ಕುರುಕ್ಷೇತ್ರ: ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 12ರಂದು ಹರಿಯಾಣದ ಬಾದ್ಸಾದ ಜಜ್ಜರ್ನಲ್ಲಿ ನಿರ್ಮಾಣಗೊಂಡಿರುವ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ್ನು ಕುರುಕ್ಷೇತ್ರದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ.
ಈ ಕಾನ್ಸರ್ ಆಸ್ಪತ್ರೆ 710 ಬೆಡ್ಗಳನ್ನು ಹೊಂದಿದ್ದು, ರೂ.2,035 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಡಾಕ್ಟರ್ಗಳಿಗೆ 1080 ಹಾಸ್ಟೇಲ್ ರೂಮ್ಗಳನ್ನು ಇದು ಹೊಂದಿದ್ದು, ಕ್ಯಾನ್ಸರ್ ರೋಗಿಗಳ ಉಪಚಾರಕ್ಕೆ ಆಗಮಿಸುವ ಸಂಬಂಧಿಗಳಿಗೆ 800 ರೂಮ್ಗಳಿವೆ.
2015ರಲ್ಲಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಮತ್ತು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಈ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಿದ್ದರು.
ಇದೇ ವೇಳೆ, ಪಂಚಕುಲದ ಶ್ರೀ ಮಾತ ಮಾನ್ಸಾ ದೇವಿ ಕಾಂಪ್ಲೆಕ್ಸ್ನಲ್ಲಿ ನಿರ್ಮಾಣಗೊಂಡಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದವನ್ನೂ ಕುರುಕ್ಷೇತ್ರದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಅವರು ಉದ್ಘಾಟಿಸಲಿದ್ದಾರೆ. 250 ಬೆಡ್ಗಳ ಈ ಆಸ್ಪತ್ರೆಯನ್ನು ರೂ.250 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಅಲ್ಲದೇ, ಪ್ರಧಾನಿಯವರು ಕುರುಕ್ಷೇತ್ರದಿಂದ ಸ್ವಚ್ಛ ಶಕ್ತಿ-2019ನನ್ನೂ ಉದ್ಘಾಟನೆಗೊಳಿಸಲಿದ್ದಾರೆ, ದೇಶದಾದ್ಯಂತ 7,500 ಮಹಿಳೆಯರು ಮತ್ತು ಹರಿಯಾಣದ 15 ಸಾವಿರ ಮಹಿಳಾ ಪಂಚ ಮತ್ತು ಸರಪಂಚ್ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಮೋದಿ, ಸ್ವಚ್ಛ ಶಕ್ತಿ 2017ನ್ನು ಗುಜರಾತ್ನಲ್ಲಿ, ಸ್ವಚ್ಛ ಶಕಿ-2018ನ್ನು ಲಕ್ನೋದಲ್ಲಿ ಉದ್ಘಾಟಿಸಿದ್ದರು. ಈ ಬಾರಿ ಹರಿಯಾಣದಲ್ಲಿ ಉದ್ಘಾಟನೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.