ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಬಿಡುಗಡೆಗೊಂಡಿರುವ ಸಿಎಜಿ ವರದಿ, ಯುಪಿಎಗಿಂತ ಎನ್ಡಿಎ ಮಾಡಿಕೊಂಡಿರುವ ರಫೆಲ್ ಒಪ್ಪಂದ ಶೇ.2.86ರಷ್ಟು ಕಡಿಮೆಯಾಗಿದೆ ಎನ್ನುವ ಮೂಲಕ ಕೊನೆಗೂ ನರೇಂದ್ರ ಮೋದಿ ಸರ್ಕಾರದ ಪ್ರಾಮಾಣಿಕತೆಯನ್ನು ಪುಷ್ಟೀಕರಿಸಿದೆ. ಆದರೆ ಮೋದಿ ಸರ್ಕಾರ ರಫೆಲ್ ವಿವಾದದಿಂದ ಘನತೆಯುತವಾಗಿ ಎದ್ದು ಬಂದಿರುವುದಕ್ಕೆ ಸಿಎಜಿ ವರದಿ ಕಾರಣವಲ್ಲ, ಬದಲಿಗೆ ರಾಹುಲ್ ಗಾಂಧಿ ಮತ್ತು ಅವರ ‘ಚೌಕೀದಾರ್ ಚೋರ್ ಹೇ’ ಟೀಮ್ನ ನಾಯಕರು. ಈ ವಂಶಾಡಳಿತದ ನಾಯಕರುಗಳು ನಿರಂತರವಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಬಂದ ಕಾರಣದಿಂದಾಗಿ ಸರ್ಕಾರ ಉತ್ತಮನಾಗಿ ಗೋಚರಿಸಿದೆ.
ಸಿಎಜಿ ವರದಿ ರಫೆಲ್ ಒಪ್ಪಂದದ ಬಗೆಗಿನ ಸಂಪೂರ್ಣ ವಿವರಗಳನ್ನು ನೀಡಿದ್ದು, ಯುಪಿಎ ಪ್ರಸ್ತಾಪಿಸಿದ್ದ ಒಪ್ಪಂದಕ್ಕಿಂತ ಎನ್ಡಿಎ ಚೌಕಾಸಿ ನಡೆಸಿ ಕಾರ್ಯರೂಪಕ್ಕೆ ತಂದಿರುವ ರಫೆಲ್ ಒಪ್ಪಂದ ಶೇ 2.86ರಷ್ಟು ಕಡಿಮೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ.
ಸರ್ಕಾರದಿಂದ ಸರ್ಕಾರದ ನಡುವೆ ನಡೆದ ನೇರ ಒಪ್ಪಂದ ಇದಕ್ಕಾಗಿದ್ದು, ಇದರ ಒಪ್ಪಂದದ ಅನ್ವಯ ಫ್ರೆಂಚ್ ಸಂಸ್ಥೆ ಡೆಸಾಲ್ಟ್ 36 ಯುದ್ಧವಿಮಾನಗಳನ್ನು ಭಾರತಕ್ಕೆ ನೀಡಬೇಕಾಗಿದೆ. ಅನಿಲ್ ಅಂಬಾನಿಯ ಭಾಗವಹಿಸುವಿಕೆಯ ಬಗ್ಗೆ ಪ್ರತಿಪಕ್ಷಗಳು ದೊಡ್ಡ ಮಟ್ಟದ ಬೊಬ್ಬೆಯನ್ನು ಹಾಕಿವೆ. ಆದರೆ ತನ್ನ ಅನುಕೂಲಕ್ಕೆ ತಕ್ಕಂತೆ ಡೆಸಾಲ್ಟ್ ಕಂಪನಿಯೇ ಅಂಬಾನಿಯರವನ್ನು ಈ ಯೋಜನೆಯಲ್ಲಿ ಸೇರಿಸಿಕೊಂಡಿದೆ ಎಂಬ ಮಾತನ್ನು ಇವುಗಳು ಕೇಳುತ್ತಿಲ್ಲ. ರಾಹುಲ್ ಗಾಂಧಿ ಮತ್ತು ಅವರ ವಿತ್ತ ಗುರು ಪಿ.ಚಿದಂಬರಂ ಅವರು ರಫೆಲ್ ಒಪ್ಪಂದದ ಬಗ್ಗೆ ರಾಜಕೀಯ ಮಾಡುತ್ತಾ ಇದ್ದಾರೆಯೇ ವಿನಃ ಬೇರೆನೂ ಅಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
