ನವದೆಹಲಿ: ದೇಶದ 651 ಜಿಲ್ಲೆಗಳಲ್ಲಿ 5001 ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನಾ ಕೇಂದ್ರಗಳು ಕಾರ್ಯಾಚರಿಸುತ್ತಿವೆ ಎಂಬುದಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯಖಾತೆ ಸಚಿವ ಮನ್ಸುಕ್ ಎಲ್. ಮಾಂಡವೀಯಾ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಜನೌಷಧಿ ಪರಿಯೋಜನಾ ಕೇಂದ್ರಗಳಲ್ಲಿ ಲಭ್ಯವಿರುವ ಔಷಧಿಗಳ ಸಂಖ್ಯೆಯೂ ಏರಿಕೆಯಾಗಿದೆ, ಪ್ರಸ್ತುತ 800 ಬಗೆಯ ಔಷಧಿಗಳು ಮತ್ತು 154 ವಿಧದ ಶಸ್ತ್ರಚಿಕಿತ್ಸೆ ಮತ್ತು ಉಪಭೋಗ್ಯಗಳು ಈ ಕೇಂದ್ರಗಳಲ್ಲಿ ಸಿಗುತ್ತಿವೆ. ಯ್ಯಾಂಟಿ-ಇನ್ಫೆಕ್ಟಿವ್, ಯ್ಯಾಂಟಿ ಡಯಾಬಿಟಿಸ್, ಕಾರ್ಡಿಯೋವಸ್ಕ್ಯುಲರ್, ಯ್ಯಾಂಟಿ ಕ್ಯಾನ್ಸರ್, ಗ್ಯಾಸ್ಟ್ರೋ-ಇನ್ಟೆಸ್ಟಿನಲ್ ಮೆಡಿಸಿನ್ಗಳು ಸೇರಿದಂತೆ ಎಲ್ಲಾ ಚಿಕಿತ್ಸಕ ಗುಂಪುಗಳ ಔಷಧಿಗಳು ಇಲ್ಲಿ ಲಭ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.
2017-18, 2018-19, 2019-20 ಮೂರು ವರ್ಷಗಳ ಅವಧಿಯಲ್ಲಿ ತಲಾ ಒಂದು ಸಾವಿರದಂತೆ ಒಟ್ಟು ಮೂರು ಸಾವಿರ ಜನೌಷಧಿ ಪರಿಯೋಜನಾ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಇಡಲಾಗಿದೆ. ಇದರಲ್ಲಿ ಈಗಾಗಲೇ 2017-18 ಮತ್ತು 2018-19ರ ಗುರಿಗಳನ್ನು ತಲುಪಲಾಗಿದೆ.
ಉತ್ತಮ ಗುಣಮಟ್ಟದ ಔಷಧಿಗಳು ಜನಸಾಮಾನ್ಯನಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವ ಸಲುವಾಗಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲೆಗಳು ಹೆಚ್ಚು ಹೆಚ್ಚು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರಗಳನ್ನು ತೆರೆಯುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕದಲ್ಲಿ 461, ಉತ್ತರಪ್ರದೇಶದಲ್ಲಿ 793, ಪಶ್ಚಿಮಬಂಗಾಳದಲ್ಲಿ 95, ಕೇರಳದಲ್ಲಿ 453, ಉತ್ತರಾಖಂಡದಲ್ಲಿ 155, ಆಂಧ್ರದಲ್ಲಿ 177, ತ್ರಿಪುರಾದಲ್ಲಿ 24, ರಾಜಸ್ಥಾನದಲ್ಲಿ 118, ಪಂಜಾಬ್ನಲ್ಲಿ 137, ಮಧ್ಯಪ್ರದೇಶದಲ್ಲಿ 128, ಗುಜರಾತ್ನಲ್ಲಿ 479 ಸೇರಿದಂತೆ ಇಡೀ ದೇಶದಲ್ಲಿ ಒಟ್ಟು 5001 ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರಗಳು ಕಾರ್ಯಾಚರಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.