಇದು ಒಳ್ಳೆಯ ಕಾರಣಕ್ಕಾಗಿ. ಸರ್ಕಾರದ ಪ್ರಮುಖ ಹಣಕಾಸು ಸೇರ್ಪಡೆ ಅಭಿಯಾನ, ಒಂದು ಬೃಹತ್ ಮಾದರಿಯ ಕಾರ್ಯನೀತಿಯ ಉಪಕ್ರಮಗಳಲ್ಲಿ ಒಂದಾಗಿದೆ. ಜನವರಿ 2015ರೊಳಗೆ 75 ದಶಲಕ್ಷ ಖಾತೆಗಳನ್ನು ತೆರೆಯುವ ಆರಂಭಿಕ ಗುರಿಯೊಂದಿಗೆ ಮೋದಿ ಆಡಳಿತವು ಈ ಯೋಜನೆಯನ್ನು ಆರಂಭಗೊಳಿಸಿತು, ಬಳಿಕ ಇದರಡಿ ಡೆಬಿಟ್ ಕಾರ್ಡುಗಳು, ವಿಮೆ ಕವರ್ ಮತ್ತು ಓವರ್ ಡ್ರಾಫ್ಟ್ ಸೌಕರ್ಯಗಳ ರೂಪದಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ವಿಸ್ತರಿಸುತ್ತಾ ಹೋಗಲಾಯಿತು. 2019ರ ಫೆಬ್ರವರಿಯವರೆಗೆ ಈ ಯೋಜನೆಯಡಿ 34.43 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಈ ಲೇಖನವು, ಮೋದಿ ಸರಕಾರ ಅನುಷ್ಠಾನಗೊಳಿಸಿದ ಈ ಕ್ರಾಂತಿಕಾರಿ ಯೋಜನೆಯ ಸಾಧನೆಯನ್ನು ವಿಶ್ಲೇಷಿಸುತ್ತದೆ.
ಜನ್ಧನ್: ಪ್ರಗತಿ
ಪ್ರಧಾನ್ ಮಂತ್ರಿ ಜನ ಧನ್ ಯೋಜನೆ, 18 ರಿಂದ 65 ವರ್ಷ ವಯಸ್ಸಿನವರಿಗೆ ಅನ್ವಯವಾಗುವ ಭಾರತ ಸರ್ಕಾರದ ಹಣಕಾಸು ಅಂತರ್ಗತಗೊಳಿಸುವಿಕೆಯ ಕಾರ್ಯಕ್ರಮವಾಗಿದೆ. ಈ ಯೋಜನೆಯು ಬ್ಯಾಂಕ್ ಖಾತೆಗಳು, ಹಣ ಪಾವತಿ, ಸಾಲ, ವಿಮೆ, ಮತ್ತು ಪಿಂಚಣಿ ಇತ್ಯಾದಿ ಹಣಕಾಸು ಸೇವೆಗಳು ಎಲ್ಲಾ ವರ್ಗದವರಿಗೂ ಲಭ್ಯವಾಗಬೇಕು ಎಂಬ ಆಶಯವನ್ನು ಒಳಗೊಂಡಿದೆ. 2014 ರ ಆಗಸ್ಟ್ 15 ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಹಣಕಾಸು ಅಂತರ್ಗತಗೊಳಿಸುವ ಕಾರ್ಯಕ್ಕೆ ಆರಂಭವನ್ನು ನೀಡಿದರು, 2014 ರ ಆಗಸ್ಟ್ 15 ರಂದು ಅವರು ತಮ್ಮ ಮೊದಲ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದರು. ಇದು ಯಾವುದೇ ಮಾನದಂಡದಲ್ಲಿ ಅತ್ಯಂತ ಶ್ಲಾಘನೀಯ ಪ್ರಯತ್ನವಾಗಿತ್ತು. ಆದರೆ ಅಂತಹ ಖಾತೆ (2005 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಪರಿಚಯಿಸಲ್ಪಟ್ಟಿದೆ)ಗಳನ್ನು ಹೊಂದಿದವರು ಗ್ಯಾರಂಟಿ ಪಡೆಯುತ್ತಾರೆಯೇ, ಇವರಲ್ಲಿ ಅನೇಕರು ಹಣಕಾಸಿನ ವ್ಯವಹಾರದಲ್ಲಿ ಮೊದಲ ಹಂತವನ್ನು ತಲುಪುತ್ತಾರೆಯೇ, ಹಣಕಾಸಿನ ವಹಿವಾಟುಗಳಲ್ಲಿ ತೊಡಗುತ್ತಾರೆಯೇ ಎಂಬ ಅನುಮಾನಗಳು ಮೂಡಿತ್ತು. ಆದರೆ ಈ ಬಗ್ಗೆ ಹಲವಾರು ಸಂಶೋಧಕರು ಇತ್ತೀಚೆಗೆ ಸಾಕಷ್ಟು ವಿಂಟೇಜ್ ಡಾಟಾವನ್ನು ನೀಡಿದ್ದು, ಜನ್ಧನ್ ಖಾತೆಗಳು ಮಹತ್ವದ ಸಾಧನೆಯನ್ನು ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್ ಖಾತೆಗಳ ಸಂಖ್ಯೆ ಗಣನೀಯವಾಗಿ ಏರಿದೆ ಮತ್ತು ಸಮಾಜದ ಬಹುತೇಕ ಮಂದಿ ಇದರಿಂದಾಗಿ ಆರ್ಥಿಕ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದಿದ್ದಾರೆ.
