ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಉಡುಗೊರೆಗಳನ್ನು ಇತ್ತೀಚಿಗೆ ಹರಾಜು ಹಾಕಲಾಗಿದ್ದು, ಹರಾಜಿನಲ್ಲಿ ಮರದಿಂದ ನಿರ್ಮಿಸಲಾದ ಆಸೋಶಕಸ್ತಂಭದ ಪ್ರತಿಬಿಂಬ, ಅಸ್ಸಾಂನ ಸಾಂಪ್ರದಾಯಿಕ ಟ್ರೇ ಹೋರಾಯ್ ಮತ್ತು ಶಿವನ ಪ್ರತಿಮೆ ಅತೀ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದೆ. ಹರಾಜು ಪ್ರಕ್ರಿಯೆಯಿಂದ ಬಂದ ಹಣ ಗಂಗಾ ಶುದ್ಧೀಕರಣಕ್ಕೆ ವಿನಿಯೋಗವಾಗಲಿದೆ.
ಮೂಲಗಳು ಪ್ರಕಾರ, ಮರದ ಆಶೋಕಸ್ತಂಭ ರೂ.13 ಲಕ್ಷಕ್ಕೆ ಮಾರಾಟವಾಗಿದೆ. ಇದನ್ನು ಸೂರತ್ನ ಜಿಲ್ಲಾ ಬಿಜೆಪಿ ಯುವ ಮೋರ್ಛಾ ಮೋದಿಗೆ ಉಡುಗೊರೆಯಾಗಿ ನೀಡಿತ್ತು. ಇದು 3.612 ಕೆಜಿ ತೂಕವಿದೆ. ಇದಕ್ಕೆ ರೂ.4 ಸಾವಿರ ಮೂಲ ಬೆಲೆಯನ್ನು ನಿಗದಿಪಡಿಸಲಾಗಿತ್ತು. ಹೊರಾಯ್ ರೂ.12 ಲಕ್ಷಕ್ಕೆ ಮತ್ತು ಶಿವನ ಪ್ರತಿಮೆ 10 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಪ್ರಧಾನಿಯಾದ ಬಳಿಕ ಮೋದಿಯವರಿಗೆ ಸಿಕ್ಕ 1800 ವಸ್ತುಗಳನ್ನು ಹರಾಜು ಮಾಡಲಾಗಿತ್ತು. ಜ.29 ಮತ್ತು 30ರಂದು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಹರಾಜು ಹಾಕಲಾಗಿತ್ತು. ಬಳಿಕ ಪಿಎಂಮೆಮೆಂಟೋಸ್ಸ್.ಗಾವ್.ಇನ್ ವೆಬ್ಸೈಟ್ನಲ್ಲಿ ಇ-ಹರಾಜು ಹಾಕಲಾಗಿತ್ತು.
ಗೌತಮ್ ಬುದ್ಧ ಪ್ರತಿಮೆ ರೂ.7 ಲಕ್ಷಕ್ಕೆ, ನೇಪಾಳ ಮಾಜಿ ಪಿಎಂ ಸುಶೀಲ್ ಕೊಯಿರಾಲ ಉಡುಗೊರೆ ನೀಡಿದ್ದ ಕಂಚಿನ ಸಿಂಹದ ಪ್ರತಿಮೆ ರೂ.5.20 ಲಕ್ಷಕ್ಕೆ ಹರಾಜಾಗಿದೆ.
ಹರಾಜು ಹಾಕಲಾದ ಎಲ್ಲಾ ವಸ್ತುಗಳು ಬಿಕರಿಯಾಗುವಲ್ಲಿ ಯಶಸ್ವಿಯಾಗಿದೆ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಹೇಳಿದ್ದು, ಖರೀದಿದಾರರಿಂದ ರಿಸೀಪ್ಟ್ ದೊರಕಿದ ನಂತರ ಹರಾಜಿನಲ್ಲಿ ಸಂಗ್ರಹವಾದ ಒಟ್ಟು ಮೊತ್ತದ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.