ವಿದೇಶದಲ್ಲಿ ನೆಲೆಸಿದ್ದರೂ, ತಾಯ್ನಾಡನ್ನು ಮರೆಯದ ಅನಿವಾಸಿ ಭಾರತೀಯರು ತಾವು ಹುಟ್ಟಿ ಬೆಳೆದ ದೇಶಕ್ಕೆ ಏನಾದರೂ ಕೊಡುಗೆ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಅತ್ಯದ್ಭುತ ಯೋಜನೆಯೊಂದಿಗೆ ಇವರು ಕಾರ್ಯಪ್ರವೃತ್ತರಾಗಿದ್ದು, ಸರ್ಕಾರದ ಪರವಾಗಿ ಕಾರ್ಯ ಮಾಡಲಿದ್ದಾರೆ. ’ಏಕ್ ಕಾಲ್ ದೇಶ್ ಕೇ ನಾಮ್’ ಎಂಬ ಅಭಿಯಾನವನ್ನು ಇವರು ಆರಂಭಿಸಿದ್ದು, ಭಾರತವನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂಬುದೇ ಇವರ ಉದ್ದೇಶವಾಗಿದೆ.
‘ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ ಇಂಟರ್ನ್ಯಾಷನಲ್ ಯುಕೆ’ ಅಭಿಯಾನವನ್ನು ಆರಂಭಿಸಿದ್ದು, ಅನಿವಾಸಿ ಭಾರತೀಯರಿಗೆ ಸಾಮಾಜಿಕ ಜಾಲತಾಣವನ್ನು ಬಳಸಿ ಭಾರತದ ಪರವಾಗಿ ಕೆಲಸ ಮಾಡುವಂತೆ ಇದು ಹುರಿದುಂಬಿಸಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಟ್ರೆಂಡ್ಗಳು ಸೃಷ್ಟಿಯಾಗುತ್ತವೆ, ಅನಿವಾಸಿ ಭಾರತೀಯರು ಸಕಾರಾತ್ಮಕತೆಯ ಟ್ರೆಂಡ್ ಸೃಷ್ಟಿಸಲು ಸಜ್ಜಾಗಿದ್ದಾರೆ, ಆ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಭಾರತದ ಒಳಿತಿಗಾಗಿ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2014ರಂತೆಯೇ ಸ್ಪಷ್ಟ ಬಹುಮತದೊಂದಿಗೆ ಚುನಾಯಿಸಿ ಬರಬೇಕು ಎಂಬ ಉದ್ದೇಶ ಇವರದ್ದಾಗಿದೆ. ಇದು ನಮ್ಮ ಪ್ರಸ್ತುತ ಕರೆಯೂ ಆಗಿದೆ ಎನ್ನುತ್ತಾರೆ ಫ್ರೆಂಡ್ಸ್ ಆಫ್ ಇಂಡಿಯಾದ ಉಪ ಪ್ರಧಾನ ಕಾರ್ಯದರ್ಶಿ ಸಂತೋಷ್ ಗುಪ್ತಾ.
ಇಂದು, ನರೇಂದ್ರ ಮೋದಿಯವರ ನೇತೃತ್ವದ ನವ ಭಾರತದ ಉದಯವನ್ನು ವಿಶ್ವ ನೋಡುತ್ತಿದೆ. 2019ರ ಲೋಕಸಭಾ ಚುನಾವಣೆಯು ಟರ್ನಿಂಗ್ ಪಾಯಿಂಟ್ ಆಗಲಿದ್ದು, ಜನರಿಗೆ ಮೋದಿಯವನ್ನು ಮತ್ತೊಮ್ಮೆ ಗೆಲ್ಲಿಸುವ ಅವಕಾಶ ಸಿಕ್ಕಿದೆ. 2014ರಲ್ಲಿ ‘ಸಕ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷ ವಾಕ್ಯದೊಂದಿಗೆ ಮೋದಿಯವರು ಸ್ಪಷ್ಟ ಬಹುಮತ ಪಡೆದು ಬಂದಿದ್ದರು, ಈ ಭರವಸೆಯನ್ನು ಸಾಕಾರಗೊಳಿಸುವತ್ತ ಅವರು ಇಟ್ಟ ಹೆಜ್ಜೆ ಭಾರತ ಮಹತ್ವದ ಮೈಲಿಗಲ್ಲು ಸಾಧಿಸುವಂತೆ ಮಾಡಿದೆ.
ಮೂಲಸೌಕರ್ಯ ವಲಯ, ಭ್ರಷ್ಟಾಚಾರ ನಿರ್ಮೂಲನೆ, ಬಡತನ ನಿರ್ಮೂಲನೆ, ಬಲಿಷ್ಠ ಆರ್ಥಿಕತೆ, ತಾಯ್ನಾಡಿನ ಭದ್ರತೆ ಮತ್ತು ಸೇನೆ ಬಲಪಡಿಸುವಿಕೆ ಎಲ್ಲವೂ ಮೋದಿ ನೇತೃತ್ವದಲ್ಲಿ ನಡೆದಿದೆ ಮತ್ತು ನಡೆಯುತ್ತಿದೆ.
