ನವದೆಹಲಿ: ಫೆಬ್ರವರಿ ತಿಂಗಳಲ್ಲಿ ಜಿಎಸ್ಟಿ ಆದಾಯ ಸಂಗ್ರಹ, 2018ರ ಫೆಬ್ರವರಿಗಿಂತ ಶೇ.13.12ರಷ್ಟು ಹೆಚ್ಚಳವಾಗಿದೆ. ರೂ.97,247 ಕೋಟಿಯನ್ನು ಈ ವರ್ಷ ಸಂಗ್ರಹ ಮಾಡಲಾಗಿದೆ. ಇದರಲ್ಲಿ ಸಿಜಿಎಸ್ಟಿ ರೂ.17,629ಕೋಟಿಯಾದರೆ, ಎಸ್ಜಿಎಸ್ಟಿ ರೂ.24,192 ಕೋಟಿಯಾಗಿದೆ. ಉಳಿದ ಮೊತ್ತ ಐಜಿಎಸ್ಟಿಯಿಂದ ಸಂಗ್ರಹವಾಗಿದೆ.
ಹಿಂದಿನ ತಿಂಗಳಿನಿಂದ ಈ ತಿಂಗಳು ರೂ.1.02 ಕೋಟಿ ಕಡಿಮೆ ಜಿಎಸ್ಟಿ ಸಂಗ್ರಹವಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ. ಈ ತಿಂಗಳ ಸೇಲ್ಸ್ ರಿಟರ್ನ್ಸ್ಗಳ ಅಥವಾ ಜಿಎಸ್ಟಿಆರ್-3ಬಿಗಳ ಸಂಖ್ಯೆ 73.48 ಲಕ್ಷವಾಗಿದೆ.
2018ರ ಡಿಸೆಂಬರ್ 22ರಂದು ಜಿಎಸ್ಟಿ ಮಂಡಳಿಯು, ಶೇ.28ರಷ್ಟು ತೆರಿಗೆ ದರವನ್ನು ಕೇವಲ ದುಬಾರಿ ಮತ್ತು ಕಡಿಮೆ ವಸ್ತುಗಳಿಗೆ ಮಾತ್ರ ಸೀಮಿತಗೊಳಿಸಿದೆ. ಉಳಿದ ವಸ್ತುಗಳ ತೆರಿಗೆ ದರವನ್ನು ಶೇ.28ರಿಂದ ಶೇ.18ಕ್ಕೆ ಇಳಿಸಿದೆ.
2019-20ರ ಸಾಲಿನಲ್ಲಿ ಜಿಎಸ್ಟಿ ಸಂಗ್ರಹದ ಟಾರ್ಗೆಟ್ನ್ನು ರೂ.13.71 ಲಕ್ಷ ಕೋಟಿಗೆ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.