ನವದೆಹಲಿ: ಅಕ್ರಮ ವಲಸೆ, ಶಸ್ತ್ರಾಸ್ತ್ರ, ಡ್ರಗ್ಸ್, ಗೋವುಗಳ ಅಕ್ರಮ ಸಾಗಾಣೆಯನ್ನು ಸಮರ್ಥವಾಗಿ ತಡೆಗಟ್ಟುವ ಸಲುವಾಗಿ ಮಂಗಳವಾರದಿಂದ ಅಸ್ಸಾಂನಲ್ಲಿನ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಎಲೆಕ್ಟ್ರಾನಿಕ್ ಕಣ್ಗಾವಲು ಆರಂಭವಾಗಲಿದೆ.
ಕೇಂದ್ರ ಗೃಹ ಸಚಿವಾಲಯದ ವರದಿಗಳ ಪ್ರಕಾರ, ಬ್ರಹ್ಮಪುತ್ರ ನದಿ ಬಾಂಗ್ಲಾವನ್ನು ಪ್ರವೇಶಿಸುವ ಅಸ್ಸಾಂನ ಧುಬ್ರಿ ಜಿಲ್ಲೆಯ ಸುಮಾರು 61 ಕಿಮೀ ಅಂತಾರಾಷ್ಟ್ರೀಯ ಗಡಿಗೆ ‘ಸ್ಮಾರ್ಟ್ ಫೆನ್ಸಿಂಗ್’ ಅಳವಡಿಸಲಾಗುತ್ತಿದೆ.
ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆಯಡಿಯಲ್ಲಿ (ಬಾರ್ಡರ್ ಎಲೆಕ್ಟ್ರಾನಿಕಲಿ ಡಾಮಿನೇಟೆಡ್ ಕ್ಯೂಆರ್ಟಿ ಇಂಟರ್ಸೆಪ್ಷನ್ ಟೆಕ್ನಿಕ್) ಪ್ರಾಜೆಕ್ಟ್ನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಉದ್ಘಾಟನೆಗೊಳಿಸಲಿದ್ದಾರೆ.
ಮಣ್ಣಿನ ಐಸ್ಲ್ಯಾಂಡ್ ’ಚರ್’ಗಳನ್ನು ಮತ್ತು ಹಲವಾರು ಉಪನದಿಗಳನ್ನು ಒಳಗೊಂಡ ಭಾರತ-ಬಾಂಗ್ಲಾದೇಶ ಗಡಿಯನ್ನು ಈ ಪ್ರದೇಶ ಒಳಗೊಳ್ಳಲಿದೆ. ಮಳೆಗಾಲದ ಸಂದರ್ಭ ಈ ಗಡಿಯನ್ನು ಕಾಯುವುದು ಅತ್ಯಂತ ಅಪಾಯಕಾರಿಯಾದ ಕಾರ್ಯವಾಗಿತ್ತು.
ಬಿಎಸ್ಎಫ್ನ ಮಾಹಿತಿ ಮತ್ತು ತಾಂತ್ರಿಕ ವಿಭಾಗ ಪ್ರಾಜೆಕ್ಟ್ನ್ನು 2018ರ ಜನವರಿಯಲ್ಲಿ ಕೈಗೆತ್ತಿಕೊಂಡಿತ್ತು, ಇದೀಗ ಪ್ರಾಜೆಕ್ಟ್ ವಿವಿಧ ಉತ್ಪಾದಕರ ಮತ್ತು ಪೂರೈಕೆದಾರರ ಬೆಂಬಲದೊಂದಿಗೆ ರೆಕಾರ್ಡ್ ಟೈಮ್ನಲ್ಲಿ ಮುಕ್ತಾಯಗೊಂಡಿದೆ.
ಬಿಎಸ್ಎಫ್ 4,096 ಕಿಮೀ ಉದ್ದದ ಬಾಂಗ್ಲಾದೇಶದೊಂದಿಗಿನ ಅಂತಾರಾಷ್ಟ್ರೀಯ ಗಡಿಯನ್ನು ಕಾಯುತ್ತಿದೆ. ಸ್ಮಾರ್ಟ್ ಫೆನ್ಸಿಂಗ್ ಅಳವಡಿಕೆಯಿಂದ ಬಿಎಸ್ಎಫ್ಗೆ ಅಪರಾಧಿ ಕೃತ್ಯಗಳನ್ನು ತಡೆಯಲು ಸಹಕಾರಿಯಾಗಲಿದೆ. ಕ್ಲಿಷ್ಟಕರ ಭೂಪ್ರದೇಶಗಳಲ್ಲಿ ಫೆನ್ಸ್ ಅಳವಡಿಕೆ ಸಾಧ್ಯವಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.