2017 ರಲ್ಲಿ ಜಾರ್ಜ್ಟೌನ್ ಯೂನಿವರ್ಸಿಟಿ ಪ್ರಾಧ್ಯಾಪಕ ಸುಮಿತ್ ಅಗರ್ವಾಲ್ ಮತ್ತು ಅವರ ಸಹ-ಲೇಖಕರು ಆಗಸ್ಟ್ 2014 ರಿಂದ ಮೇ 2015 ರವರೆಗಿನ 1.5 ಮಿಲಿಯನ್ ಜನ್ಧನ್ ಖಾತೆಗಳಲ್ಲಿನ ಚಟುವಟಿಕೆಯನ್ನು ಅಧ್ಯಯನ ಮಾಡಿದ್ದಾರೆ. ಪ್ರಾರಂಭದಲ್ಲಿ ಖಾತೆಗಳ ಬಳಕೆ ನಿಧಾನಗತಿಯಲ್ಲಿತ್ತು. ಮೊದಲ ಆರು ತಿಂಗಳಲ್ಲಿ ಶೇ.81ರಷ್ಟು ಹೊಸ ಗ್ರಾಹಕರು ಯಾವುದೇ ಮೊತ್ತವನ್ನು ಠೇವಣಿ ಇಟ್ಟಿರಲಿಲ್ಲ. ಆದರೆ ಹಣಕಾಸು ಸೇವೆಗಳ ಬಗ್ಗೆ ಅವರಲ್ಲಿ ಜಾಗೃತಿ ಹೆಚ್ಚಾದಂತೆ ಜನರು ಪ್ರಬುದ್ಧಗೊಂಡರು. ಒಂದು ವರ್ಷದೊಳಗೆ, ಹಣದ ಒಳಗೊಳ್ಳುವಿಕೆ ಮತ್ತು ಠೇವಣಿ ಮತ್ತು ವಾಪಸಾತಿ ವಹಿವಾಟುಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡವು. ಬೇಡಿಕೆ ಜೊತೆಗೆ, ಹಣಕಾಸಿನ ಉತ್ಪನ್ನಗಳ ಪೂರೈಕೆಯು ಏರಿತು ಎಂಬುದನ್ನು ಇವರು ಕಂಡುಕೊಂಡಿದ್ದಾರೆ.
ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಸಂಶೋಧಕರಾಗಿರುವ ಯಕ್ಷಪ್ ಚೋಪ್ರಾ ಮತ್ತು ಪ್ರಸನ್ನ ತಂತ್ರಿ, ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಪ್ರಾಧ್ಯಾಪಕ ನಾಗಪುರಾಣಾನಂದ ಆರ್. ಪ್ರಭಾಲಾ ಅವರು ತಮ್ಮ ಸಮಕಾಲೀನ ಅಧ್ಯಯನದಲ್ಲಿ, ಆಗಸ್ಟ್ 2014 ರಿಂದ ಅಕ್ಟೋಬರ್ 2016 ರವರೆಗೆ 3,೦೦೦ ಕ್ಕಿಂತ ಹೆಚ್ಚು ಜನ್ಧನ್ ಖಾತೆಗಳ ಚಟುವಟಿಕೆಗಳನ್ನು ಪತ್ತೆ ಮಾಡಿದ್ದಾರೆ. ಅವರ ವಿಶ್ಲೇಷಣೆಯಂತೆ, ಜನ್ಧನ್ ಖಾತೆಗಳು ಸಮಕಾಲೀನವಾಗಿ ಏರಿಕೆಯಾಗುತ್ತಿದೆ, ಅವುಗಳ ಚಟುವಟಿಕೆಗಳು ಏರುತ್ತಿದೆ. ಜನ್ಧನ್ ಸರಾಸರಿ ಖಾತೆಯ ಸಮತೋಲನವು ದ್ವಿಗುಣಗೊಳ್ಳುತ್ತಿದೆ ಎಂಬುದು ತಿಳಿದು ಬಂದಿದೆ. ಅಗರ್ವಾಲ್ ಮತ್ತು ಅವರ ಸಹ-ಲೇಖಕರು ಗಮನಿಸಿದ “ಕಲಿಕೆ” ವಿದ್ಯಮಾನದಂತೆಯೇ, ಈ ಸಂಶೋಧಕರು ಜನ್ಧನ್ ಖಾತೆಯ ಮಾಲೀಕರ ಎಟಿಎಂ ಬಳಕೆ ಹೆಚ್ಚಳವಾಗಿದೆ. ಆತನ ಖಾತೆ ಮಾಲೀಕತ್ವವನ್ನು ಮತ್ತು ಹಣಕಾಸಿನ ಸೇವೆಗಳ ಬಳಕೆಗೆ ಅನುಗುಣವಾಗಿ, ಜನ್ಧನ್ ಕೂಡ ಸಹ ಸುಗಮವಾಗಿದೆ. ಸಾಮಾಜಿಕ ಆರ್ಥಿಕ ಸವಾಲುಗಳು ಈಗ ಕ್ಷೀಣಿಸುತ್ತಿವೆ. ಮಹಿಳೆಯರು, ಕಡಿಮೆ ಆದಾಯದ ವ್ಯಕ್ತಿಗಳು, ಗ್ರಾಮೀಣ ನಿವಾಸಿಗಳು, ಮತ್ತು ಕಡಿಮೆ ವಿದ್ಯಾವಂತರು ಜನಧನ್ ಯೋಜನೆಯಿಂದಾಗಿ ಬ್ಯಾಂಕ್ ಖಾತೆ ಮಾಲೀಕತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡಿದ್ದಾರೆ. ಹಣಕಾಸು ಸಂಸ್ಥೆಗಳ ಅಪನಂಬಿಕೆಯನ್ನು ತೊಡೆದು ಹಾಕಿದೆ ಮತ್ತು ಬ್ಯಾಂಕ್ ಎಷ್ಟೇ ದೂರವಿದ್ದರೂ ಜನರ ಚಿಂತೆಯಿಲ್ಲದೆ ಬ್ಯಾಂಕ್ ವಹಿವಾಟನ್ನು ಎಟಿಎಂ ಇತ್ಯಾದಿಗಳ ಮೂಲಕ ನಡೆಸುತ್ತಿದ್ದಾರೆ.
ಜನ್ಧನ್: ನೇರ ಪ್ರಯೋಜನ ವರ್ಗಾವಣೆ & ಜೆಎಎಂ
ಉದ್ಯೋಗದ ವಲಯಕ್ಕೆ ಜನ್ಧನ್ ಅಗ್ರಗಣ್ಯ ಪ್ರಭಾವವನ್ನು ಬೀರಿದೆ. ಇದು ದೇಶದ ಜನರ ಉಳಿತಾಯ ಹವ್ಯಾಸವನ್ನು ಹೆಚ್ಚಿಸಿದೆ. ಜನ್ಧನ್ ಅಡಿಯಲ್ಲಿರುವ ವಿವಿಧ ಅಂಗಸಂಸ್ಥೆಗಳಿಂದಾಗಿ ದೇಶದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಿನ ಜನರಿಗೆ ದೊರೆತಿದೆ. ಜನ್ಧನ್ ವಿವಿಧ ಸಬ್ಸಿಡಿಸಹಿತ ಯೋಜನೆಗಳಿಂದಾಗಿ ಮತ್ತು ಅದರ ಪ್ರಯೋಜನ ಪಡೆಯುವ ಜನರಿಂದಾಗಿ ನಾವು ಉದ್ಯೋಗ ಸೃಷ್ಟಿಯ ಅಂದಾಜು ಲೆಕ್ಕಾಚಾರ ಹಾಕಬಹುದಾಗಿದೆ.
