ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ದೇಶದ ಜನರು ಮೆಗಾ ಟೈಮ್ಸ್ ಗ್ರೂಪ್ ಆನ್ಲೈನ್ ಸಮೀಕ್ಷೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಜೈ ಎಂದಿದ್ದಾರೆ. 2 ಲಕ್ಷ ಪ್ರತಿಕ್ರಿಯೆದಾರರ ಪೈಕಿ ಶೇ.80ರಷ್ಟು ಜನರು ಮುಂದಿನ ಬಾರಿಯೂ ಮೋದಿ ಸರ್ಕಾರವೇ ಬರುತ್ತದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಮೋದಿಯವರ ಜನಪ್ರಿಯತೆ ಈಗಲೂ ಉತ್ತುಂಗದಲ್ಲಿದೆ ಎಂಬುದನ್ನು ಈ ಸಮೀಕ್ಷೆ ಸಾಬೀತುಪಡಿಸಿದ್ದು, ಇಂದು ಲೋಕಸಭಾ ಚುನಾವಣೆ ನಡೆದರೆ ಮೋದಿಯವರನ್ನೇ ಪ್ರಧಾನಿಯಾಗಿ ಬೆಂಬಲಿಸುವುದಾಗಿ ಶೇ.84ರಷ್ಟು ಪ್ರತಿಕ್ರಿಯೆದಾರರು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ಹುದ್ದೆಗೆ ಜನರ ಎರಡನೇ ಆಯ್ಕೆಯಾಗಿದೆ. ಆದರೆ ಅವರಿಗೆ ಜೈ ಎಂದವರ ಪ್ರಮಾಣ ಶೇ.8.33 ಅಷ್ಟೇ. ಅವರ ಬಳಿಕ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿಯವರನ್ನು ಜನ ಪ್ರಧಾನಿ ಹುದ್ದೆಗೆ ಪರಿಗಣಿಸಿದ್ದು, ಅವರಿಗೆ ಶೇ.1.44ರಷ್ಟು ಜನ ಜೈ ಎಂದಿದ್ದಾರೆ. ಮಾಯಾವತಿಯವರಿಗೆ ೦.43ರಷ್ಟು ಜನ ಜೈ ಎಂದಿದ್ದಾರೆ. ಶೇ.5.9ರಷ್ಟು ಜನರ ಇತರರನ್ನು ಪ್ರಧಾನಿ ಹುದ್ದೆಯಲ್ಲಿ ನೋಡಲು ಬಯಸಿದ್ದಾರೆ.
ಶೇ.3.47ರಷ್ಟು ಜನರು ಮಾತ್ರ ಎನ್ಡಿಎ ಹೊರತಾದ ಸರ್ಕಾರವನ್ನು ಕೇಂದ್ರದಲ್ಲಿ ನೋಡಲು ಬಯಸಿದ್ದಾರೆ, ಉಳಿದವರು ಎನ್ಡಿಎಗೆ ಜೈ ಎಂದಿದ್ದಾರೆ.
2014ಕ್ಕಿಂತ ಈಗ ರಾಹುಲ್ ಅವರ ಜನಪ್ರಿಯತೆ ಹೆಚ್ಚಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಶೇ.31ರಷ್ಟು ಜನ ಹೌದೆಂದರೆ, ಉಳಿದವರು ಇಲ್ಲ ಎಂದಿದ್ದಾರೆ.
ಫೆ.11ರಿಂದ 20ರವರೆಗೆ ಒಟ್ಟು 9 ಭಾಷೆಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದ್ದು, ಶೇ.59.51ರಷ್ಟು ಜನರು ಐದು ವರ್ಷಗಳ ಮೋದಿ ಆಡಳಿತ ಅತ್ಯುತ್ತಮವಾಗಿತ್ತು ಎಂದಿದ್ದಾರೆ. ಶೇ.22.29ರಷ್ಟು ಜನ ಉತ್ತಮ ಎಂದಿದ್ದಾರೆ, ಶೇ.8.25ರಷ್ಟು ಜನ ಸಾಮಾನ್ಯ ಎಂದಿದ್ದಾರೆ, ಶೇ.9.9ರಷ್ಟು ಜನ ಕಳಪೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.