ಪುಲ್ವಾಮದ ಭಯೋತ್ಪಾದನಾ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡ ನೋವಿಗೆ ಭಾರತ ಪ್ರತಿಕಾರವನ್ನು ತೀರಿಸಿಕೊಂಡಿದೆ. ಎಲ್ಒಸಿಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಬಾಲಕೋಟ್ನಲ್ಲಿ ಸುರಕ್ಷಿತವಾಗಿ ನೆಲೆಯೂರಿದ್ದ ಜೈಶೇ ಇ ಮೊಹಮ್ಮದ್ ಉಗ್ರರ ವಿರುದ್ಧ ಇಂದು ಮುಸುಕಿನ ಜಾವ 3.30ಕ್ಕೆ ಮೈಮಾನಿಕ ದಾಳಿಯನ್ನು ಭಾರತೀಯ ವಾಯುಸೇನೆ ನಡೆಸಿದೆ. 12 ಮಿರಾಜ್-2000 ಯುದ್ಧ ವಿಮಾನಗಳನ್ನು ಬಳಸಿ 1000 ಕೆಜಿ ಬಾಂಬ್ನ್ನು ಉಗ್ರರ ಶಿಬಿರಗಳ ಮೇಲೆ ಹಾಕಲಾಗಿದೆ. 200-300 ಉಗ್ರರು ಹತರಾಗಿರುವ ಅಂದಾಜಿಸಲಾಗಿದೆ. ಇದು ಭಾರತ-ಪಾಕ್ ಸಂಬಂಧದ ಹೊಸ ಅಧ್ಯಾಯದ ಆರಂಭವಷ್ಟೇ. ಭಾರತ ದಿಟ್ಟ ಸಂದೇಶವನ್ನು ರವಾನಿಸಿದೆ, ಪಾಕಿಸ್ಥಾನದ ಉಗ್ರ ಕೃತ್ಯವನ್ನು ಶಿಕ್ಷಿಸದೆ ಭಾರತ ಬಿಡಲಾರದು ಎಂಬುದನ್ನು ಈ ಮೂಲಕ ತೋರಿಸಲಾಗಿದೆ. ದಾಳಿ ಪ್ರತಿದಾಳಿಯನ್ನು ಸಮರ್ಪಕ ರೀತಿಯಲ್ಲಿ ಮಾಡುತ್ತಿದೆ. ಒಂದು ವೇಳೆ ಪುಲ್ವಾಮದಲ್ಲಿ ಪಾಕಿಸ್ಥಾನ ದಾಳಿ ನಡೆಸಿದರೆ, ಭಾರತ ಮಾಡುವ ಪ್ರತಿದಾಳಿಗೆ ಇಸ್ಲಾಮಾಬಾದ್ ನಡುಗುತ್ತದೆ ಎಂಬುದು ಇಂದಿನ ದಾಳಿಯಿಂದ ಸ್ಪಷ್ಟವಾಗಿದೆ.
ಇದುವರೆಗೆ, ಸಾಮರ್ಥ್ಯ ಮತ್ತು ಅತ್ಯಂತ ಕ್ರೂರ ರೀತಿಯಲ್ಲಿ ಶತ್ರುಗಳ ವಿರುದ್ಧ ಪ್ರತಿದಾಳಿ ಮಾಡುವುದಕ್ಕೆ ಇಸ್ರೇಲ್ ಸೇನೆ ಹೆಸರಾಗಿತ್ತು. ಅಸಮಂಜಸ ರೀತಿಯ ದಂಡನಾ ಕ್ರಮಗಳನ್ನು ಇಸ್ರೇಲ್ ಸೇನೆಯಲ್ಲಿ ಸಮಂಜಸ ಎಂದು ಪರಿಗಣಿಸಲಾಗುತ್ತದೆ. ಆಪರೇಶನ್ ವ್ರಾತ್ ಆಫ್ ಗಾಡ್, ಬೆಕ್ಕ ವ್ಯಾಲಿ ಶೂಟ್ಔಟ್ ಅಥವಾ ದುಬೈನ ಪಿಎಲ್ಒ ಆಪರೇಟಿವ್ ಹತ್ಯೆಯೇ ಇರಲಿ, ಇಸ್ರೇಲ್ ಸೇನೆ ಶತ್ರುಗಳ ನೆಲೆಯ ಒಳಗೆ ಹೋಗಿ ಅವರಿಗೆ ಅವರ ಜಾಗ ತೋರಿಸುವ ಕಾರ್ಯದಿಂದ ಎಂದಿಗೂ ಹಿಂಜರಿಯುವುದಿಲ್ಲ. ಶತ್ರುಗಳಿಗೆ ಸಮನಾಂತರ ಶಿಕ್ಷೆಯನ್ನು ಇಸ್ರೇಲ್ ನೀಡಿದೆ, ಇನ್ನೂ ಒಂದು ಮಟ್ಟ ಹೆಚ್ಚೇ ಎಂಬಂತೆ ದಂಡನೆ ನೀಡುತ್ತದೆ. ಶತ್ರುಗಳನ್ನು ಸದೆ ಬಡಿಯಲು ಅದು ರಹಸ್ಯ ಮತ್ತು ಬಹಿರಂಗ ಕಾರ್ಯಾಚರಣೆಗಳನ್ನು ನಡೆಸಿದೆ. ಹತ್ಯಾ ಕಾರ್ಯಾಚರಣೆಯನ್ನು ಅದು ನಡೆಸಿದ ರೀತಿ ನಿಜಕ್ಕೂ ಅದರ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸುತ್ತದೆ.