ಅನಿವಾಸಿ ಭಾರತೀಯರ ಮೇಲೆ ತಾಯ್ನಾಡಿನ ಋಣವಿದೆ, ಮೋದಿ ನೇತೃತ್ವದ ಬಿಜೆಪಿಯ ಮೇಲೆ ನಂಬಿಕೆ ಇರಿಸಿರುವ ಇವರು ತಮ್ಮ ಸಂದೇಶವನ್ನು ಜನರಿಗೆ ತಲುಪಿಸಲು ಬಯಸುತ್ತಿದ್ದಾರೆ. ಇದಕ್ಕಾಗಿ ’ಏಕ್ ಕಾಲ್ ದೇಶ್ ಕೆ ನಾಮ್’ ಅಭಿಯಾನವನ್ನು ಆರಂಭಿಸುತ್ತಿದ್ದಾರೆ. ಈ ಅಭಿಯಾನದಡಿ 2019ಕ್ಕೆ ಮತ್ತೊಮ್ಮೆ ಯಾಕೆ ಬಿಜೆಪಿ ಬರಬೇಕು ಎಂಬುದನ್ನು ನೋಡುವಂತೆ ಅನಿವಾಸಿ ಭಾರತೀಯರಿಗೆ ಈ ಅಭಿಯಾನದ ಮೂಲಕ ಕರೆಯನ್ನು ನೀಡಲಾಗುತ್ತದೆ.
ಈ ಅಂತಾರಾಷ್ಟ್ರೀಯ ಅಭಿಯಾನಕ್ಕೆ ಸಹಾಯ ಮಾಡುವ ಸಲುವಾಗಿ ವಿಶ್ವದಾದ್ಯಂತ ತಂಡಗಳನ್ನು ರಚನೆ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳನ್ನು, ಇನ್ನೋವೇಟಿವ್ ಸಂದೇಶಗಳ ಮೂಲಕ ಭಾರತೀಯರನ್ನು ತಲುಪುವ ಉದ್ದೇಶ ಇವರದ್ದಾಗಿದೆ. ಕಿರು ಸಾಕ್ಷ್ಯಚಿತ್ರ, ವಿಶ್ವದ ಪ್ರಮುಖ ನಗರಗಳಲ್ಲಿ ನೇರ ಪ್ರಸಾರಗಳ ರೆಕಾರ್ಡಿಂಗ್, ಇತ್ಯಾದಿಗಳನ್ನು ಈ ತಂಡ ಮಾಡಲಿದೆ. 2019ರ ಲೋಕಸಭಾ ಚುನಾವಣೆಯ ಭಾಗವಾಗಲು ಅನಿವಾಸಿ ಭಾರತೀಯರಿಗೆ ಇದೊಂದು ವೇದಿಕೆಯಾಗಲಿದೆ. ಅಲ್ಲದೇ ಮೋದಿ ನಿಜವಾದ ಅರ್ಥದಲ್ಲಿ ಓರ್ವ ಹೋರಾಟಗಾರ ಎಂಬುದನ್ನು ನಾವೀನ್ಯ ರೀತಿಯಲ್ಲಿ ವಿವರಿಸಲು ಇದು ಅವಕಾಶ ಕಲ್ಪಿಸಲಿದೆ.
ಬದಲಾಗುತ್ತಿರುವ ಭಾರತ, ವಿದೇಶದಲ್ಲಿ ವಾಸಿಸುತ್ತಿರುವ ಸಾವಿರಾರು ಭಾರತೀಯರಿಗೆ ಸ್ಫೂರ್ತಿಯೂ ಆಗಿದೆ. ಅವರು ತಮ್ಮ ಮೂಲ ಬೇರಿನ ಬಗ್ಗೆ ಹೆಚ್ಚು ಹೆಮ್ಮೆ ಪಡುವಂತಾಗಿದೆ. ಮೋದಿಯ ಬಲಿಷ್ಠತೆ, ಪ್ರಾಮಾಣಿಕತೆ, ಸಾಮರ್ಥ್ಯ ಅವರಲ್ಲಿ ಉತ್ಕೃಷ್ಟ ಭಾರತದ ಭರವಸೆಯನ್ನು ಮೂಡಿಸಿದೆ. ಮೋದಿ ಭಾರತದ ವರ್ಚಸ್ಸನ್ನು ವಿಶ್ವ ವೇದಿಕೆಯಲ್ಲಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ನೆರೆ ರಾಷ್ಟ್ರಗಳ ನಿರ್ವಹಣೆ ಇರಲಿ, ಭಾರತದ ಹಿತಾಸಕ್ತಿಯ ರಕ್ಷಣೆಯಿರಲಿ ಎಲ್ಲವನ್ನೂ ಮೋದಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಭಾರತ ಇನ್ನಷ್ಟು ಉತ್ಕೃಷ್ಟ ಮಟ್ಟಕ್ಕೇರಲು ಅವರು 2019 ರಲ್ಲೂ ಅಧಿಕಾರಕ್ಕೆ ಏರಬೇಕಾದ ಅನಿವಾರ್ಯತೆ ಇದೆ.
source: newsbharati
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.