ನವದೆಹಲಿ: ದೇಶದಾದ್ಯಂತ ಇಂದು ಮಹಾಶಿವರಾತ್ರಿಯ ಸಂಭ್ರಮ. ಎಲ್ಲಾ ಶಿವಾಲಯಗಳಲ್ಲೂ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಭಕ್ತರು ಭಜನೆ, ಶಿವ ನಾಮಸ್ಮರಣೆಯಲ್ಲಿ ನಿರತರಾಗಿದ್ದಾರೆ. ಯಮುನಾ, ಗಂಗಾ ನದಿಯಲ್ಲಿ ಭಕ್ತರು ಜಲಾಭಿಷೇಕ ಮಾಡುತ್ತಿದ್ದು, ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ. ಉಪವಾಸ ವ್ರತ ಮಾಡುತ್ತಿದ್ದಾರೆ.
ಮಹಾಶಿವರಾತ್ರಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
‘ಮಹಾಶಿವರಾತ್ರಿಯ ಶುಭ ದಿನದಂದು ಎಲ್ಲಾ ದೇಶವಾಸಿಗಳಿಗೂ ಶುಭ ಕಾಮನೆಗಳು, ಓಂ ನಮಃ ಶಿವಾಯ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
#Mahashivratri greetings to everyone. #महाशिवरात्रि के पावन अवसर पर सभी देशवासियों को बहुत-बहुत शुभकामनाएं।
ऊँ नम: शिवाय!
— Narendra Modi (@narendramodi) March 4, 2019
ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುವ ಮಹಾಶಿವರಾತ್ರಿ ಹಬ್ಬದಂದು ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಲಾಗುತ್ತದೆ. 4 ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.
ಶಿವರಾತ್ರಿಯ ದಿನ ರಾತ್ರಿ ಪೂಜೆ ವಿಶೇಷವಾಗಿದ್ದು, ಮಹಾಪೂಜೆ, ಭಜನೆ ಜಾಗರಣೆ ನಡೆಯುತ್ತದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳಗಿಸು ಎಂದು ಆ ಪರಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನವನ್ನು ಕಳೆದು ಶಿವನು ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ. ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವಪತ್ರೆಯನ್ನು ಅರ್ಪಿಸಿ, ಅಭಿಷೇಕ ಮಾಡಿ ಆರಾಧಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.