ನವದೆಹಲಿ: ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರೀವಾಬಾ ಜಡೇಜಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕರ್ಣಿ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ರಿವಾಬಾ ಜಡೇಜಾ ಅವರು ಗುಜರಾತಿನ ಜಮ್ನಗರದ ಬಿಜೆಪಿ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುಜರಾತಿನ ಕೃಷಿ ಸಚಿವ ರಾಂಚೋ ಫಾಲ್ಡು ಅವರು ಭಾಗಿಯಾಗಿದ್ದಾರೆ. ಜಮ್ನಾಗರ ರವೀಂದ್ರ ಜಡೇಜಾ ಅವರ ತವರೂರು ಕೂಡ ಆಗಿದೆ.
ನನಗೆ ನರೇಂದ್ರ ಮೋದಿಯವರು ಸ್ಫೂರ್ತಿ, ಅದೇ ಕಾರಣಕ್ಕೆ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಬಿಜೆಪಿ ಸೇರಿರುವದರ ಮೂಲಕ ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನನ್ನ ಸೇವೆ ಸಲ್ಲಿಸಲು ನನಗೆ ಅವಕಾಶ ದೊರಕಿದೆ ಎಂದು ರೀವಾಬಾ ಹೇಳಿದ್ದಾರೆ.
ರೀವಬಾ ಅವರು ರಾಜಸ್ಥಾನದ ಕರ್ಣಿ ಸೇನೆಯ ಮುಖ್ಯಸ್ಥೆಯಾಗಿಯೂ ನೇಮಕಗೊಂಡಿದ್ದಾರೆ. ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ರೀವಬಾ ಜಡೇಜಾ ಅವರು 2016ರಲ್ಲಿ ರವೀಂದ್ರ ಜಡೇಜಾ ಅವರನ್ನು ಮದುವೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.