ಅಭಿವೃದ್ಧಿ ಅಜೆಂಡಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಆದರೆ ಅಭಿವೃದ್ಧಿಯನ್ನು ಜಮ್ಮು ಕಾಶ್ಮೀರದಲ್ಲಿ ಅನುಷ್ಠಾನಕ್ಕೆ ತರುವುದು ಅಷ್ಟು ಸರಳವಲ್ಲ, ಅಲ್ಲಿ ಹಲವಾರು ಸವಾಲುಗಳಿವೆ. ಆದರೆ ಈ ಸವಾಲುಗಳಿಗೆ ಸರ್ಕಾರದ ಬದ್ಧತೆಯನ್ನು ತಡೆಯಲು ಸಾಧ್ಯವಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿ ಅಭಿವೃದ್ಧಿಯನ್ನು ಯಶಸ್ವಿಯಾಗಿಯೇ ಮೋದಿ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಕಣಿವೆಯಲ್ಲಿ ಭಯೋತ್ಪಾದನೆ ತಾಂಡವಾಡುತ್ತಿದ್ದ ಸಂದರ್ಭದಲ್ಲೂ ಮೋದಿ ಸರ್ಕಾರ ಆ ರಾಜ್ಯಕ್ಕೆ ಅಗತ್ಯವಾದ ಮೂಲಸೌಕರ್ಯವನ್ನು ಕಲ್ಪಿಸಿಕೊಡುವ ಕಾರ್ಯವನ್ನು ಮಾಡಿದೆ. ಈ ಲೇಖನ ಕಳೆದ ನಾಲ್ಕೂವರೆ ವರ್ಷದಲ್ಲಿ ಕಣಿವೆ ರಾಜ್ಯದಲ್ಲಿ ಮೋದಿ ಸರ್ಕಾರ ಹಮ್ಮಿಕೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲಿದೆ.
ರಾಜಕೀಯ ಆಶಯ
ಕಾಶ್ಮೀರದ ಜನರ ಒಳಿತಿಗಾಗಿ ಮೋದಿ ಸರ್ಕಾರ ರಾಜಕೀಯವಾಗಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಯಾವಾಗ ಪಿಡಿಪಿ ಕಣಿವೆಯ ಅಭಿವೃದ್ಧಿಗೆ ಪೂರಕವಾಗಿಲ್ಲ ಎಂಬುದನ್ನು ಸರ್ಕಾರ ಅರಿಯಿತೋ ತಕ್ಷಣ ಪಿಡಿಪಿ-ಬಿಜೆಪಿ ಮೈತ್ರಿ ಕೊನೆಯಾಗಿದೆ. ಈ ಕಾರಣಕ್ಕೆ ನರೇಂದ್ರ ಮೋದಿ ಸರ್ಕಾರ ಕಣಿವೆಯಲ್ಲಿ ಸಾಕಷ್ಟು ವಿರೋಧಗಳನ್ನು ಕಟ್ಟಿಕೊಳ್ಳಬೇಕಾಯಿತು. ಅಭಿವೃದ್ಧಿಯೊಂದರಿಂದಲೇ ಭಯೋತ್ಪಾದನೆಯನ್ನು ಎದುರಿಸಲು ಸಾಧ್ಯ ಎಂಬುದು ನರೇಂದ್ರ ಮೋದಿಯವರ ಬಲವಾದ ಅಭಿಪ್ರಾಯವಾಗಿದೆ. ಈ ಅಭಿಪ್ರಾಯವನ್ನು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ಬದಲಾಯಿಸಿಕೊಂಡಿಲ್ಲ. ರಾಜ್ಯಪಾಲ ಆಡಳಿತ ಅಲ್ಲಿ ಸಾಕಷ್ಟು ಸ್ಥಿರತೆ ಮತ್ತು ಸಮಪರ್ಕ ಆಡಳಿತವನ್ನು ತಂದಿದೆ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಆ ರಾಜ್ಯಕ್ಕೆ ಬಲಿಷ್ಠ ರಾಜಕೀಯ ಆಶಯದ ಅಗತ್ಯತೆ ಸಾಕಷ್ಟಿದೆ.