ಕಲ್ಯಾಣ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಪರಿಣಾಮವಾಗಿ ಸರ್ಕಾರದ “ಉಳಿತಾಯ” ಸುಮಾರು 1.1 ಲಕ್ಷ ಕೋಟಿ ತಲುಪಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಡಿಸೆಂಬರ್ 31, 2018 ರವರೆಗೂ ಇದನ್ನು ನವೀಕರಿಸಲಾಗಿದೆ. ವಿವಿಧ ಸಬ್ಸಿಡಿಗಳನ್ನು ಸ್ವೀಕರಿಸಿದ ದಾಖಲೆಗಳಿಂದ 80 ಮಿಲಿಯನ್ ನಕಲಿ ಫಲಾನುಭವಿಗಳನ್ನು ಕಳೆದುಕೊಳ್ಳಲಾಗಿದೆ. ಇದು ಮಹತ್ತರವಾದ ಸಾಧನೆಯಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ನೇರ ವರ್ಗಾವಣೆ ನಿಲುವಿನ ಲೆಕ್ಕಾಚಾರದಿಂದ ಒಟ್ಟು ಉಳಿತಾಯ ಡಿಸೆಂಬರ್ 31ರಿಂದ ಮಾರ್ಚ್ 31, 2೦18 ರವರೆಗೆ 90,000 ಕೋಟಿ ರೂ.ನಿಂದ 1,09,983ಕೋಟಿ ರೂ.ಗೆ ಏರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇವಲ 20 ಸಾವಿರ ಕೋಟಿ ರೂ. ಉಳಿತಾಯವಾಗಿದೆ.
ದಾಖಲೆಗಳಿಂದ ತೆಗೆದುಹಾಕಲಾದ ನಕಲಿ ಫಲಾನುಭವಿಗಳ ಸಂಖ್ಯೆ 80 ದಶಲಕ್ಷಕ್ಕೆ ಏರಿಕೆಯಾಗಿದೆ ಮತ್ತು ನೇರ ವರ್ಗಾವಣೆ ಅಡಿಯಲ್ಲಿ ಒಟ್ಟು ಪಾವತಿಯ ಮೊತ್ತವು 9,05,900 ಕೋಟಿ ರೂ. ಆಗಿದೆ. “ಇದು ನೇರ ವರ್ಗಾವಣೆಯ ಮೂಲಕ ಒಟ್ಟು ಪಾವತಿಯ ಆರನೇಯ ಒಂದು ಭಾಗವನ್ನು ಉಳಿತಾಯವಾಗಿರುವುದನ್ನು ತೋರಿಸುತ್ತದೆ, ಇಲ್ಲದಿದ್ದರೆ ಅಸ್ತಿತ್ವದಲ್ಲಿಲ್ಲದ ಫಲಾನುಭವಿಗಳಿಗೆ ಹಣ ಸೋರಿಕೆಯಾಗುತ್ತಿತ್ತು. ಭ್ರಷ್ಟಾಚಾರ-ಮುಕ್ತ ಸರ್ಕಾರವು ಸಾರ್ವಜನಿಕ ಹಣವನ್ನು ಹೇಗೆ ಉಳಿಸಿದೆ ಎಂಬುದನ್ನು ತೋರಿಸಿ 2೦19 ರ ಚುನಾವಣೆಯಲ್ಲಿ ಬಿಜೆಪಿ ಮಹತ್ವದ ಜಯವನ್ನು ಪಡೆದುಕೊಳ್ಳುವ ಅವಕಾಶವಿದೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ.
