ನವದೆಹಲಿ: 2010ರಿಂದ ದೇಶದಲ್ಲಿ ಸಮಾರು 1,900 ಎಡಪಂಥೀಯ ಉಗ್ರವಾಗಿಗಳಾದ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಆರ್ಟಿಐ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ.
2010ರಿಂದ ದೇಶದಲ್ಲಿ 11,567 ನಕ್ಸಲ್ ಸಂಬಂಧಿಸಿದ ಘಟನೆಗಳು ನಡೆದಿವೆ, ಇದರಲ್ಲಿ 1,331 ಸೈನಿಕರು ಗಾಯಗೊಂಡಿದ್ದಾರೆ ಎಂದು ಆರ್ಟಿಐ ಮೂಲಕ ಸಲ್ಲಿಸಲಾದ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯ ಉತ್ತರಿಸಿದೆ.
2010ರಲ್ಲಿ ಸುಮಾರು 172 ನಕ್ಸಲರ ಹತ್ಯೆಯಾಗಿದೆ, 2011ರಲ್ಲಿ 99, 2012ರಲ್ಲಿ 74, 2013ರಲ್ಲಿ ಸುಮಾರು 100 ನಕ್ಸಲರ ಹತ್ಯೆಯಾಗಿದೆ. 2014ರಲ್ಲಿ 66, 2015ರಲ್ಲಿ 89, 2016ರಲ್ಲಿ 222, 2017ರಲ್ಲಿ ಸುಮಾರು 136, 2018ರಲ್ಲಿ ಸುಮಾರು 225 ನಕ್ಸಲರ ಹತ್ಯೆಯಾಗಿದೆ. 2019ರಲ್ಲಿ ಜನವರಿ 31ರವರೆಗೆ 89 ನಕ್ಸಲರ ಹತ್ಯೆಯಾಗಿದೆ ಎಂದು ತಿಳಿಸಲಾಗಿದೆ.
ನೊಯ್ಡಾ ಮೂಲದ ವಕೀಲ ರಂಜನ್ ತೋಮರ್ಹದ್ ಎಂಬುವವರು 2010ರಿಂದ ಹತ್ಯೆಯಾದ ನಕ್ಸಲರ ಬಗೆಗಿನ ವರದಿಯನ್ನು ನೀಡುವಂತೆ ಆರ್ಟಿಐ ಅರ್ಜಿ ಹಾಕಿದ್ದರು.
2010ರಿಂದ ದೇಶದಲ್ಲಿ ನಕ್ಸಲ್ ಸಂಬಂಧಿತ ದಾಳಿಗಳು ಕಮ್ಮಿಯಾಗುತ್ತಿರುವುದು ಇಲ್ಲಿ ಸ್ಪಷ್ಟವಾಗಿದೆ. 2010ರಲ್ಲಿ 2,213 ಘಟನೆಗಳು ನಡೆದರೆ, 2018ರಲ್ಲಿ 833 ನಕ್ಸಲ್ ಸಂಬಂಧಿತ ಘಟನೆಗಳು ನಡೆದಿವೆ.
ದೇಶದ 11 ರಾಜ್ಯಗಳ 90 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಎಂದು ಗುರುತಿಸಲಾಗಿದೆ ಎಂದು ಇತ್ತೀಚಿಗೆ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಹಂಸ್ರಾಜ್ ಅಹಿರ್ ಲೋಕಸಭೆಗೆ ಮಾಹಿತಿ ನೀಡಿದ್ದರು. ಈ ರಾಜ್ಯಗಳ ಪೈಕಿ ಆಂಧ್ರ, ಬಿಹಾರ, ಛತ್ತೀಸ್ಗಢ, ಜಾರ್ಖಾಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.