ಸರಳ ಮತ್ತು ಪಾರದರ್ಶಕ ತೆರಿಗೆ ವ್ಯವಸ್ಥೆಯನ್ನು ತರುವಾಗಿ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಆನ್ಲೈನ್ ಪ್ರಕ್ರಿಯೆಯನ್ನು ಆರಂಭಿಸಿದೆ ಮತ್ತು ಮಾನವ ಮಧ್ಯಸ್ಥಿಕೆಯನ್ನು ಕಡಿಮೆಗೊಳಿಸಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ, ಸರ್ಕಾರದ ಪ್ರಯತ್ನದಿಂದಾಗಿ ತೆರಿಗೆ ಪ್ರಮಾಣ ಹೆಚ್ಚಳವಾಗಿದೆ. ತೆರಿಗೆ ಪಾವತಿದಾರರ ಸರ್ಕಾರದ ಮೇಲಿನ ಭರವಸೆ ಹೆಚ್ಚಾಗಿದೆ ಮತ್ತು ತಾವು ಕಟ್ಟುವ ತೆರಿಗೆ ದೇಶದ ಅಭಿವೃದ್ಧಿಗೆ, ಬಡವರ ಕಲ್ಯಾಣಕ್ಕಾಗಿ ಬಳಕೆಯಾಗುತ್ತಿದೆ ಎಂಬ ನಂಬಿಕೆ ಹುಟ್ಟುತ್ತಿದೆ. ಮೊನ್ನೆಯ ಬಜೆಟ್ನಲ್ಲಿ, ಪಾವತಿಗಳ ಕ್ಷಿಪ್ರ ಪ್ರಕ್ರಿಯೆ, ರಿಫಂಡ್ಸ್, ಫೇಸ್ಲೆಸ್ ಟ್ರಾನ್ಸ್ಸೆಕ್ಷನ್ಗಳನ್ನು ತೆರಿಗೆದಾರರಿಗಾಗಿ ಘೋಷಣೆ ಮಾಡಲಾಗಿದೆ. ‘ಕಳೆದ ವರ್ಷ ಶೇ.99.54ರಷ್ಟು ಆದಾಯ ತೆರಿಗೆ ಪಾವತಿಗಳನ್ನು ಪಾವತಿ ಮಾಡಿದಂತೆ ಸ್ವೀಕರಿಸಲಾಗಿದೆ. ನಮ್ಮ ಸರ್ಕಾರ ಈಗ ಮಹತ್ವದ, ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಿ ಆದಾಯ ತೆರಿಗೆ ಇಲಾಖೆಯನ್ನು ಲಭ್ಯತಾ ಸ್ನೇಹಿಯಾಗಿ ಪರಿವರ್ತಿಸಿದೆ. ಎಲ್ಲಾ ಪಾವತಿಗಳು 24 ಗಂಟೆಗಳಲ್ಲಿ ಪ್ರಕ್ರಿಯೆಗೊಳ್ಳುತ್ತಿದೆ, ರಿಫಂಡ್ಸ್ಗಳು ತ್ವರಿತವಾಗಿ ಆಗುತ್ತಿದೆ’ ಎಂದು ವಿತ್ತಸಚಿವ ಪಿಯೂಶ ಗೋಯಲ್ ಹೇಳಿದ್ದಾರೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ, 1.50 ಲಕ್ಷ ಕೋಟಿ ರೂಪಾಯಿಗಳ ಆದಾಯ ತೆರಿಗೆ ರಿಫಂಡ್ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ, ಸರ್ಕಾರ 4,200 ಕೋಟಿ ರೂಪಾಯಿಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ನ ಐಟಿ ಮೂಲಸೌಕರ್ಯ ಉನ್ನತೀಕರಣಕ್ಕಾಗಿ ಸರ್ಕಾರ ನೀಡಿದೆ, ಮಾನವ ಮಧ್ಯಸ್ಥಿತಿಕೆಯನ್ನು ಕಡಿಮೆಗೊಳಿಸಿ, ಪಾದರ್ಶಕತೆಯನ್ನು ತರುವ ಸಲುವಾಗಿ ಸಲ್ಲಿಸಲಾದ ರಿಟರ್ನ್ಸ್ಗಳನ್ನು ಬ್ಯಾಕ್ ಆಫೀಸ್ ಮೂಲಕ ಎಲೆಕ್ಟ್ರಾನಿಕ್ ಆಗಿ ಪ್ರಕ್ರಿಯೆಗೊಳಿಸಲಾಗುತ್ತಿದೆ ಎಂದು ಆದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ. ಬ್ಯಾಕ್ ಆಫೀಸ್ ಪರಿಶೀಲನೆಯು ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರದ ಅವಕಾಶಗಳನ್ನು ಕಡಿಮೆಗೊಳಿಸಲಿದೆ. ಈ ಪ್ರಕ್ರಿಯೆಯಲ್ಲಿ ಮುಖಾಮುಖಿ ಸಂಭಾಷಣೆ ಇರುವುದಿಲ್ಲ.
