ದೇಶದ ಪ್ರತಿಯೊಬ್ಬ ನಾಗರಿಕನೂ ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡಬೇಕು ಎಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಪ್ರಧಾನ ಮಂತ್ರಿ ಜನ್ಧನ್ ಯೋಜನಾ ಭಾರೀ ಯಶಸ್ಸನ್ನು ಕಂಡಿದೆ. ಇದುವರೆಗೆ ಈ ಯೋಜನೆಯಡಿ 34 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಶೂನ್ಯ ಠೇವಣಿಯ ಮೂಲಕವೂ ಈ ಖಾತೆ ತೆರೆಯಬಹುದಾದರೂ, ಜನರು ಒಂದಿಷ್ಟು ಹಣವನ್ನು ಹಾಕಿಯೇ ಖಾತೆ ತೆರೆದಿದ್ದಾರೆ. ಇದರಿಂದಾಗಿ 34 ಕೋಟಿ ಖಾತೆಗಳಲ್ಲಿ 90 ಸಾವಿರ ಕೋಟಿ ಹಣ ರೂಪಾಯಿ ಸಂಗ್ರಹವಾಗಿದೆ. ಅಂದಾಜಿನ ಲೆಕ್ಕಚಾರದಲ್ಲಿ, ಇದು ಗೋವಾದ ಜಿಡಿಪಿ ಮತ್ತು ದೇಶದ ಒಟ್ಟು ಬ್ಯಾಂಕ್ ಠೇವಣಿ ಮೊತ್ತದ ಶೇ.1ರಷ್ಟಾಗಿದೆ. 2015ರ ಮಾರ್ಚ್ನಲ್ಲಿ ಜನ್ಧನ್ ಅಕೌಂಟ್ನ ಸರಾಸರಿ ಠೇವಣಿ 1,065 ರೂಪಾಯಿ ಮತ್ತು ಇದು ನಾಲ್ಕು ವರ್ಷಕ್ಕೂ ಕಡಿಮೆ ಅವಧಿಯಲ್ಲಿ 2,600 ರೂಪಾಯಿಗೆ ಏರಿಕೆಯಾಗಿದೆ.
ನಿಷ್ಕ್ರಿಯ ಖಾತೆಗಳ ಸಂಖ್ಯೆ ಶೇ.20ರಷ್ಟು ತಗ್ಗಿದೆ. ಯೋಜನೆಯ ಟೀಕಾಕಾರರು, ಬಹುತೇಕ ಜನ್ಧನ್ ಅಕೌಂಟ್ಗಳು ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದ್ದರು. ಠೇವಣಿಗಳೂ ಕಡಿಮೆಯಾಗಿವೆ ಎಂದೂ ಆರೋಪ ಮಾಡಿದ್ದರು. ಆದರೀಗ, ಜನ್ಧನ್ ಯೋಜನೆಯಡಿ ತೆರೆಯಲ್ಪಟ್ಟ ಹಲವಾರು ಖಾತೆಗಳು ಬಡ ಮನೆಗಳ ಉಳಿತಾಯಕ್ಕೆ ದಾರಿಯಾಗಿವೆ ಮತ್ತು ಠೇವಣಿಗಳೂ ಕಂಡಿವೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಈ ಯೋಜನೆಯಡಿ ಸರ್ಕಾರ 24 ಕೋಟಿ ರುಪೇ ಡೆಬಿಟ್ ಕಾರ್ಡ್ನ್ನು ವಿತರಿಸಿದೆ ಮತ್ತು ಇನ್ಬಿಲ್ಟ್ ಇನ್ಸುರೆನ್ಸ್ ಕವರೇಜ್ನ್ನು 1 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಏರಿಕೆ ಮಾಡಿದೆ.
ಹಣಕಾಸು ಅಂತರ್ಗತಗೊಳಿಸುವ ಈ ಯೋಜನೆಯನ್ನು ಭಾರತ ಸರ್ಕಾರ 2014ರ ಆಗಸ್ಟ್ 15ರಂದು ಆರಂಭಿಸಿತ್ತು ಮತ್ತು ಇದೀಗ ಈ ಯೋಜನೆ 34 ಕೋಟಿ ಫಲಾನುಭವಿಗಳನ್ನು ಹೊಂದುವ ಮೂಲಕ ಸರ್ಕಾರ ಸಾಕಷ್ಟು ಯೋಜನೆಗಳಿಗೆ ವಾಹಕದಂತೆ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನಾ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ ಇತ್ಯಾದಿ ಕಡಿಮೆ ದರದ ವಿಮಾ ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕ್ ಖಾತೆಗಳು ಅತ್ಯಗತ್ಯ. ಈ ಯೋಜನೆಯ ಬಗ್ಗೆ ವಿಮಾ ರಹಿತ ಜನರಿಗೆ ಅಷ್ಟೊಂದು ಮಾಹಿತಿಗಳಿಲ್ಲ, ಈ ಕಾರಣದಿಂದ ಗ್ರಾಮ ಸ್ವರಾಜ್ಯ ಅಭಿಯಾನದ ವೇಳೆ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ.