ಇಸ್ರೇಲ್ ಸೇನೆಯ ಪರಾಕ್ರಮದ ಬಗ್ಗೆ ತಿಳಿದ ಎಲ್ಲರೂ, ಯಾಕೆ ಭಾರತೀಯ ಸೇನೆ ಇಸ್ರೇಲ್ ಮಾದರಿಯಲ್ಲಿ ಪಾಕಿಸ್ಥಾನದ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂಬುದಾಗಿ ಪ್ರಶ್ನಿಸುತ್ತಿರುತ್ತಾರೆ. ಇಸ್ರೇಲ್ ರೀತಿಯಲ್ಲಿ ಶತ್ರುಗಳಿಗೆ ತೀವ್ರವಾದ ಹಾನಿಯುಂಟು ಮಾಡುವ ಕ್ರಮವನ್ನು ಅನುಸರಿಸುವುದು ಭಯೋತ್ಪಾದಕರನ್ನು ಹತ್ತಿಕ್ಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂಬುದು ಎಲ್ಲರ ಅನಿಸಿಕೆಯಾಗಿದೆ. ಈ ನಿಟ್ಟಿನಲ್ಲಿ ಪುಲ್ವಾಮ ದಾಳಿ ಒಂದು ಟರ್ನಿಂಗ್ ಪಾಯಿಂಟ್ ಎಂದೇ ಪರಿಗಣಿತವಾಗಿದೆ.
ಪುಲ್ವಾಮ ದಾಳಿಯ ಬಳಿಕ, ಭಾರತ ಭಯೋತ್ಪಾದಕರು ಮತ್ತು ಅದನ್ನು ಪೋಷಣೆ ಮಾಡುತ್ತಿರುವ ಪಾಕಿಸ್ಥಾನದ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುತ್ತದೆ ಎಂದು ಸ್ಪಷ್ಟವಾಗಿತ್ತು. ಆಕ್ರಮಣಕಾರಿ ಧೋರಣೆಯಿಂದ ಭಾರತ ಹಿಂದೆ ಸರಿಯುವುದಿಲ್ಲ ಎಂಬುದುನ್ನು ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಉಗ್ರರ ಶಿಬಿರಗಳನ್ನು ನಾಶಪಡಿಸುವ ಮೂಲಕ ಭಾರತ ಇಂದು ತೋರಿಸಿಕೊಟ್ಟಿದೆ. ಇದುವರೆಗೆ ಪಾಕಿಸ್ಥಾನವನ್ನು ಸದೆ ಬಡಿಯಲು ಭಾರತ ವೈಮಾನಿಕ ದಾಳಿಯ ಮಾರ್ಗವನ್ನು ಬಳಸುವುದನ್ನು ಯೋಚಿಸುವುದಕ್ಕೂ ಕಷ್ಟವಾಗಿತ್ತು. ಆದರೆ ಈ ಬಾರಿ ಎಲ್ಲವೂ ಬದಲಾಗಿದೆ, ಭಾರತ ಇಸ್ರೇಲ್ ಮಾದರಿಯನ್ನು ಅನುಸರಿಸುತ್ತಿದೆ. ಪಾಕಿಸ್ಥಾನ ಸುದೀರ್ಘ ಅವಧಿಯಿಂದ ಭಾರತದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂಬುದನ್ನು ಜಗತ್ತೀಗ ಅರ್ಥ ಮಾಡಿಕೊಂಡಿದೆ. ಇನ್ನು ಭಾರತ ಹಿಂಜರಿಯಲಾರದು. ಭಾರತದ ಮೇಲೆ ದಾಳಿ ನಡೆಸುವ ಪಾಕಿಸ್ಥಾನದ ಪ್ರತಿ ಪ್ರಯತ್ನಕ್ಕೂ, ಭಾರತ ಅತ್ಯಂತ ಕ್ರೂರ ರೀತಿಯಲ್ಲಿ ಪ್ರತ್ಯುತ್ತರವನ್ನು ನೀಡಲಿದೆ, ಭಯೋತ್ಪಾದಕ ರಾಷ್ಟ್ರವನ್ನು ಹತ್ತಿಕ್ಕಲಿದೆ.
source: rightlog
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.