ಜನವರಿ 22 ರಂದು ನಡೆದ 15 ನೇ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 5,80,000 ಕೋಟಿ ರೂ. ಹಣವನ್ನು ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದ್ದಾಗಿ ಮತ್ತು 70 ಮಿಲಿಯನ್ ನಕಲಿ ಫಲಾನುಭವಿಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಲಕ್ಷಾಂತರ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಒಂದು ದೊಡ್ಡ ಸವಾಲಾಗಿತ್ತು, ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಬಳಸಲು ಪ್ರಾರಂಭಿಸುವಂತೆ ಮಾಡಲು ಅವರ ಹವ್ಯಾಸವನ್ನು ಬದಲಾಯಿಸುವುದು ಮತ್ತೊಂದು ಪ್ರಮುಖ ಸವಾಲಾಗಿತ್ತು. ಶೂನ್ಯ ಠೇವಣಿ ಖಾತೆಗಳ ಸಂಖ್ಯೆ 2014 ಸೆಪ್ಟಂಬರ್ನಲ್ಲಿ 76.8% ಇದ್ದು, 2015ರ ಡಿಸೆಂಬರ್ ವೇಳೆಗೆ ಇದು 32.4% ಕ್ಕೆ ಇಳಿಮುಖವಾಗಿದೆ. 131 ಕೋಟಿಗಳಿಗೂ ಹೆಚ್ಚಿನ ಹಣವನ್ನು ಓವರ್ ಡ್ರಾಫ್ಟ್ ಆಗಿ ಪಡೆದುಕೊಳ್ಳಲಾಗಿದೆ. ಪ್ರಧಾನಿ ಮೋದಿ ಅವರ ಶ್ರಮ ಮತ್ತು ಅವರು ಜನಸಾಮಾನ್ಯರ ಶಕ್ತಿ ಮೇಲೆ ಇಟ್ಟ ನಂಬಿಕೆ ಮತ್ತು ಸರಕಾರಿ ಯಂತ್ರಗಳ ಕಾರ್ಯಕ್ಷಮತೆಯ ಕಾರಣದಿಂದಾಗಿ ಇದು ಸಾಧ್ಯವಾಗಿದೆ. ಈ ಅಗಾಧ ಕೆಲಸವನ್ನು ಅಭಿಯಾನದ ಮಾದರಿಯಲ್ಲಿ ನಡೆಸಲಾಗಿದೆ ಮತ್ತು ಸರ್ಕಾರದ ಮತ್ತು ಸಾರ್ವಜನಿಕರ ಒಂದು ಆದರ್ಶಪ್ರಾಯ ಪಾಲುದಾರಿಕೆ ಮತ್ತು ಭಾಗವಹಿಸುವಿಕೆಯೊಂದಿಗೆ ಈ ಮಹತ್ತರವಾದ ಮೈಲಿಗಲ್ಲನ್ನು ಸಾಧಿಸಲಾಗಿದೆ.
ಬ್ಯಾಂಕ್ ಖಾತೆಗಳ ಮೂಲಕ ಲಕ್ಷಾಂತರ ಭಾರತೀಯರಿಗೆ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶ ಸಿಕ್ಕಿದೆ, ಅವರು ಭ್ರಷ್ಟಾಚಾರವನ್ನು ನಿಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಲಾಗಿದೆ. ಈಗ, ಸಬ್ಸಿಡಿಗಳು ನೇರಲಾಭ ವರ್ಗಾವಣೆಯ ರೂಪದಲ್ಲಿ ನೇರವಾಗಿ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಆಗುತ್ತಿವೆ. ಪಹಲ್ ಯೋಜನೆ ಇತ್ತೀಚೆಗೆ ವಿಶ್ವದ ಅತಿ ದೊಡ್ಡ ನೇರ ನಗದು ವರ್ಗಾವಣೆ ಯೋಜನೆಯೆಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪ್ರವೇಶಿಸಿದೆ. ಪಹಲ್ ಯೋಜನೆಯಡಿ, ಎಲ್ಪಿಜಿ ಸಬ್ಸಿಡಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಹಾಕಲಾಗುತ್ತದೆ. ಈ ಯೋಜನೆಯಡಿ, 14.69 ಕೋಟಿ ಜನರಿಗೆ ನೇರ ನಗದು ಸಬ್ಸಿಡಿಗಳು ದೊರೆಯುತ್ತವೆ. ಈ ಯೋಜನೆಯು ಸುಮಾರು 3.34 ಕೋಟಿ ನಕಲು ಅಥವಾ ನಿಷ್ಕ್ರಿಯ ಖಾತೆಗಳನ್ನು ಗುರುತಿಸಲು ಸಹಾಯ ಮಾಡಿದೆ ಮತ್ತು ಸಾವಿರಾರು ಕೋಟಿಗಳನ್ನು ಉಳಿಸಲು ಸಹಾಯ ಮಾಡಿದೆ. ಪ್ರಸ್ತುತ, ಸರ್ಕಾರ 35-40 ಯೋಜನೆಗಳಿಗೆ ನೇರ ಲಾಭ ವರ್ಗಾವಣೆಯನ್ನು ಬಳಸುತ್ತಿದೆ ಮತ್ತು 2015ರಿಂದ ಫಲಾನುಭವಿಗಳಿಗೆ ನೇರವಾಗಿ 40,000 ಕೋಟಿ ರೂ. ನೇರ ವರ್ಗಾವಣೆಯನ್ನು ಮಾಡಲಾಗಿದೆ.
source: inreportcard
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.