ಲೇಹ್ ಮತ್ತು ಕಾರ್ಗಿಲ್ನಲ್ಲಿ ಪ್ರತ್ಯೇತ ಆಡಳಿತ ಮತ್ತು ಆದಾಯ ವಿಭಾಗವನ್ನು ರಚನೆ ಮಾಡಿದ್ದು ಒಂದು ಮಹತ್ತರ ರಾಜಕೀಯ ಆಶಯ. ಇಲ್ಲಿ ಪ್ರಧಾನ ಕಾರ್ಯದರ್ಶಿ, ಯೋಜನೆ, ಅಭಿವೃದ್ಧಿ, ಪರಿಶೀಲನಾ ಇಲಾಖೆ ಮುಖ್ಯಸ್ಥರು ಎಲ್ಲವರನ್ನೂ ನಿಯೋಜಿಸಲಾಗಿದೆ, ಲಡಾಖ್ ಭಾಗದ ಜನರ ಆಶೋತ್ತರಗಳನ್ನು ಪೂರೈಸುವಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸಲಿದೆ. ಸಮರ್ಪಕ ಸ್ಥಳಿಯ ಸಾಂಸ್ಥಿಕ ನಿರ್ವಹಣೆಗಳಿಗಾಗಿ ಲಡಾಖ್ ಜನ ಒತ್ತಾಯಿಸುತ್ತಲೇ ಬಂದಿದ್ದರು, ಇದು ಅವರ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ.
ಶೇ.100ರಷ್ಟು ವಿದ್ಯುದೀಕರಣ
ಮಹತ್ವದ ಸಾಧನೆಯೆಂದರೆ ಜಮ್ಮು ಕಾಶ್ಮೀರದ ಪ್ರತಿ ಮನೆಯೂ ವಿದ್ಯುದೀಕರಣಗೊಂಡಿದೆ. ಶೇ.100ರಷ್ಟು ವಿದ್ಯುತ್ ಪಡೆದ ರಾಜ್ಯವಾಗಿ ಅದು ಹೊಮ್ಮಿದೆ. ಮಾತ್ರವಲ್ಲ, ಪ್ರಧಾನಮಂತ್ರಿ ಸಹಜ್ ಬಿಜಲಿ ಹರ್ ಘರ್ ಯೋಜನಾದ ಮೂಲಕ ಹೆಚ್ಚುವರಿಯಾಗಿ ಶೇ.15ರಷ್ಟು ಅನುದಾನ ಪಡೆಯಲು ಅದು ಅರ್ಹತೆಯನ್ನು ಪಡೆದುಕೊಂಡಿದೆ. ಯಾವುದಾದರೂ ಮೂಲೆಯಲ್ಲಿ ಮನೆಗಳು ವಿದ್ಯುದೀಕರಣಗೊಳ್ಳಲು ಬಾಕಿ ಇದೆಯೇ ಎಂಬುದನ್ನು ಪರಿಶೀಲಿಸುವಂತೆ ಕೇಂದ್ರ ಇಂಧನ ಸಚಿವಾಲಯ ಕಣಿವೆಯ ಅಧಿಕಾರಿಗಳಿಗೆ ಸೂಚಿಸಿದೆ. ಇಲ್ಲಿನ ವಿದ್ಯುತ್ ಸಂಪರ್ಕವನ್ನು ಉತ್ತಮಗೊಳಿಸಿದ್ದರಿಂದ ಆರೋಗ್ಯ ಸೇವೆ, ಶಿಕ್ಷಣ, ಸಂಪರ್ಕಗಳೂ ಸುಧಾರಣೆ ಕಾಣಲಿವೆ. ಆರ್ಥಿಕ ಚಟುವಟಿಕೆಗಳೂ ಗರಿಗೆದರಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ.ದೇಶದ ಒಟ್ಟು 15 ರಾಜ್ಯಗಳು ಸಂಪೂರ್ಣ ವಿದ್ಯುದೀಕರಣಗೊಂಡ ರಾಜ್ಯಗಳಾಗಿ ಹೊರಹೊಮ್ಮಿವೆ. ಸೌಭಾಗ್ಯ ಯೋಜನೆಯಡಿ ಇದುವರೆಗೆ 2.1 ಕೋಟಿ ಮನೆಗಳಿಗೆ ವಿದ್ಯುತ್ ನೀಡಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಶಿಕ್ಷಣ
ಕಳೆದ ನಾಲ್ಕೂವರೆ ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಮಹತ್ವದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಮೂಲಸೌಕರ್ಯಗಳನ್ನು ಅಲ್ಲಿ ವೃದ್ಧಿಸಿ, ಭಯೋತ್ಪಾದನೆಯ ಕರಿನೆರಳಿನಿಂದ ಅದನ್ನು ಹೊರಗಿಡುವ ಪ್ರಯತ್ನ ಮಾಡಿದೆ. ಮೋದಿಯವರು ಇಲ್ಲಿ, ಐಐಟಿ, ಐಐಎಂಗಳನ್ನು ತಂದಿದ್ದಾರೆ. ಐಐಟಿ ಮತ್ತು ಐಐಎಂ ಎರಡನ್ನೂ ಹೊಂದಿರುವ ಕೆಲವೇ ಕೆಲವು ರಾಜ್ಯಗಳ ಪೈಕಿ ಜಮ್ಮು