ಮೋದಿ ಸರ್ಕಾರವು, ಪ್ರಧಾನಮಂತ್ರಿ ಉಜ್ವಲ ಯೋಜನೆ, ಸೌಭಾಗ್ಯ, ಅಟಲ್ ಪಿಂಚಣಿ ಯೋಜನೆ, ಉಜಾಲ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಸುರಕ್ಷಾ ಬಿಮಾ ಯೋಜನೆ, ಮಿಶನ್ ಇಂದ್ರಧನುಷ್ ಇತ್ಯಾದಿಗಳನ್ನು ಜನರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದಿದೆ. ಬಿಜೆಪಿ ಚುನಾವಣೆಗಳಲ್ಲಿ ಗೆಲುವು ಕಾಣಲೂ ಈ ಯೋಜನೆಗಳು ಕಾರಣಗಳಾಗಿವೆ. ಸಂವಿಧಾನದಲ್ಲಿ ನೀಡಿದ ಭರವಸೆಯಂತೆ ಸಮಾಜವನ್ನು ಕಲ್ಯಾಣ ಸಮಾಜವನ್ನಾಗಿಸಲು ಬೇಕಾದ ಯೋಜನೆಗಳನ್ನು ಕೇಂದ್ರ ಅನುಷ್ಠಾನಕ್ಕೆ ತಂದು, ಎಲ್ಲರನ್ನೂ ಅದರಡಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಪಟ್ಟಿದೆ. ಆದರೆ ಹಿಂದಿನ ಸರ್ಕಾರಗಳು ಕೇವಲ ಬಾಯಿ ಮಾತಿನಲ್ಲಿ ಸಾಮಾಜಿಕ ಭದ್ರತೆಯ ಬಗ್ಗೆ ಮಾತನಾಡುತ್ತಿದ್ದವೇ ಹೊರತು ಎಂದಿಗೂ ಮೂಲ ಸೇವೆಗಳನ್ನು ತಂದು ಸಮಾಜದ ಕಲ್ಯಾಣಕ್ಕೆ ಶ್ರಮಿಸಲಿಲ್ಲ.
ವಿಶ್ಲೇಷಕರ ಪ್ರಕಾರ, ಹಿಂದುಳಿದ ವರ್ಗಗಳನ್ನು ಬಿಜೆಪಿ ವೋಟ್ ಬ್ಯಾಂಕ್ನೊಳಗೆ ತರುವಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳು ಸಾಕಷ್ಟು ಕೊಡುಗೆಗಳನ್ನು ನೀಡಿವೆ. ಹಿಂದುಳಿದ ವರ್ಗಗಳು ಎಸ್ಪಿ, ಬಿಎಸ್ಪಿಯಂತಹ ಪಕ್ಷಗಳ ಸಾಂಪ್ರದಾಯಿಕ ವೋಟ್ ಬ್ಯಾಂಕ್ಗಳು. ಈ ಪಕ್ಷಗಳು ಕೇವಲ ಬಾಯಿ ಮಾತಿನಲ್ಲಿ ಮಾತ್ರ ಸಾಮಾಜಿಕ ಭದ್ರತೆಯ ಬಗ್ಗೆ ಬೊಬ್ಬಿಡುತ್ತವೆ. ಆದರೆ ಮೋದಿ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಬದ್ಧತೆಯನ್ನು ತೋರಿಸಿದೆ, ಇದೇ ಕಾರಣ ಈ ವರ್ಗಗಳ ಜನರು ಬಿಜೆಪಿಯತ್ತ ವಾಲುತ್ತಿದ್ದಾರೆ. ಒಂದು ವೇಳೆ ಪಕ್ಷ, ಹಿಂದುಳಿದ ವರ್ಗಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಸಂಪಾದಿಸಿದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಮೋದಿ ಸರ್ಕಾರಕ್ಕೆ ದೊಡ್ಡ ಸವಾಲೇ ಅಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.