ದುಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಬು ಧಾಬಿಯ ನ್ಯಾಯಾಂಗ ಇಲಾಖೆಯು ಹಿಂದಿಯನ್ನು ಅಲ್ಲಿನ ಮೂರನೇ ಅಧಿಕೃತ ಭಾಷೆಯನ್ನಾಗಿಸಲು ನಿರ್ಧರಿಸಿದೆ. ಅರಬ್ಬಿ ಅಲ್ಲಿನ ಮೊದಲ ಅಧಿಕೃತ ಭಾಷೆಯಾದರೆ, ಇಂಗ್ಲೀಷ್ ಎರಡನೇ ಅಧಿಕೃತ ಭಾಷೆ. ಇದೀಗ ಮೂರನೇ ಅಧಿಕೃತ ಭಾಷೆಯ ಸ್ಥಾನವನ್ನು ಹಿಂದಿ ಪಡೆದುಕೊಂಡಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.
ಅಬುಧಾಬಿಯ ನಿರ್ಧಾರದಿಂದ ಅಲ್ಲಿ ನೆಲೆಸಿರುವ ವಿದೇಶಿಗರಿಗೆ ಅದರಲ್ಲೂ ಮುಖ್ಯವಾಗಿ ಭಾರತೀಯರಿಗೆ ಕಾನೂನು ಪ್ರಕ್ರಿಯೆಯ ಸುಲಲಿತ ಲಭ್ಯತೆ ಸೇರಿದಂತೆ, ಇನ್ನಿತರ ಅತ್ಯಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಕಷ್ಟು ಪ್ರಯೋಜನವಾಗಲಿದೆ. ಅಲ್ಲದೇ, ಕಾನೂನು ದಾಖಲೆಗಳು ಮತ್ತು ಅಗತ್ಯ ಅರ್ಜಿಗಳು, ಫಾರಂಗಳು ಅರಬ್ಬಿ, ಇಂಗ್ಲೀಷ್ ಜೊತೆಗೆ ಹಿಂದಿಯಲ್ಲೂ ಇನ್ನು ಮುಂದೆ ಲಭ್ಯವಾಗಲಿದೆ.
ಅಬುಧಾಬಿ ನಿರ್ಧಾರವನ್ನು ಶ್ಲಾಘಿಸಿರುವ, ಯುಎಇನ ಭಾರತ ರಾಯಭಾರಿ ನವದೀಪ್ ಸುರಿ ಅವರು, ‘ಅಬುಧಾಬಿ ಅತ್ಯದ್ಭುತ ಹೆಜ್ಜೆಯನ್ನಿಟ್ಟಿದೆ, ಭಾರತದ ಬ್ಲೂ ಕಾಲರ್ ಕಾರ್ಮಿಕರಿಗೆ ನ್ಯಾಯದ ಲಭ್ಯತೆಯನ್ನು ಸುಲಲಿತಗೊಳಿಸಲಿದೆ. ಯುಎಇನ ಸಹಿಷ್ಣುತಾ ಅಜೆಂಡಾವನ್ನೂ ಇದು ಪುಷ್ಟೀಕರಿಸುತ್ತದೆ’ ಎಂದಿದ್ದಾರೆ.
ಯುಎಇನಲ್ಲಿ ಸುಮಾರು 3.3 ಮಿಲಿಯನ್ ಭಾರತೀಯರು ನೆಲೆಸಿದ್ದಾರೆ, ಅವರಲ್ಲಿ ಬಹುತೇಕರು ಬ್ಲೂ ಕಾಲರ್ ಉದ್ಯೋಗ ಮಾಡುತ್ತಿದ್ದಾರೆ. ಬಹುಭಾಷೆಯನ್ನು ಅನುಸರಿಸುವುದರಿಂದ ವಿದೇಶಿ ಪ್ರಜೆಗಳು ಎದುರಿಸುವ ಸಾಕಷ್ಟು ಸಮಸ್ಯೆಗಳು ನಿರ್ಮೂಲನೆಯಾಗಲಿವೆ. ಈ ಹಿಂದೆ, ಅಬುಧಾಬಿ ನ್ಯಾಯಾಲಯವು, ಅರಬ್ಬೀಯೇತರ ಜನರಿಗಾಗಿ ಎಲ್ಲಾ ಕಾನೂನು ಮತ್ತು ಪ್ರಕ್ರಿಯೆಗಳ ದಾಖಲೆಯನ್ನು ಇಂಗ್ಲೀಷ್ನಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿತ್ತು.
This is an excellent step by #AbuDhabi that will certainly improve access to justice for India’s blue collar workers. It also fits perfectly into the wider agenda of UAE’s #YearofTolerance https://t.co/ZvAkBOo5tI
— IndAmbUAE (@navdeepsuri) February 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.