ನವದೆಹಲಿ: ಲೆಜೆಂಡರಿ AK-47 ರೈಫಲ್ನ ಹೊಸ ಮಾದರಿ AK-203 ನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ಸರಕಾರವು ರಷ್ಯಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ರಷ್ಯಾ ಸಂಸ್ಥೆಯು 750,000 AK-203 ರೈಫಲ್ಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಲಿದೆ.
ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, AK-203 ರೈಫಲ್ ಪ್ರಸ್ತುತ ಭಾರತೀಯ ವಾಯುಸೇನೆ, ಭೂ ಸೇನೆ ಮತ್ತು ನೌಕಾ ಸೇನೆಯಲ್ಲಿ ಇರುವ ಐಎನ್ಎಸ್ಎಎಸ್ ಅಸಾಲ್ಟ್ ರೈಫಲ್ನ್ನು ರಿಪ್ಲೇಸ್ ಮಾಡಲಿದೆ. ರಷ್ಯಾ ಸಂಸ್ಥೆಯು ಈ ಅತ್ಯಾಧುನಿಕ ಅಸಾಲ್ಟ್ ರೈಫಲ್ನ್ನು ಭಾರತಕ್ಕೆ ಹಸ್ತಾಂತರ ಮಾಡಿದ ಬಳಿಕ ಸರ್ಕಾರವು ಇದನ್ನು ಪ್ಯಾರಾ ಮಿಲಿಟರಿ ಮತ್ತು ರಾಜ್ಯ ಪೊಲೀಸ್ ಪಡೆಗಳಿಗೆ ಒದಗಿಸಲಿದೆ.
ಭಾರತದಲ್ಲಿನ ಎಲ್ಲಾ ಭದ್ರತಾ ಪಡೆಗಳು AK-203 ಗುಣಮಟ್ಟದ ಶಸ್ತ್ರಾಸ್ತ್ರವನ್ನು ಮುಂದಿನ 10-15 ವರ್ಷಗಳಲ್ಲಿ ಹೊಂದಲಿದೆ. ಅಲ್ಲದೆ ಕೇಂದ್ರ ರಕ್ಷಣಾ ಸಚಿವಾಲಯ ಈಗಾಗಲೇ ಅಮೆರಿಕನ್ sig sauer ಅಸಾಲ್ಟ್ ರೈಫಲ್ ಖರೀದಿ ಮಾಡಲು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಸರಕಾರವು ಈ ರೈಫಲ್ನ್ನು ಬಂಡುಕೋರರನ್ನು ತಡೆಯಲು ಮತ್ತು ಇತರ ಕಾರ್ಯಾಚರಣೆಗಳಿಗೆ ವಿನಿಯೋಗಿಸಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.