ನವದೆಹಲಿ: ಜಗತ್ತಿನ ಅತೀ ದೊಡ್ಡ ಮಾನವ ಸಮಾವೇಶ ಎಂದು ಹೆಸರುವಾಸಿಯಾಗಿರುವ ಕುಂಭಮೇಳ ಇದೀಗ ವಿಶ್ವ ದಾಖಲೆಯನ್ನು ಮಾಡಿದೆ. ಅತಿ ದೊಡ್ಡ ಜನಸಂದಣಿ ನಿರ್ವಹಣೆ, ಅತೀ ದೊಡ್ಡ ನೈರ್ಮಲ್ಯ ಅಭಿಯಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅತೀ ದೊಡ್ಡ ಚಿತ್ರಕಲೆ ಈ ಮೂರು ವಿಭಾಗಗಳಲ್ಲಿ ಈ ಬಾರಿಯ ಕುಂಭ ಮೇಳವು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ನ ಮೂರು ಸದಸ್ಯರನ್ನು ಒಳಗೊಂಡ ತಂಡವು ಪ್ರಯಾಗರಾಜಗೆ ಫೆಬ್ರವರಿ 28 ರಿಂದ ಮಾರ್ಚ್ 3 ರವರೆಗೆ ಆಗಮಿಸಿತ್ತು. ಈ ತಂಡದ ಸಮ್ಮುಖದಲ್ಲೇ ಅತಿ ದೊಡ್ಡ ವಿಶ್ವ ದಾಖಲೆಯ ಕಾರ್ಯಗಳನ್ನು ನೆರವೇರಿಸಲಾಯಿತು. ಫೆಬ್ರವರಿ 28 ರಂದು ಸುಮಾರು 503 ಸೆಟಲ್ ಬಸ್ಗಳನ್ನು ಹೈವೇಯಲ್ಲಿ ಸೇವೆಗಾಗಿ ನಿಯೋಜನೆಗೊಳಿಸಲಾಗಿತ್ತು, ಮಾರ್ಚ್ 1 ರಂದು ಹಲವಾರು ಮಂದಿ ಚಿತ್ರಕಲಾ ಅಭಿಯಾನದಲ್ಲಿ ಪಾಲ್ಗೊಂಡರು ಮತ್ತು ಸುಮಾರು ಹತ್ತು ಸಾವಿರ ಕಾರ್ಮಿಕರು ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಎಲ್ಲರೂ ಒಟ್ಟಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸಿದರು ಎಂದು ಸಂಸ್ಕೃತಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಜನವರಿ 4 ರಿಂದ ಪ್ರಯಾಗರಾಜ್ನಲ್ಲಿ ಕುಂಭಮೇಳವು ಆರಂಭಗೊಂಡಿದ್ದು ಮಾರ್ಚ್ 4 ರಂದು ಆರನೇ ಮತ್ತು ಅಂತಿಮ ಶಾಹಿ ಸ್ನಾನದೊಂದಿಗೆ ಮಹಾಶಿವರಾತ್ರಿಯ ಶುಭ ದಿನದಂದು ಕುಂಭಮೇಳವು ಸಮಾಪನಗೊಳ್ಳಲಿದೆ. ಇದುವರೆಗೆ ಅತ್ಯಂತ ಮಹತ್ವಪೂರ್ಣ 5 ಸ್ಥಾನಗಳು ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಈಗಾಗಲೇ ಇದರಲ್ಲಿ ಸುಮಾರು 22 ಕೋಟಿ ಭಕ್ತಾದಿಗಳು ಪವಿತ್ರ ಸ್ನಾನವನ್ನು ನೆರವೇರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.