ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಪಾಕಿಸ್ಥಾನ ಮೂಲದ ಜೈಶೇ ಇ ಮೊಹಮ್ಮದ್ ಸಂಘಟನೆ ನಡೆಸಿದ ದಾಳಿಯನ್ನು ಖಂಡಿಸಿ, ಶುಕ್ರವಾರ ಅಪಾರ ಪ್ರಮಾಣದ ಅನಿವಾಸಿ ಭಾರತೀಯರು ನ್ಯೂಯಾರ್ಕ್ನಲ್ಲಿರುವ ಪಾಕಿಸ್ಥಾನ ರಾಯಭಾರ ಕಛೇರಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದರು ಮತ್ತು ಪಾಕಿಸ್ಥಾನದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪಾಕಿಸ್ಥಾನ್ ಮುರ್ದಾಬಾದ್, ಜಾಗತಿಕ ಭಯೋತ್ಪಾದಕ ಪಾಕಿಸ್ಥಾನ್, ಲಷ್ಕರ್ ಇ ತೋಯ್ಬಾ ಪಾಕಿಸ್ಥಾನ್, 9/11 ಪಾಕಿಸ್ಥಾನ್, 26/11 ಪಾಕಿಸ್ಥಾನ್, ಒಸಾಮ ಬಿನ್ ಲಾದೆನ್ ಪಾಕಿಸ್ಥಾನ್ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಈ ವೇಳೆ ತ್ರಿವರ್ಣ ಧ್ವಜವನ್ನೂ ಹಾರಿಸಿದರು. ’ಪಾಕಿಸ್ಥಾನ್-ಭಯೋತ್ಪಾದಕ ರಾಷ್ಟ್ರ’ ಮತ್ತು ’ಪಾಕಿಸ್ಥಾನ ನಿನ್ನ ದೇಶವನ್ನು ಬೆಳೆಸು ಭಯೋತ್ಪಾದನೆಯನ್ನಲ್ಲ’ ಎಂಬಿತ್ಯಾದಿ ಸಂದೇಶಗಳುಳ್ಳ ಪ್ಲಾಕಾರ್ಡ್ನ್ನು ಹಿಡಿದುಕೊಂಡಿದ್ದಾರೆ.
ನ್ಯೂಜೆರ್ಸಿಯಲ್ಲೂ ಅಪಾರ ಪ್ರಮಾಣ ಭಾರತೀಯರು ಸೇರಿದಂತೆ ಇತರ ದೇಶಗಳ ಪ್ರಜೆಗಳು ಒಟ್ಟುಗೂಡಿ ಪುಲ್ವಾಮ ದಾಳಿಯ ವಿರುದ್ಧ ಕ್ಯಾಂಡಲ್ ಲೈಟ್ ಮೆರವಣಿಗೆ ಮಾಡಿದರು. ಅಮೆರಿಕಾದ ಇನ್ನೂ ಅನೇಕ ಕಡೆಗಳಲ್ಲಿ ಪಾಕಿಸ್ಥಾನಿಯರ ನೀಚ ಕೃತ್ಯವನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಜಾಗತಿಕ ಸಮುದಾಯ ಭಾರತದ ಜೊತೆ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದೆ.
ಇನ್ನೊಂದೆಡೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಪಾಕಿಸ್ಥಾನದ ವಿರುದ್ಧ ಕಿಡಿಕಾರಿದ್ದು, ಭಾರತದ ಬೆಂಬಲಕ್ಕೆ ನಿಂತಿದ್ದಾರೆ. ಪಾಕ್ ಈಗಲಾದರೂ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು ಇಲ್ಲವಾದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡ, ಪುಲ್ವಾಮ ದಾಳಿಯನ್ನು ಕಟುವಾಗಿ ಖಂಡಿಸಿದ್ದು, ಇದಕ್ಕೆ ಕಾರಣವಾದ ಪಾಕಿಸ್ಥಾನದ ಜೈಶೇ ಇ ಮೊಹಮ್ಮದ್ ಸಂಘಟನೆಯ ವಿರುದ್ಧ ಕಿಡಿಕಾರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.