ನವದೆಹಲಿ: ಓಎನ್ಜಿಸಿ(Natural Gas Corporation Ltd) ಮತ್ತು ಓಐಎಲ್( Oil India Ltd )ನ 90 ತೈಲ ಮತ್ತು ಅನಿಲ ಫೀಲ್ಡ್ಗಳನ್ನು ಖಾಸಗಿ ವಲಯದ ಇಂಧನ ಕಂಪನಿಗಳಿಗೆ ಹರಾಜಿನ ಮೂಲಕ ನೀಡುವ ಬಗ್ಗೆ ಉನ್ನತ ಮಟ್ಟದ ಸಮಿತಿ ನೀಡಿದ ಪ್ರಸ್ತಾವಣೆಯನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ.
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ನೇತೃತ್ವದಲ್ಲಿ ಉನ್ನತ ಸಮಿತಿಯನ್ನು ರಚನೆ ಮಾಡಲಾಗಿದ್ದು, ಸಂಪುಟ ಕಾರ್ಯದರ್ಶಿ ಪಿಎಕೆ ಸಿನ್ಹಾ ಅವರೂ ಇದರ ಸದಸ್ಯರಾಗಿದ್ದಾರೆ. 97 ತೈಲ ಮತ್ತು ಗ್ಯಾಸ್ ಫೀಲ್ಡ್ಗಳನ್ನು ಖಾಸಗಿಯವರಿಗೆ ನೀಡುವ ಬಗ್ಗೆ ಈ ಸಮಿತಿ ಪ್ರಸ್ತಾಪ ಮಾಡಿದೆ.
ದೇಶದ ಒಟ್ಟಾರೆ ತೈಲ ಮತ್ತು ಅನಿಲ ಉತ್ಪಾದನೆಗೆ ಕೇವಲ ಶೇ.5ರಷ್ಟು ಕೊಡುಗೆ ನೀಡುವ 149 ಸಣ್ಣ ಫೀಲ್ಡ್ಗಳು ದೇಶದಲ್ಲಿವೆ, ಇವುಗಳ ಪೈಕಿ 97ನ್ನು ಖಾಸಗಿಯವರಿಗೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಸಮಿತಿಯು, 149 ಫೀಲ್ಡ್ಗಳ ಪೈಕಿ ಓಎನ್ಜಿಸಿ ಮತ್ತು ಓಐಎಲ್ಗೆ 52 ಫೀಲ್ಡ್ಗಳನ್ನು ಹೊಂದಲು ಅವಕಾಶ ಕೊಟ್ಟಿದೆ. ಆದರೆ ನಿಗದಿತ ಸಮಯದೊಳಗೆ ಉತ್ಪಾದನೆ ಮತ್ತು ಹಣಕಾಸು ಪ್ರದರ್ಶನದಲ್ಲಿ ಉತ್ತಮ ಫಲಿತಾಂಶವನ್ನು ನೀಡಬೇಕು ಎಂಬ ಕಂಡೀಷನ್ ಹಾಕಿದೆ. ಒಂದು ವೇಳೆ ಉತ್ತಮ ಫಲಿತಾಂಶವನ್ನು ನೀಡದೇ ಹೋದರೆ ಓಎನ್ಜಿಸಿ ಮತ್ತು ಓಐಎಲ್ಗಳು ಈ ಫೀಲ್ಡ್ಗಳನ್ನು ಕಳೆದುಕೊಳ್ಳಲಿವೆ.
ಪ್ರಸ್ತುತ ಓಎನ್ಜಿಸಿಯ ಬಳಿ 49 ಮತ್ತು ಓಐಎಲ್ನ ಬಳಿಕ 3 ಫೀಲ್ಡ್ಗಳಿವೆ.
ಸಮಿತಿಯು ತಿಂಗಳು “ದೇಶೀಯ ತೈಲ ಮತ್ತು ಅನಿಲ ಸಂಶೋಧನೆ ಮತ್ತು ಉತ್ಪಾದನೆ ಹೆಚ್ಚಿಸುವ” ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ತೈಲ ಕಾರ್ಯದರ್ಶಿ ಎಂ.ಎಂ.ಕುಟ್ಟಿ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್, ಒಎನ್ಜಿಸಿ ಅಧ್ಯಕ್ಷ ಶಶಿ ಶಂಕರ್ ಮತ್ತು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.