ಕಾಶ್ಮೀರವೂ ಒಂದು. ಜಮ್ಮು ಮತ್ತು ಆವಂತಿಪೋರಾದಲ್ಲಿ ಎರಡು ಏಮ್ಸ್ಗಳನ್ನು ತೆರೆಯಲಾಗಿದೆ, ಎರಡು ಏಮ್ಸ್ ಹೊಂದಿರುವ ದೇಶದ ಏಕೈಕ ರಾಜ್ಯ ಇದಾಗಿದೆ. ಜಮ್ಮು ನಗರದಲ್ಲಿ ಐಐಎಂಸಿಯನ್ನೂ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಇದು ಜಮ್ಮು ಕಾಶ್ಮೀರದ ಮೂಲಸೌಕರ್ಯಗಳನ್ನು ವೃದ್ಧಿಸಲಿದೆ ಮತ್ತು ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿದೆ. ಕಾಶ್ಮೀರಿ ಯುವಕರು ಇತರ ಮೆಟ್ರೋ ನಗರಗಳಿಗೆ ವಲಸೆ ಹೋಗುವುದು ಇದರಿಂದ ತಪ್ಪಲಿದೆ.
ಕ್ರೀಡೆ
ಗ್ರಾಮೀಣ ಪ್ರದೇಶ ಸೇರಿದಂತೆ ದೇಶದ ಕ್ರೀಡಾ ಮೂಲಸೌಕರ್ಯವನ್ನು ವೃದ್ಧಿಸುವ ಸಲುವಾಗಿ ಕೇಂದ್ರ ಕ್ರೀಡಾ ಸಚಿವಾಲಯವು ರಾಜೀವ್ ಗಾಂಧೀ ಖೇಲ್ ಅಭಿಯಾನ್, ನಗರ ಕ್ರೀಡಾ ಮೂಲಸೌಕರ್ಯ ಯೋಜನೆಗಳನ್ನು 2015-16ರಲ್ಲಿ ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯಡಿ ರಾಜ್ಯವಾರು ಅನುದಾನಗಳನ್ನು ಕೇಂದ್ರ ಒದಗಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರೂ.200 ಕೋಟಿಗಳ ವಿಶೇಷ ಅನುದಾನವನ್ನು ಇಲ್ಲಿ ಒದಗಿಸಲಾಗಿದೆ. ಈ ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ವೃದ್ಧಿಸುವುದು ಇದರ ಹಿಂದಿನ ಯೋಜನೆ.
ಕ್ರೀಡೆಯ ಅಭಿವೃದ್ಧಿ ಮತ್ತು ಕ್ರೀಡಾ ಮೂಲಸೌಕರ್ಯ ನಿರ್ವಹಣೆಗಾಗಿ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡುವಂತೆ ಕ್ರೀಡಾ ಸಚಿವಾಲಯವು ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮನವಿಮಾಡಿಕೊಳ್ಳುತ್ತಲೇ ಬಂದಿದೆ.
ಭಯೋತ್ಪಾದನಾ ವಿರೋಧಿ ಕಾರ್ಯ
ಯಾವುದೇ ರಾಜ್ಯದಲ್ಲಿ ವ್ಯವಹಾರ ಮತ್ತು ಅಭಿವೃದ್ಧಿ ಸುಗಮವಾಗಿ ಸಾಗಬೇಕಾದರೆ ಭದ್ರತೆ ಅತೀಮುಖ್ಯ. ಈ ಒಂದು ವಿಷಯದಲ್ಲಿ ಮೋದಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಯೋಧರನ್ನು ಹತ್ಯೆ ಮಾಡಿದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಜರುಗಿಸುವಲ್ಲಿ ಅವರು ಎಂದೂ ಹಿಂಜರಿದಿಲ್ಲ. ಉರಿ ದಾಳಿಯ ವಿಷಯದಲ್ಲೂ ಇದು ಸ್ಪಷ್ಟವಾಗಿದೆ. ಮಯನ್ಮಾರ್ ಗಡಿ ಸಮೀಪದ ಸರ್ಜಿಕಲ್ ಸ್ಟ್ರೈಕ್, ಎಲ್ಒಸಿ ಸರ್ಜಿಕಲ್ ಸ್ಟ್ರೈಕ್ ಇದಕ್ಕೆ ಉತ್ತಮ ಉದಾಹರಣೆ. ಮುಂದೆಯೂ ಅವರು ಉಗ್ರರ ಹೀನ ಕೃತ್ಯಕ್ಕೆ ಪ್ರತಿಕಾರ ತೀರಿಸಿಕೊಳ್ಳದೆ ಬಿಡಲಾರರು.
