ನವದೆಹಲಿ: ಪಾಕಿಸ್ಥಾನದೊಳಗೆ ನುಗ್ಗಿ ಅಮೆರಿಕಾ ಒಸಾಮ ಬಿನ್ ಲಾಡೆನ್ನನ್ನು ಹೊಸಕಿ ಹಾಕಿತ್ತು, ಅಂತಹುದೇ ಕಾರ್ಯ ಭಾರತಕ್ಕೆ ಯಾಕೆ ಮಾಡಲಾಗುವುದಿಲ್ಲ, ಖಂಡಿತವಾಗಿಯೂ ಆಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸಾಧ್ಯವಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ನೆರೆಯ ದೇಶದಲ್ಲಿ ಸ್ವತಂತ್ರವಾಗಿ ಓಡಾಡುತ್ತಿರುವ ಭಯೋತ್ಪಾದಕ ಮಾಸ್ಟರ್ಮೈಂಡ್ಗಳನ್ನು ಹೊಡೆದುರುಳಿಸಲು ಭಾರತ ಶಕ್ತವಾಗಿದೆ ಎಂದಿದ್ದಾರೆ.
‘ಅಮೆರಿಕಾ ನೌಕೆಯ ಕಮಾಂಡರ್ಗಳು ಅಲ್ಖೈದಾ ಮುಖಂಡ ಒಸಮಾ ಬಿನ್ ಲಾಡೆನ್ನನ್ನು ಹೊಡೆದುರುಳಿಸಲು ಪಾಕಿಸ್ಥಾನದೊಳಕ್ಕೆ ನುಗ್ಗಿದ್ದರು, ಹಾಗಿದ್ದರೆ ಭಾರತಕ್ಕೆ ಏಕೆ ಸಾಧ್ಯವಿಲ್ಲ? ಇದು ಕೇವಲ ಕಲ್ಪನೆ, ಆಶಯವಾಗಿತ್ತು. ಆದರೆ ಇಂದು ಇದು ಸಾಧ್ಯವಾಗಿದೆ’ ಎಂದಿದ್ದಾರೆ.
ಪುಲ್ವಾಮ ದಾಳಿಯ ಬಳಿಕ ಭಾರತ ಪಾಕಿಸ್ಥಾನದ ಒಳಕ್ಕೆ ನುಗ್ಗಿ ವೈಮಾನಿಕ ದಾಳಿಯನ್ನು ನಡೆಸಿತ್ತು. ಇದರಲ್ಲಿ ಸುಮಾರು 300 ಭಯೋತ್ಪಾದಕರು ಹತರಾಗಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.