ನವದೆಹಲಿ: ಕಲೆ, ಅಕ್ಷರ ಮುಂತಾದ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿರುವ, ಆದರೆ ಆರ್ಥಿಕವಾಗಿ ಕಠಿಣ ಪರಿಸ್ಥಿತಿಯಲ್ಲಿರುವ ವಯಸ್ಸಾದ ಕಲಾವಿದರು ಮತ್ತು ವಿದ್ವಾಂಸರುಗಳ ಹಣಕಾಸು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಸಲುವಾಗಿ ಕೇಂದ್ರ ಸರ್ಕಾರ, ಪಿಂಚಣಿ ಮತ್ತು ಆರೋಗ್ಯ ಅನುದಾನ ಯೋಜನೆಗಳನ್ನು ತಂದಿದೆ.
‘ಕಲಾವಿದರಿಗೆ ಪಿಂಚಣಿ ಮತ್ತು ಆರೋಗ್ಯ ಸಹಾಯ’ ಒದಗಿಸುವ ಯೋಜನೆಯನ್ನು ಶೀಘ್ರದಲ್ಲೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತರಲಿದೆ.
ಈ ಬಗ್ಗೆ ಲೋಕಸಭೆಗೆ ಮಾಹಿತಿಯನ್ನು ನೀಡಿರುವ ಡಾ.ಮಹೇಶ್ ಶರ್ಮಾ ಅವರು, ‘ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಅಥವಾ ಅವರ ಅಬಲಂಬಿಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಅವರನ್ನು ಕೈಗೆಟಕುವ ದರದ ಆರೋಗ್ಯ ವಿಮಾ ಯೋಜನೆಗೆ ಒಳಪಡಿಸಲಾಗುತ್ತದೆ’ ಎಂದಿದ್ದಾರೆ.
ಅಲ್ಲದೇ 40 ವರ್ಷದ ಕೆಳಗಿನ ಕಲಾವಿದರು, ಭವಿಷ್ಯದಲ್ಲಿ ಪಿಂಚಣಿಯನ್ನು ಪಡೆಯಬೇಕೆಂದು ಬಯಸಿದರೆ ಅವರು ತಕ್ಷಣ ಅಟಲ್ ಪಿಂಚಣಿ ಯೋಜನೆಗೆ ನೋಂದಣಿಯಾಗಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.