ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ವಾಘಾ ಗಡಿಯ ಮೂಲಕ ಪಾಕಿಸ್ಥಾನ ಭಾರತಕ್ಕೆ ಹಸ್ತಾಂತರ ಮಾಡುವ ವೇಳೆ ಒಬ್ಬರು ಮಹಿಳೆ ಜೊತೆಗಿದ್ದರು. ಆ ಮಹಿಳೆ ಯಾರಾಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದರೆ ಆಕೆ ಬೇರೆ ಯಾರೂ ಅಲ್ಲ, ಪಾಕಿಸ್ಥಾನದ ವಿದೇಶಾಂಗ ಕಛೇರಿಯಲ್ಲಿ ಭಾರತಕ್ಕಿರುವ ವೈದ್ಯೆ ಡಾ.ಫರಿಹಾ ಬುಗ್ತಿ.
ಭಾರತ ಐಎಫ್ಎಸ್ ಅಧಿಕಾರಿಗಳಿಗೆ ಸಮಾನವಾಗಿ ಪಾಕಿಸ್ಥಾನದಲ್ಲಿರುವ ಎಫ್ಎಸ್ಪಿ (ಫಾರಿನ್ ಸರ್ವಿಸ್ ಆಫ್ ಪಾಕಿಸ್ಥಾನ) ಅಧಿಕಾರಿ, ಪಾಕಿಸ್ಥಾನ ವಿದೇಶಾಂಗ ಕಛೇರಿಯಲ್ಲಿ ಭಾರತದ ವ್ಯವಹಾರಗಳನ್ನು ಅವರು ನೋಡಿಕೊಳ್ಳುತ್ತಾರೆ. ಪಾಕಿಸ್ಥಾನದ ಬಂಧನದಲ್ಲಿರುವ ಭಾರತೀಯ ವ್ಯಕ್ತಿ ಕುಲಭೂಷಣ್ ಯಾದವ್ ಅವರ ಪ್ರಕರಣವನ್ನೂ ಇವರೇ ನಿಭಾಯಿಸುತ್ತಿದ್ದಾರೆ. ಕುಲಭೂಷಣ್ ಅವರ ತಾಯಿ ಮತ್ತು ಪತ್ನಿ 2017ರಲ್ಲಿ ಇಸ್ಲಾಮಾಬಾದ್ಗೆ ತೆರಳಿದ್ದ ಸಂದರ್ಭದಲ್ಲೂ ಬುಗ್ತಿ ಅವರ ಜೊತೆಗಿದ್ದರು.
ನೆದರ್ಲ್ಯಾಂಡ್ನಲ್ಲಿ ಕುಲಭೂಷಣ್ ಯಾದವ್ ಪ್ರಕರಣದ ವಿಚಾರಣೆ ನಡೆದ ಸಂದರ್ಭದಲ್ಲೂ ಅವರು ಅಲ್ಲಿ ಉಪಸ್ಥಿತರಿದ್ದರು. 2005ರಿಂದ ಪಾಕಿಸ್ಥಾನದ ವಿದೇಶಾಂಗ ಕಛೇರಿಯಲ್ಲಿ ವೃತ್ತಿ ಮಾಡುತ್ತಿರುವ ಅವರು, 2007ರಲ್ಲಿ ವಿದೇಶಾಂಗ ವಕ್ತಾರೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಅಭಿನಂದನ್ ಅವರನ್ನು ಹಸ್ತಾಂತರ ಮಾಡಿದ ಸಂದರ್ಭ ರಾತ್ರಿ 9.20ರ ಸುಮಾರಿಗೆ ಬುಗ್ತಿ ಅವರು ಅಭಿನಂದನ್ ಮತ್ತು ಪಾಕ್ ಸೈನಿಕರ ಜೊತೆ ಝೀರೋ ಲೈನ್ನಲ್ಲಿ ನಡೆದುಕೊಂಡು ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.