ನವದೆಹಲಿ: ಹೊಸದಾಗಿ ಪದವಿ ಪಡೆದುಕೊಂಡಿರುವವರಿಗೆ ಇಂಡಸ್ಟ್ರೀ ಅಪ್ರೆಂಟಿಶಿಪ್ಸ್(ಕೈಗಾರಿಕ ಶಿಷ್ಯವೇತನ)ಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ‘ಶ್ರೇಯಸ್’ ಎಂಬ ಯೋಜನೆಯೊಂದನ್ನು ಜಾರಿಗೊಳಿಸಿದ್ದಾರೆ.
ಸ್ಕೀಮ್ ಫಾರ್ ಹೈಯರ್ ಎಜುಕೇಶನ್ ಯೂತ್ ಇನ್ ಅಪ್ರೆಂಟಿಶಿಪ್ಸ್ ಆಂಡ್ ಸ್ಕಿಲ್ಸ್( SHREYAS) ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವಾಲಯ ಮತ್ತು ಉದ್ಯಮಶೀಲತ್ವ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ, ಕೇಂದ್ರ ಕಾರ್ಮಿಕ ಸಚಿವಾಲಯಗಳನ್ನು ಒಳಗೊಂಡ ಯೋಜನೆ ಇದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಾವ್ಡೇಕರ್, ‘ಶಿಕ್ಷಣದೊಂದಿಗೆ ಕೌಶಲ್ಯ ಇಂದಿನ ಅವಶ್ಯಕತೆ ಮತ್ತು ಈ ನಿಟ್ಟಿನಲ್ಲಿ ಶ್ರೇಯಸ್ ಯೋಜನೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ಪದವಿ ಪಡೆದುಕೊಂಡು ವಿದ್ಯಾರ್ಥಿಗಳನ್ನು ಹೆಚ್ಚು ಕೌಶಲ್ಯಭರಿತರನ್ನಾಗಿ, ಸಮರ್ಥರನ್ನಾಗಿ, ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡಲಿದೆ. ಆರ್ಥಿಕ ಅವಶ್ಯಕತೆಯನ್ನು ನೀಗಿಸಲಿದೆ. ಆದಾಯಭರಿತ ಉದ್ಯೋಗವನ್ನು ಒದಗಿಸುವಲ್ಲಿ ಸಹಕಾರ ನೀಡಲಿದೆ’ ಎಂದಿದ್ದಾರೆ.
ಶ್ರೇಯಸ್ ಪೋರ್ಟಲ್ನಲ್ಲಿ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಲಾಗ್ ಇನ್ ಆಗಬೆಕಿದೆ ಮತ್ತು ಪ್ರತಿಫಲಾಧಾರಿತ ಬೇಡಿಕೆ ಮತ್ತು ಪೂರೈಕೆಯ ವಿವರವನ್ನು ನೀಡಬೇಕು. 2019ರ ಎಪ್ರಿಲ್-ಮೇನಿಂದ ಹೊಸ ಕೋರ್ಸುಗಳೂ ಆರಂಭವಾಗಲಿದೆ. ಸುಮಾರು 40 ಉನ್ನತ ಶಿಕ್ಷಣ ಸಂಸ್ಥೆಗಳು ಈ ಅಪ್ರೆಂಟಿಶಿಪ್ ಪ್ರೋಗ್ರಾಂನ್ನು ಪಡೆದುಕೊಳ್ಳಲು ಮುಂದಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.