ನವದೆಹಲಿ: ತಡವಾಗಿ ಕಛೇರಿಗೆ ಆಗಮಿಸುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ತಡವಾಗಿ ಬಂದರೆ ಶಿಸ್ತುಕ್ರಮ ಜರಗಿಸುವುದಾಗಿ ಸ್ಪಷ್ಟ ಸೂಚನೆಯನ್ನು ನೀಡಿದೆ.
ಡಿಪಾರ್ಟ್ಮೆಂಟ್ ಆಫ್ ಪಸರ್ನಲ್ ಆಂಡ್ ಟ್ರೈನಿಂಗ್ ಎಲ್ಲಾ ಕೇಂದ್ರ ಸರ್ಕಾರಿ ಸಚಿವಾಲಯಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಉದ್ಯೋಗಿಗಳ ಸಮಯಪ್ರಜ್ಞೆಯ ಬಗ್ಗೆ ನಿಗಾವಹಿಸುವಂತೆ ಸೂಚಿಸಿದೆ.
ದಿನನಿತ್ಯ ತಡವಾಗಿ ಆಗಮಿಸುವ ಅಭ್ಯಾಸ ಹೊಂದಿರುವ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ, ಹಾಜರಾತಿಯಲ್ಲಿ ಸಮಯಪಾಲನೆಯನ್ನು ಸರ್ಕಾರ ಎಲ್ಲಾ ಹಂತದಲ್ಲೂ ಸರ್ಕಾರ ಗಮನಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸರ್ಕಾರದ ಈ ಕಟ್ಟುನಿಟ್ಟಿನ ಆದೇಶ ಆಲಸಿ ಸರ್ಕಾರಿ ಉದ್ಯೋಗಿಗಳ ನಿದ್ದೆಗೆಡಿಸಿದೆ. ಸರ್ಕಾರದ ಆದೇಶ ೪೮ ಲಕ್ಷ ಉದ್ಯೋಗಿಗಳಿಗೆ ಅನ್ವಯಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.