ನವದೆಹಲಿ: ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಏರೋನ್ಯಾಟಿಕ್ಸ್ ಆಂಡ್ ಅಸ್ಟ್ರೋನಾಟಿಕ್ಸ್(ಎಐಎಎ) ಕೊಡುವ ಪ್ರತಿಷ್ಟಿತ ‘ಮಿಸೈಲ್ ಸಿಸ್ಟಮ್ ಅವಾರ್ಡ್’ ಈ ಬಾರಿ ಡಿಆರ್ಡಿಓದ ಮುಖ್ಯಸ್ಥ ಜಿ.ಸತೀಶ್ ರೆಡ್ಡಿಯವರಿಗೆ ಸಿಕ್ಕಿದೆ.
‘ದೇಶೀಯ ವಿನ್ಯಾಸ, ಅಭಿವೃದ್ಧಿಯ ಹಾಗೂ ವೈವಿಧ್ಯ ಕಾರ್ಯತಾಂತ್ರಿಕ ಮತ್ತು ತಾಂತ್ರಿಕ ಮಿಸೈಲ್ ಸಿಸ್ಟಮ್ನ ನಿಯೋಜನೆಯಲ್ಲಿ ರಾಷ್ಟ್ರಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿರುವ ಹಿನ್ನಲೆಯಲ್ಲಿ ಸತೀಶ್ ರೆಡ್ಡಿಯವರನ್ನು ’2019 ಮಿಸೈಲ್ ಸಿಸ್ಟಮ್’ ಅವಾರ್ಡ್ಗೆ ಆಯ್ಕೆ ಮಾಡಲಾಗಿದೆ’ ಎಂದು ಎಐಎಎ ಪ್ರಕಟನೆಯಲ್ಲಿ ತಿಳಿಸಿದೆ.
ರೆಡ್ಡಿಯವರು ಅಗ್ನಿ-ವಿ ಇಂಟರ್ಕಾಂಟಿನೆಂಟಲ್ ಬ್ಯಾಲೆಸ್ಟಿಕ್ ಮಿಸೈಲ್(ಐಸಿಬಿಎಂ)ನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.
’ಮಿಸೈಲ್ ಟೆಕ್ನಾಲಜಿಯ ಅನುಷ್ಠಾನದ ಅಭಿವೃದ್ಧಿಯಲ್ಲಿ ತೋರಿದ ಕೌಶಲ್ಯ ಮತ್ತು ಮಿಸೈಲ್ ಸಿಸ್ಟಮ್ನ ನಾಯಕತ್ವವನ್ನು ಈ ಅವಾರ್ಡ್ ಪರಿಗಣಿಸುತ್ತದೆ’ ಎಂದು ಎಐಎಎ ತಿಳಿಸಿದೆ.
ವಾರ್ಷಿಕ ಎರಡು ಮಂದಿಗೆ ಈ ಪ್ರಶಸ್ತಿ ದೊರೆಯುತ್ತದೆ, ಅರಿಝೋನಾದ ರೊಂಡೆಲ್ ಜೆ ವಿಲ್ಸನ್ ಅವರು ರೆಡ್ಡಿಯೊಂದಿಗೆ ಅವಾರ್ಡ್ ಪಡೆದ ಮತ್ತೊಮ್ಮೆ ನಾಯಕನಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.