ನವದೆಹಲಿ: ಸರ್ಕಾರದ ಅಭಿಪ್ರಾಯಗಳನ್ನು, ಇತರರ ಸಲಹೆ ಸೂಚನೆಗಳನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ‘ನಮೋ ಆ್ಯಪ್ ’ ಒಂದು ಕೋಟಿ ಡೌನ್ಲೋಡ್ಗಳನ್ನು ಕಾಣುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಚಟುವಟಿಕೆಗಳನ್ನು ಸಕ್ರಿಯವಾಗಿ ಈ ಆ್ಯಪ್ನಲ್ಲಿ ಹಂಚಿಕೊಳ್ಳಲಾಗುತ್ತದೆ. ಅವರ ಖ್ಯಾತ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ಗೆ ಸಲಹೆ/ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ. ಸರ್ಕಾರದ ಕಾರ್ಯಕ್ರಮಗಳ ಬಗೆಗಿನ ಸಕಾರಾತ್ಮಕ ಸುದ್ದಿಗಳನ್ನೂ ಇದು ಜನರಿಗೆ ತಲುಪಿಸುತ್ತಿದೆ.
ಈ ಆ್ಯಪ್ನ ವ್ಯಾಪಾರಿ ವಿಭಾಗವೂ ನಮೋ ಟಿಶರ್ಟ್, ಕೈಕಟ್ಟಿಕೊಳ್ಳುವ ಬ್ಯಾಂಡ್, ನಮೋ ಅಗೈನ್ ಟ್ಯಾಗ್ ಇತ್ಯಾದಿಗಳನ್ನು ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರದ ದೃಷ್ಟಿಯಿಂದಾಗಿ ಮಾರಾಟ ಮಾಡುತ್ತಿದೆ.
ಜನರೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಲು ನಮೋ ಆ್ಯಪ್ ಪ್ರಧಾನಿಯವರಿಗೆ ಸಾಕಷ್ಟು ಸಹಾಯ ಮಾಡಿದೆ. ಈ ಆ್ಯಪ್ ಮೂಲಕ ಪ್ರಧಾನಿಯವರು ಚಟುವಟಿಕೆಗಳು ದೇಶ ಜನರಿಗೆ ತಿಳಿಯುವಂತಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.