ಉತ್ತರಪ್ರದೇಶದಲ್ಲಿ 2018ರ ಎಪ್ರಿಲ್ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಅವರು, ಯುಪಿಎ ಸರ್ಕಾರ ರಫೆಲ್ಗೆ ರೂ.700 ಒಪ್ಪಂದ ಮಾಡಿಕೊಂಡಿತ್ತು, ಆದರೆ ಮೋದಿ ಸರ್ಕಾರ ರೂ,1,500 ಕೋಟಿ ಒಪ್ಪಂದ ಮಾಡಿಕೊಂಡಿದೆ ಎಂದಿದ್ದರು. ಆದರೆ ಮೂರು ತಿಂಗಳ ಬಳಿಕ ಎನ್ಡಿಎ ವಿರುದ್ಧ ಸಂಸತ್ತಿನಲ್ಲಿ ನಿರ್ಣಯ ಮಂಡನೆಗೊಳಿಸಿದ ವೇಳೆ ದರವನ್ನು ಏಕಾಏಕಿ ಇಳಿಸಿ, ಯುಪಿಎ ಸರ್ಕಾರ ರೂ.520 ಕೋಟಿಗೆ ಒಪ್ಪಂದ ಮಾಡಿಕೊಂಡಿತ್ತು, ಆದರೆ ಮೋದಿಯವರು 2015ರಲ್ಲಿ ಫ್ರಾನ್ಸ್ಗೆ ತೆರಳಿ ದರವನ್ನು ರೂ.1,600 ಕೋಟಿಗೆ ಮೂರು ಪಟ್ಟು ಏರಿಸಿದರು ಎಂದರು. ಅಂದರೆ ಹಿಂದೆ ಹೇಳಿದ್ದಕ್ಕಿಂತ 100 ಕೋಟಿ ರೂಪಾಯಿಯನ್ನು ಹೆಚ್ಚಿಸಿದ್ದರು. ಬಳಿಕ ಒಂದು ತಿಂಗಳ ತರುವಾಯ ಯುಪಿಎಯ ದರ ರೂ.540 ಕೋಟಿ ಎಂದಿದ್ದರು, ಬಳಿಕ ಆಗಸ್ಟ್ನಲ್ಲಿ ರೂ.526ಕೋಟಿ ಎಂದಿದ್ದರು.
ಪ್ರತಿ ಬಾರಿಯೂ ರಾಹುಲ್ ಗಾಂಧೀ ತಮ್ಮದೇ ಆದ ಸಂಖ್ಯೆಗಳನ್ನು ಹೇಳುತ್ತಿದ್ದರು ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಇದೇ ಜನವರಿಯಲ್ಲಿ ಚಿದಂಬರಂ ಅವರೊಂದಿಗೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಎನ್ಡಿಎ ರಫೆಲ್ಗೆ 186 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಿದೆ ಎಂದಿದ್ದರು. ಅಂದರೆ, ಎನ್ಡಿಎಯಿಂದ ಆದ ನಷ್ಟ ಒಂದು ತಿಂಗಳೊಳಗೆ ರೂ. 1 ಸಾವಿರ ಕೋಟಿಯಿಂದ ರೂ.186 ಕೋಟಿಗೆ ಬಂದಿಳಿಯಿತು. ಆದರೆ ಕಾಂಗ್ರೆಸ್ ಈ ಅಂಕಿಅಂಶವನ್ನೂ ಸಿಎಜಿ ವರದಿ ತಳ್ಳಿ ಹಾಕಿದೆ. ಚೌಕೀದಾರ್ ಚೋರ್ ಹೇ ಗ್ಯಾಂಗ್ ಮುಖಭಂಗ ಎದುರಿಸಿದೆ.
ಅದೇನೆಯಿರಲಿ, ಎನ್ಡಿಎ ಸರ್ಕಾರ ತನ್ನ ಲಕ್ಕಿ ಸ್ಟಾರ್ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ಹೇಳಲೇ ಬೇಕು. ಅವರು ಮತ್ತು ಅವರ ಹಣಕಾಸು ಗುರು ಪಿ.ಚಿದಂಬರಂ ಅವರಿಂದಾಗಿ ಎನ್ಡಿಎ ಸರ್ಕಾರ ರಫೆಲ್ ಒಪ್ಪಂದದಲ್ಲಿ ಪ್ರಾಮಾಣಿಕನಾಗಿ ಹೊರಹೊಮ್ಮಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.