ಜಮ್ಮು ಮತ್ತು ಕಾಶ್ಮೀರದ ಬಗೆಗಿನ ಮೋದಿ ಸರಕಾರದ ಆಶಯವು “ಉತ್ತಮ ಆಡಳಿತ, ಅಭಿವೃದ್ಧಿ, ಜವಾಬ್ದಾರಿ, ಮತ್ತು ಹೊಣೆಗಾರಿಕೆ” ಆಗಿದೆ. ಜಮ್ಮುವಿನಲ್ಲಿ ಐಐಎಂ (2016ರ ನವೆಂಬರ್ನಲ್ಲಿ ತರಗತಿಗಳು ಆರಂಭವಾಗಿವೆ) ಮತ್ತು ಸೆಮಿ-ರಿಂಗ್ ರಸ್ತೆ ಸೇರಿದಂತೆ ಐದು ಯೋಜನೆಗಳ ಮೇಲೆ ಬಾಹ್ಯ ಕೆಲಸ ಆರಂಭವಾಗಿದೆ. ಎನ್ಎಚ್-1ಎನಲ್ಲಿನ ಚೆನ್ನೈ-ನಶ್ರಿ ವಿಭಾಗದ ನಾಲ್ಕು-ಲೇನ್ಗಳಲ್ಲಿ 4,700 ಕೋಟಿ ರೂಪಾಯಿ ವೆಚ್ಚದ ಕನಿಷ್ಠ ಒಂದು ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. 2017 ರ ಏಪ್ರಿಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟಿಸಿದ್ದಾರೆ. ಕಾಶ್ಮೀರ ಭಾಗದ ಪಿಎಂಡಿಪಿಯಲ್ಲಿನ 11 ಯೋಜನೆಗಳ ಪೈಕಿ ಮೂರು ಯೋಜನೆಗಳು ಶೇ.75ರಷ್ಟು ಪೂರ್ಣಗೊಂಡಿವೆ.
ಲಡಾಖ್ ಪ್ರದೇಶದಲ್ಲಿ, ಎರಡು ಪ್ರಮುಖ ಯೋಜನೆಗಳಾದ – ಲೇಹ್ ಮತ್ತು ಕಾರ್ಗಿಲ್ನಲ್ಲಿಲ್ಲಿ ಶೀತಲ ಶೇಖರಣಾ ಸೌಲಭ್ಯವನ್ನು ನಿರ್ಮಿಸುವುದು ಮತ್ತು ಸೌರ ಡ್ರಿಯರ್ಗಳನ್ನು ಸ್ಥಾಪಿಸಲು ಸಬ್ಸಿಡಿ ಬೆಂಬಲವನ್ನು ಘೋಷಿಸಲಾಗಿದೆ ಆದರೆ ಯಾರೂ ಈ ಸೌಲಭ್ಯ ಪಡೆಯಲು ಮುಂದಾಗಿಲ್ಲ. ಈ ರಾಜ್ಯಕ್ಕೆ 80,068 ಕೋಟಿ ರೂಪಾಯಿಗಳ ಅಭಿವೃದ್ಧಿಯ ಪ್ಯಾಕೇಜ್ ಅನ್ನು ಪ್ರಧಾನ ಮಂತ್ರಿಯವರು ನವೆಂಬರ್ 7, 2015 ರಂದು ಘೋಷಿಸಿದರು. ಇದು ರಾಜ್ಯ ಸರ್ಕಾರದ ಸಹಾಯದ ಮೂಲಕ 15 ಕೇಂದ್ರ ಸಚಿವಾಲಯಗಳ ಬೆಂಬಲದೊಂದಿಗೆ 61 ಪ್ರಮುಖ ಅಭಿವೃದ್ಧಿ ಕಾರ್ಯಗಳ ಅನುಷ್ಠಾನವನ್ನು ಒಳಗೊಂಡಿದೆ. ಕೇಂದ್ರ ಗೃಹ ಕಾರ್ಯದರ್ಶಿಯವರಿಂದ ನಡೆದ ಪಿಎಂಡಿಪಿ ಕೊನೆಯ ಅವಲೋಕನದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿಕೂಟವು ಈ ವರ್ಷ ಮಾರ್ಚ್ ಅಂತ್ಯದ ವೇಳೆಗೆ 62,991 ಕೋಟಿ ರೂಪಾಯಿಗಳನ್ನು (ಸುಮಾರು 79 ಪ್ರತಿಶತ) ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ. ಸಂಪರ್ಕಿಸಿದಾಗ, ಜಮ್ಮು