ಮೋದಿ ಸರ್ಕಾರವು, ಭಾರತದ ತೆರಿಗೆ ಮೂಲವನ್ನು ವೃದ್ಧಿಸಲು ಮತ್ತು ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಸಕ್ರಿಯ ಪ್ರಯತ್ನಗಳನ್ನು ನಡೆಸಿದೆ, ನೋಟ್ ಬ್ಯಾನ್, ಜಿಎಸ್ಟಿ, ಡಿಜಿಟಲ್ ಪಾವತಿ, ಬೇನಾಮಿ ಆಸ್ತಿ ಕಾಯ್ದೆ, ಶೆಲ್ ಕಂಪನಿಗಳ ಮುಚ್ಚುವಿಕೆ ಇತ್ಯಾದಿ ಸರಣಿ ಗಂಭೀರ ಕ್ರಮಗಳು ತೆರಿಗೆ ಸುಧಾರಣೆಗೆ ಸಾಕಷ್ಟು ಸಹಾಯ ಮಾಡಿವೆ. 2018ರ ಆರ್ಥಿಕ ಸಮೀಕ್ಷೆಯ ಪ್ರಕಾರ, ನೋಟ್ ಬ್ಯಾನ್ ಬಳಿಕ ಅಂದರೆ 2016ರ ನವೆಂಬರ್ನಿಂದ 2017ರ ನವೆಂಬರ್ವರೆಗೆ 10.1 ಮಿಲಿಯನ್ ಹೊಸ ಆದಾಯ ತೆರಿಗೆ ಪಾವತಿಗಳು ಸಲ್ಲಿಕೆಯಾಗಿವೆ. ಕಳೆದ ಆರು ವರ್ಷಗಳಲ್ಲಿ ತೆರಿಗೆ ಪಾವತಿಯ ಸರಾಸರಿ ಪ್ರಮಾಣ 6.2 ಮಿಲಿಯನ್ ಆಗಿತ್ತು. ನೋಟ್ ಬ್ಯಾನ್ ಬಳಿಕ ತೆರಿಗೆ ಪಾವತಿಯ ಸಂಖ್ಯೆಯಲ್ಲಿ 1.5 ಪಟ್ಟು ಹೆಚ್ಚಳವಾಗಿದೆ ಎಂಬುದು ತಿಳಿದು ಬರುತ್ತದೆ.
ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ”ಏಕ ಸಂಯೋಜಿತ ತೆರಿಗೆ ಜಿಎಸ್ಟಿಯ ಅನುಷ್ಠಾನದಿಂದ ನೇರ ತೆರಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಜಿಎಸ್ಟಿಗಾಗಿ ತಮ್ಮ ಬ್ಯುಸಿನೆಸ್ ಟರ್ನೋವರ್ಗಳನ್ನು ಮುಚ್ಚಿಟ್ಟವರು, ಈಗ ಆದಾಯ ತೆರಿಗೆಗಾಗಿ ತಮ್ಮ ತಲಾ ಆದಾಯವನ್ನು ಮುಚ್ಚಿಟ್ಟುಕೊಳ್ಳುವುದೇ ಕಷ್ಟ ಎಂಬ ಪರಿಸ್ಥಿತಿಗೆ ಬಂದಿದ್ದಾರೆ. ಕಳೆದ ವರ್ಷ, ಜಿಎಸ್ಟಿಯ ಮೇಲೆ ನೇರ ತೆರಿಗೆಯ ಪ್ರಭಾವ ಕಂಡಿರಲಿಲ್ಲ. ಆದರೆ ಜಿಎಸ್ಟಿ ಬಂದ ಬಳಿಕ, ಅದು ಸಾಕಷ್ಟು ಸ್ಪಷ್ಟವಾಗಿ ಕಾಣುತ್ತಿದೆ” ಎಂದಿದ್ದಾರೆ.
ಭಾರತ ಬ್ರಿಕ್ಸ್ ದೇಶಗಳ ಪೈಕಿ ಅತೀ ಕಡಿಮೆ ಟ್ಯಾಕ್ಸ್ ಟು ಜಿಡಿಪಿ ಅನುಪಾತ ಹೊಂದಿರುವ ದೇಶ. ಮೇಲಿನ ವರದಿಯ ಪ್ರಕಾರ, ಹೆಚ್ಚಿನ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಕಡಿಮೆ ‘ಟ್ಯಾಕ್ ಟು ಜಿಡಿಪಿ ಅನುಪಾತ’ವನ್ನು ಹೊಂದಿವೆ. ಅಭಿವೃದ್ಧಿಶೀಲ ದೇಶಗಳು ಅಭಿವೃದ್ಧಿ ಹೊಂದಿದ ದೇಶಗಳಾಗಲು, ನಾಗರಿಕರ ತೆರಿಗೆ ಅನುಸರಣೆ ಹೆಚ್ಚಿಸಬೇಕಾದ ಅನಿವಾರ್ಯತೆ ಇರುತ್ತದೆ. ಟ್ಯಾಕ್ಸ್ ಟು ಜಿಡಿಪಿ ಅನುಪಾತ ಕಡಿಮೆಯಾದರೆ, ದೇಶಕ್ಕೆ ಅಗತ್ಯ ಸೇವೆಗಳಾದ ಆರೋಗ್ಯ, ಶಿಕ್ಷಣವನ್ನು ನಾಗರಿಕರಿಗೆ ನೀಡುವುದು ಕಷ್ಟವಾಗುತ್ತದೆ. ಮಾನವ ಸಂಪನ್ಮೂಲವನ್ನು ಹೆಚ್ಚಿಸಲು, ಜೀವನ ಗುಣಮಟ್ಟವನ್ನು ಹೆಚ್ಚಿಸಲು ಈ ಸೇವೆಗಳ ಲಭ್ಯತೆ ಅತ್ಯಗತ್ಯ. ಆಯುಷ್ಮಾನ್ ಯೋಜನೆಯ ಮೂಲಕ ಭಾರತ ಸರ್ಕಾರ ರಾಷ್ಟ್ರೀಯ ಆರೋಗ್ಯ ಯೋಜನೆಯನ್ನು ಪರಿಚಯಿಸಿದೆ. ಹೆಚ್ಚಿದ ‘ಟ್ಯಾಕ್ಸ್ ಟು ಜಿಡಿಪಿ ಅನುಪಾತ’ ಸರ್ಕಾರದ ಖಜಾನೆಗೆ ಹೆಚ್ಚಿನ ಹಣ ಬರುವಂತೆ ಮಾಡುತ್ತದೆ. ಇದರಿಂದ ದೀನದಯಾಳ್ ಉಪಧ್ಯಾಯರು ಕಂಡಂತಹ ಕಲ್ಯಾಣ ರಾಜ್ಯಗಳ ನಿರ್ಮಾಣ ಸಾಧ್ಯವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.