ನವದೆಹಲಿ: ಪಂಜಾಬ್ನ ಫಿರೋಜಾಪುರ್ ಪ್ರದೇಶದಲ್ಲಿನ ಬಾರ್ಡರ್ ಔಟ್ಪೋಸ್ಟ್ನಿಂದ ಪಾಕಿಸ್ಥಾನದ ಗೂಢಚಾರಿಯೊಬ್ಬನನ್ನು ಬಿಎಸ್ಎಫ್ ಯೋಧರು ಬಂಧನಕ್ಕೊಳಪಡಿಸಿದ್ದಾರೆ.
ಗೂಢಾಚಾರಿಯನ್ನು 21 ವರ್ಷದ ಮೊಹಮ್ಮದ್ ಶಾರೂಖ್ ಎಂದು ಗುರುತಿಸಲಾಗಿದೆ. ಈತನ ಮೂಲ ಮೊರಾದಬಾದ್ ಎನ್ನಲಾಗಿದೆ.
ಆತನ ಬಳಿಯಿದ್ದ ಒಂದು ಪಾಕಿಸ್ಥಾನಿ ಫೋನ್ ಅನ್ನು ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಫೋನಿನ ಮೂಲಕ ಆತ ಪಾಕಿಸ್ಥಾನದ ಆರು ಸಂಶಯಾಸ್ಪದ ವಾಟ್ಸಾಪ್ ಗ್ರೂಪ್ನ ಸದಸ್ಯ ಎಂದು ತಿಳಿದು ಬಂದಿದೆ.
ಬೆಡ್ಶೀಟ್ನ್ನು ಹೊದ್ದುಕೊಂಡು ಔಟ್ಪೋಸ್ಟ್ ಬಳಿಕ ಫೋಟೋ ಕ್ಲಿಕ್ಕಿಸಲು ಪ್ರಯತ್ನಿಸುತ್ತಿದ್ದ ವೇಳೆ ಈತನನ್ನು ಬಂಧಿಸಲಾಗಿದೆ.
ಪಾಕಿಸ್ಥಾನ ಮತ್ತು ಭಾರತದ ನಡುವಣ ಸಂಬಂಧ ಉದ್ವಿಗ್ನಕ್ಕೆ ಹೋಗಿರುವ ಈ ಸಂದರ್ಭದಲ್ಲಿ ಪಾಕಿಸ್ಥಾನಿ ಗೂಢಾಚಾರಿಯ ಬಂಧನವಾಗಿದ್ದು ಮಹತ್ವದ ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.