ಮತ್ತು ಕಾಶ್ಮೀರದ ಮಾಜಿ ಹಣಕಾಸು ಸಚಿವ ಹಸೀಬ್ ಡ್ರಾಬು ಅವರು, ‘ಅನೇಕ ಯೋಜನೆಗಳಿಗೆ, ಕೆಲವು ಹೂಡಿಕೆಗಳ ವ್ಯಾಪ್ತಿಯು ಕೇವಲ ಜಮ್ಮು ಅಥವಾ ಕಾಶ್ಮೀರಕ್ಕೆ ಸೀಮಿತವಾಗಿಲ್ಲ’ ಎಂದು ಹೇಳಿದ್ದಾರೆ. “ನೀವು ಅದನ್ನು ಒಂದು ಪ್ರದೇಶಕ್ಕೆ ಸೀಮಿತ ಮಾಡಲು ಸಾಧ್ಯವಿಲ್ಲ. ಜಮ್ಮು ಅಥವಾ ಕಾಶ್ಮೀರವಷ್ಟೇ ಅಲ್ಲ, ರಸ್ತೆ ಮತ್ತು ವಿದ್ಯುತ್ ಯೋಜನೆಗಳು ಇಡೀ ರಾಜ್ಯಕ್ಕೆ ಲಾಭದಾಯಕ’ ಎಂದು ಅವರು ಹೇಳಿದ್ದಾರೆ..
ಅನೇಕ ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಕಾರ್ಯಗಳು ನಿಧಾನ ಗತಿಯಲ್ಲಿ ನಡೆದಿವೆ, ಆದರೆ ಮೋದಿ ಸರ್ಕಾರವು ಜಮ್ಮು ಕಾಶ್ಮೀರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಗತ ಮತ್ತು ವ್ಯಾಪಕ ಅಭಿವೃದ್ಧಿಯನ್ನು ತರುವಲ್ಲಿ ಅತ್ಯುತ್ತಮ ಮಟ್ಟದ ಪ್ರಯತ್ನವನ್ನು ನಡೆಸಿದೆ. ಜಮ್ಮುವಿನ ಅಭಿವೃದ್ಧಿಗಾಗಿ ಪ್ರತ್ಯೇಕ ಆಡಳಿತ ವಿಭಾಗದ ರಚನೆಯು ಅತ್ಯಗತ್ಯವಾಗಿತ್ತು. ಇದಲ್ಲದೆ, ಇಲ್ಲಿನ ನಿವಾಸಿಗಳ ದೀರ್ಘಕಾಲದ ಬೇಡಿಕೆಯೂ ಇದಾಗಿತ್ತು. ಜಮ್ಮು ಕಾಶ್ಮೀರದ ಬಗ್ಗೆ ಅನೇಕ ಸರ್ಕಾರ ನಿರ್ಲಕ್ಷ್ಯದ ಕಣ್ಣು ಬೀರಿದ್ದರೂ, ನರೇಂದ್ರ ಮೋದಿ ಸರಕಾರವು ಸಬ್ಕಾ ಸಾತ್ ಸಬ್ಕಾ ವಿಕಾಸ್ ಎಂಬ ಪದವನ್ನು ಈ ರಾಜ್ಯದಲ್ಲೂ ಕಾರ್ಯರೂಪಕ್ಕೆ ತರುವ ಯಾವುದೇ ಅವಕಾಶವನ್ನು ಮಿಸ್ ಮಾಡಿಕೊಂಡಿಲ್ಲ. ಮೋದಿ ಸರ್ಕಾರ ಜಮ್ಮು ಕಾಶ್ಮೀರದ ಸಮಸ್ಯೆಗಳ ಮೂಲ ಕಾರಣವನ್ನು ಗಮನದಲಿ, ಅದರ ಮೇಲೆ ಕಾರ್ಯ ಮಾಡುತ್ತಿದೆ, ಈ ಕಾರ್ಯಗಳು ಫಲಿತಾಂಶಗಳನ್ನು ತೋರಿಸಲು ಆರಂಭಿಸಿದೆ. ಜಮ್ಮು ಕಾಶ್ಮೀರದ ಜನರು ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದದ್ದಾರೆ, ಅದೂ ಅನೇಕ ವರ್ಷಗಳಲ್ಲಿ ಮೊದಲ ಬಾರಿಗೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.