ನವದೆಹಲಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂನ ಟಾಪ್ ಮ್ಯಾನೇಜ್ಮೆಂಟ್, ಇನ್ನೋವೇಶನ್ ಅವಾರ್ಡ್ ನೀಡಿ ಗೌರವಿಸಿದೆ. ವಾಹನ ಸುರಕ್ಷತೆಗಾಗಿ ಹಲವಾರು ಸುಧಾರಣೆಗಳನ್ನು ತಂದ ಕಾರಣಕ್ಕಾಗಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ.
ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂನ ಅಧ್ಯಕ್ಷ ಡೇವಿಡ್ ವಾರ್ಡ್, ಮಾಜಿ ಮುಖ್ಯಸ್ಥ ಮ್ಯಾಕ್ಸ್ ಮೋಸ್ಲೆ, ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆಯವರು ನಿತಿನ್ ಗಡ್ಕರಿಗೆ ಪ್ರಶಸ್ತಿಯನ್ನು ಪ್ರದಾನಿಸಿದರು. ಅಲ್ಲದೇ, ’ಸೇಫರ್ ಕಾರ್ ಫಾರ್ ಇಂಡಿಯಾ ಕ್ಯಾಂಪೇನ್’ಗೆ ಬೆಂಬಲ ನೀಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
‘ದೆಹಲಿಗೆ ಆಗಮಿಸಿ, ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂನ ಇನ್ನೋವೇಶನ್ ಅವಾರ್ಡ್ನ್ನು ಭಾರತ ಸರ್ಕಾರಕ್ಕೆ ಪ್ರದಾನಿಸಿದ್ದು ಅತೀವ ಸಂತೋಷ ಕೊಡುತ್ತಿದೆ. ವಾಹನಗಳ ಸುರಕ್ಷತೆಯನ್ನು ವೃದ್ಧಿಸಲು, ಅಪಘಾತ ಪರೀಕ್ಷಾ ಗುಣಮಟ್ಟಗಳನ್ನು ವೃದ್ಧಿಸಲು ಕಾನೂನಾತ್ಮಕವಾಗಿ ಕಳೆದ ಕೆಲ ವರ್ಷಗಳಿಂದ ತೆಗೆದುಕೊಂಡ ಕ್ರಮಗಳಿಗಾಗಿ ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ’ ಎಂದರು.
In Delhi today, presenting Transport & Highways Minister Shri Nitin Gadkari the @GlobalNCAP Innovation Award for the Indian government’s legislative action to improve vehicle safety. Thank you for your strong support of the #SaferCarsForIndia campaign. pic.twitter.com/KEjce1XE2c
— GlobalNCAP (@GlobalNCAP) February 12, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.