ನವದೆಹಲಿ: ದೇಶದ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಮಿಗ್ 21 ವಿಮಾನವನ್ನು ಹಾರಿಸುವುದು ಒಂಥರಾ ಕುಟುಂಬದ ಸಂಪ್ರದಾಯವಿದ್ದಂತೆ. ಯಾಕೆಂದರೆ ಅವರ ತಂದೆ ಮಾಜಿ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್ ಅವರೂ ಈ ವಿಮಾನವನ್ನು ಹಾರಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಅವರು ನಿವೃತ್ತರಾಗಿದ್ದಾರೆ. ಅಭಿನಂದನ್ ಅವರ ಅಜ್ಜನೂ ವಾಯುಪಡೆಯಲ್ಲಿ ಇದ್ದವರು. ಆದರೆ ರಷ್ಯಾ ನಿರ್ಮಿತ ಮಿಗ್-21 ವಿಮಾನದಲ್ಲಿ ಅಭಿನಂದನ್ ಅವರು ಪಾಕಿಸ್ಥಾನದ ಅತ್ಯಾಧುನಿಕ ಎಫ್ 16ನ್ನು ಹೊಡೆದುರುಳಿಸಿದ್ದೇ ಒಂದು ರೋಚಕ ಸಂಗತಿ ಎಂದು ತಜ್ಞರು ಹೇಳುತ್ತಾರೆ.
ರಷ್ಯಾ ಮೂಲದ ಮಿಗ್-21 ಜೆಟ್ಗಳು ಕಳೆದ 50 ವರ್ಷಗಳಿಂದ ಭಾರತೀಯ ವಾಯುಸೇನೆಯಲ್ಲಿವೆ. ರಷ್ಯಾ ತಂತ್ರಜ್ಞಾನವನ್ನು ಹೊಂದಿರುವ ಇವುಗಳನ್ನು ಎಚ್ಎಎಲ್ ಕಾಲ ಕಾಲಕ್ಕೆ ಮೇಲ್ದರ್ಜೆಗೇರಿಸುತ್ತಾ ಬಂದಿದೆ. ಇವುಗಳ ಆಧುನಿಕ ರೂಪವನ್ನು ಮಿಗ್ 21 ಬೈಸನ್ ಎಂದು ಕರೆಯಲಾಗುತ್ತದೆ. ಪಾಕಿಸ್ಥಾನದ ವಿಮಾನಗಳನ್ನು ಚೇಸ್ ಮಾಡುವ ವೇಳೆ ಅಭಿನಂದನ್ ಬಳಸಿದ್ದು ಇದೇ ಮಿಗ್ 21 ಬೈಸನ್ ಜೆಟ್ನ್ನು. ಆದರೆ ಅಷ್ಟೊಂದು ಆಧುನಿಕವಲ್ಲದ ಈ ಜೆಟ್ ನಲ್ಲಿ R-73E air-to-air missileನ್ನು ಬಳಸಿ ಅಮೆರಿಕಾ ನಿರ್ಮಿತ ಅತ್ಯಾಧುನಿಕ ಎಫ್-16ನನ್ನು ಅಭಿನಂದನ್ ಅವರು ಹೊಡೆದುರುಳಿಸಿದ್ದಾರೆ ಎಂಬುದೇ ವಿಶೇಷ. ಇಲ್ಲಿ ಪೈಲೆಟ್ ಆಗಿ ಅಭಿನಂದನ್ ಚಾಣಾಕ್ಷ್ಯತನವನ್ನು ಮೆರೆದಿದ್ದಾರೆ.
ತನ್ನ 50 ವರ್ಷಗಳ ಇತಿಹಾಸದಲ್ಲಿ ಮಿಗ್ 21 ಹಲವಾರು ಬಾರಿ ಎಫ್16 ವಿರುದ್ಧ ಹೋರಾಟಕ್ಕಿಳಿದಿವೆ. ಆದರೆ ಎಲ್ಲೂ ಜಯಗಳಿಸಿದ ಉದಾಹರಣೆಯೇ ಇಲ್ಲ. ಇದನ್ನು ನಿರ್ಮಿಸಿದ ರಷ್ಯಾದ ಪೈಲೆಟ್ಗಳಿಗೂ ಈ ಸಾಹಸವನ್ನು ಮಾಡಲಾಗಿಲ್ಲ. ಮಿಗ್ 21ಗಳು ಕಾದಾಟದ ವೇಳೆ ಪತನಗೊಂಡಿದ್ದೇ ಹೆಚ್ಚು. ಅದಕ್ಕಾಗಿಯೇ ಇವುಗಳನ್ನು ಹಾರುವ ಶವ ಪೆಟ್ಟಿಗೆ ಎಂದು ವ್ಯಂಗ್ಯ ಮಾಡುವುದೂ ಉಂಟು. ಆದರೆ ಈ ವಿಮಾನದಲ್ಲಿ ಕುಳಿತು R-73E air-to-air missileನ್ನು ಬಳಸಿ ಅಭಿನಂದನ್ ಅವರು ಪಾಕಿಸ್ಥಾನದ ಶಕ್ತಿ ಎಂದೇ ಪರಿಗಣಿತವಾಗಿರುವ ಅಮೆರಿಕಾ ನಿರ್ಮಿತ ಅತ್ಯಾಧುನಿಕ ಎಫ್-16ನನ್ನು ಹೊಡೆದುರುಳಿಸಿದ್ದು ನಿಜಕ್ಕೂ ಒಂದು ರೋಚಕ ಸಾಧನೆಯಾಗಿದೆ.
ಅವರ ಧೈರ್ಯ ಮತ್ತು ಸಾಹಸದ ಪರಿಣಾಮವಾಗಿ ಅವರು ಎಫ್ 16ನನ್ನು ಹೊಡೆದುರುಳಿಸಿದ್ದಾರೆ. ವೈರಿ ದೇಶದಲ್ಲಿ ಬಂಧಿಯಾಗಿದ್ದರೂ ಒಂಚೂರು ವಿಚಲಿತಗೊಳ್ಳದೆ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಭಾರತಕ್ಕೆ ಆಗಮಿಸಿದ ವೇಳೆಯೂ ಅದೇ ಸ್ಥಿತಪ್ರಜ್ಞೆಯನ್ನು ಅವರು ಕಾಪಾಡಿಕೊಂಡಿದ್ದಾರೆ. ಭಾರತೀಯ ಸೈನಿಕನ ಪರಾಕ್ರಮ ಎಂಥದ್ದು ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.